ಸುದ್ದಿಗಳು

ತೆಂಗಿನ ಕಾಯಿ ಸಿಪ್ಪೆಯಿಂದ ತಯಾರಾಗುತ್ತೆ ಉತ್ಕೃಷ್ಟ ಗೊಬ್ಬರ | ಸುಮ್ಮನೆ ಕಸ ಎಂದು ಸುಟ್ಟು ಬಿಡಬೇಡಿ | ತ್ಯಾಜ್ಯ ನೀಡುತ್ತೆ ಉತ್ತಮ ಪೋಷಕಾಂಶ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕರಾವಳಿ ಜನರ ಜೀವನ ಶೈಲಿಯೇ ವಿಶೇಷ. ಇಲ್ಲಿನ ಸಂಸ್ಕೃತಿ, ಜೀವನ ಕ್ರಮ, ಭಾಷೆ ಎಲ್ಲವೂ ವೈವಿಧ್ಯತೆಯಿಂದ ಕೂಡಿದೆ. ಇನ್ನು ಕೃಷಿ ಕಡೆ ಬಂದ್ರೆ ಭತ್ತ ಪ್ರಧಾನ ಬೆಳೆಯಾಗಿತ್ತು. ಕಾಲ ಸರಿದಂತೆ ಅಡಿಕೆ ವಾಣಿಜ್ಯ ಬೆಳೆಯಾಗಿ ಇಡೀ ಕರಾವಳಿಯನ್ನು ಪಸರಿಸಿತು. ಅದರ ಜೊತೆಗೆ ತೆಂಗು, ರಬ್ಬರ್, ಕಾಳು ಮೆಣಸು, ಬಾಳೆ, ಕೋಕೋ.. ಹೀಗೆ ಒಂದಾ… ಎರಡ…. ಅಡಿಕೆ ಇಲ್ಲದೆ ಜೀವನ ಸಾಗಬಹುದು.. ಆದರೆ ಮನೆಗೆ ಎರಡಾದ್ರು ತೆಂಗಿನ ಮರ ಇಲ್ಲಾಂದ್ರೆ ಭಾರಿ ಕಷ್ಟ. ಮಾರಟಕ್ಕೆ ಅಲ್ಲದಿದ್ರು ಅಡುಗೆಗೆ ತೆಂಗಿನಕಾಯಿ ಬೇಕೇ ಬೇಕು. ಒಂದು ಗಡಿ ತೆಂಗಿನ ಕಾಯಿ ತುರಿ ಇದ್ರೆನೆ ನಮ್ಮ ಮನೆಯಲ್ಲೆಲ್ಲ ಸಾರು, ಗಸಿ, ಪಲ್ಯ..

Advertisement

ತೆಂಗಿನ ಕಾಯಿ ಸಿಪ್ಪೆ, ಗೆರಟೆ, ದಂಡು, ಗರಿ ಇಲ್ಲಾಂದ್ರೆ ಅಂಡೆ ಒಲೆನೂ ಹೊಗೆಯಡ್ತಾ ಇರ್ತದೆ. ಒಲೆಗೆ ಎರಡು ತೆಂಗಿನ ಸಿಪ್ಪೆ, ಗೆರಟೆ ಹಾಕಿದ್ರೆನೆ ನೀರು ಕಾಯೋದು. ಎಷ್ಟೇ ತೆಂಗಿನ ಮರ ಇರ್ಲಿ. ಹೆಚ್ಚಿನವರ ಮನೆಯಲ್ಲಿ ಅದರ ಕಸ ಸೇರೋದು ಒಲೆ ಉರಿಗೆ. ಇತ್ತೀಚೆಗೆ ಕೆಲವರು ತೆಂಗಿನ ಮರದ ತ್ಯಾಜ್ಯದಿಂದ ಗೊಬ್ಬರ ಮಾಡುವುದನ್ನು ಕಲಿತಿದ್ದಾರೆ. ಇಲ್ಲದಿದ್ರೆ ಬಹುಪಾಲು ಸೇರ್ತಿದ್ದಿದ್ದು ಒಲೆ ಉರಿಸಲು.. ಇಲ್ಲಾಂದ್ರೆ ಸುಡು ಮಣ್ಣು ಮಾಡಲು.

ತೆಂಗಿನ ಸಿಪ್ಪೆಯಿಂದ ಬಹಳ ಮೌಲ್ಯವರ್ಧಿತವಾದ ಗೊಬ್ಬರ ಮಾಡಲು ಸಾಧ್ಯ. ಇದು ಗಿಡಗಳಿಗೆ ಬಹಳ ಪೋಷಾಕಾಂಶವನ್ನು ನೀಡುತ್ತದೆ. ಈ ಬಗ್ಗೆ ಕೃಷಿ ತಜ್ಞರಾದ ಎಲ್ ಸಿ ನಾಗರಾಜ್ ಅವರು ಬಹಳ ಸಂಕ್ಷಿಪ್ತವಾಗಿ ವಿವರಿಸುತ್ತಾರೆ.

ತೆಂಗಿನಕಾಯಿ ಸುಲಿದುಕೊಂಡ ಮೇಲೆ ಉಳಿಯುವ ಜುಂಗನ್ನು ಸಾಮಾನ್ಯವಾಗಿ ಸುಟ್ಟು ಹಾಕಲಾಗುತ್ತದೆ ಇಲ್ಲವೇ ತೆಂಗಿನ ಬೆಳೆಗಾರರು ಇದನ್ನು ಬೇಕರಿಗಳಿಗೆ ಮಾರಿಬಿಡುತ್ತಾರೆ. ಬೇಕರಿ ಇಲ್ಲದ ಕಡೆ ಸುಮ್ಮನೆ ಕಸ ಎಂದು  ಬೆಂಕಿ ಹಚ್ಚಿ ಬಿಡುವ ಚಾಳಿ ಚಾಲ್ತಿಯಲ್ಲಿದೆ. ಸುಟ್ಟಾಗ ಬಿಡುಗಡೆಯಾಗುವ ಕಾರ್ಬನ್ ಡಯಾಕ್ಸೈಡು ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತಿರುವ ಗ್ರೀನ್ ಹೌಸ್ ಗ್ಯಾಸುಗಳ ಪೈಕಿ ಒಂದು.

ಆದರೆ ತೆಂಗಿನ ಕಾಯಿಯ ಜುಂಗಿನಿಂದ ತಯಾರಿಸಲಾಗುವ ಗೊಬ್ಬರ ಸಸ್ಯಗಳಿಗೆ ಬೇಕಾಗಿರುವ ಪೋಷಕಗಳ ಅಗರ, ತೆಂಗಿನ ಜುಂಗಿನಿಂದ ತಯಾರಿಸುವ ಗೊಬ್ಬರದಲ್ಲಿರುವ ತಾಮ್ರ ಸಸ್ಯಗಳ ಪೋಷಕಾಂಶ ಸಂಯೋಜ‌ನೆಯಲ್ಲಿ ಪ್ರೊಟೀನು  ವೇಗವರ್ಧಕವಾಗಿ ವರ್ತಿಸುತ್ತದೆ. ಎಲೆಕ್ಟ್ರಾನುಗಳ ವರ್ಗಾವಣೆ, ವಿನಿಮಯ ಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುವ ತಾಮ್ರವು ಪೋಷಕಾಂಶ ಬಹುಪಟಲದಲ್ಲಿ(Broad spectrum of Soil nutrients) ಕಿರು ಪೋಷಕಾಂಶಗಳ ಗುಂಪಿಗೆ ಸೇರಿದ್ದು, ಆಮ್ಲೀಯವಾದ ಮಣ್ಣುಗಳಲ್ಲಿ, ಅಂದರೆ ಮಣ್ಣಿನ ರಸಸಾರ 7.2 ಗಿಂತ ಕಡಿಮೆ ಇರುವ ಮಣ್ಣುಗಳಲ್ಲಿ ಉಂಟಾಗುವ ತಾಮ್ರದ ಕೊರತೆಯ ದೆಸೆಯಿಂದ ಸಸ್ಯದ ಎಲೆಗಳ ಒಳಗಿನ ನಾರಿನಂತ ನಾಳಗಳು ಹಳದಿ ಬಿಳುಚಿಕೊಂಡು ಕ್ಲೋರೊಸಿಸ್ ರೋಗ ಕಾಣಿಸಿಕೊಳ್ಳುತ್ತದೆ.

ತೆಂಗಿನ ಕಾಯಿ ಸುಲಿದ ಮೇಲೆ ಉಳಿಯುವ ಜುಂಗನ್ನು ನೆರಳಿನಲ್ಲಿ ರಾಶಿ ಹಾಕಿ ಅದರ ಮೇಲೆ ಜಾನುವಾರುಗಳ ಸಗಣಿ ಮತ್ತು ಗಂಜಲದ ತೆಳು ಬಗ್ಗಡವನ್ನು 15 ದಿನಕ್ಕೆ ಒಮ್ಮೆ ಸಿಂಪಡಿಸಿದರೆ, ನಾಲ್ಕು ಸಿಂಪಡಣೆ ಮುಗಿಯುವಾಗ್ಗೆ, ಅಂದರೆ 60 ದಿನಗಳಲ್ಲಿ ಪೋಷಕ ಸಮೃದ್ದವಾದ ಜುಂಗಿನ ಗೊಬ್ಬರ ಸಿಗುತ್ತದೆ. ಈ ಗೊಬ್ಬರವನ್ನು ಆಮ್ಲೀಯ ಮಣ್ಣನ್ನು ಸುಧಾರಿಸಲು ಬಳಸಬಹುದು.

ತೆಂಗಿನ ಜುಂಗು ಗೊಬ್ಬರದ ಇತರೆ ಪ್ರಯೋಜನ ಎಂದರೆ ಇದು ಮಣ್ಣಿನ ತೇವಾಂಶ ಧಾರಣ ಚೈತನ್ಯವನ್ನು ಹೆಚ್ಚಿಸಿ ಬೇಸಗೆಯಲ್ಲಿ ನೀರಾವರಿಯ ಆವರ್ತನೆ (Irrigation frequency) ಯನ್ನು ಗಣನೀಯವಾಗಿ ತಗ್ಗಿಸುತ್ತದೆ. ಈ ತೆಂಗಿನ ಜುಂಗನ್ನು ಗಿಡಗಳ ಬುಡದಲ್ಲಿ ಹರಡಿ ಅದರ ಮೇಲೆ ಆಗಾಗ ಜಾನುವಾರುಗಳ ತೆಳು ಸಗಣಿ ಹರಡಿದರೂ ಸಸ್ಯಗಳ ಕ್ಲೋರೋಸಿಸ್ ರೋಗ ಗುಣವಾಗುತ್ತದೆ.

ಮನೆಯ ಮುಂಭಾಗದಲ್ಲಿ ಬೆಳೆದಿರುವ ಗಿಡಗಳ ಪಾತಿಯಲ್ಲಿ   ತೆಂಗಿನ ಜುಂಗನ್ನು ಕಂತೆ ಕಟ್ಟಿ ಇಟ್ಟು ನೀರು ಹಾಕಿದರೆ 5 ದಿನಗಳ ಕಾಲ ತೇವ ಆರದಂತಿರುತ್ತದೆ. ತೆಂಗಿನ ಒತ್ತೊತ್ತಾದ ಜುಂಗಿನಲ್ಲಿ ಮೈಲ್ಮೈ ಒತ್ತಡ (Surface tension) ಇರುವುದರಿಂದ ವಾತಾವರಣದ ತಾಪಮಾನಕ್ಕೆ ತೇವ ಆವಿಯಾಗದಂತೆ ಉಳಿಯುತ್ತದೆ.

ಮೈಲ್ಮೈ ಒತ್ತಡ(Surface tension)   ಎಂದರೆ :

ಹಸಿಯಾದ ಹಂಚಿಕಡ್ಡಿಯನ್ನು ತೆಗೆದುಕೊಂಡ ಅದನ್ನು ಮೂರು ಮೂಲೆಗಳಿರುವಂತೆ ತ್ರಿಕೋನಾಕಾರವಾಗಿ ಮಡಿಚಿ, ಮಡಿಕೆಯ ನಡುವಿನ ತೆರವು ಸಂಕುಚಿತವಾದಷ್ಟೂ ಮೇಲ್ಮೈ ಒತ್ತಡ ಜಾಸ್ತಿ , ಎಷ್ಟು ಸಂಕುಚಿತವಾಗಿ ಸಾಧ್ಯವೋ ಅಷ್ಟು ತೆರವು ಇರುವಂತೆ ಮಡಿಚಿ ನೀರಿನಲ್ಲಿ ಅದ್ದಿ ಹೊರತೆಗೆಯಿರಿ; ನೀರಿನ ತೆಳುಪೊರೆಯೊಂದು ತ್ರಿಕೋನದ ನಡುವೆ ಬಂಧಿಯಾಗುತ್ತದೆ ; ಇದೇ ಮೇಲ್ಮೈ ಒತ್ತಡ. ತೆಂಗಿನ ಜುಂಗು ಒತ್ತೊತ್ತಾಗಿ ಹೆಣಿಗೆಯಾಗಿರುವುದರಿಂದ ಇದನ್ನು ಮಣ್ಣಿಗೆ ಬೆರೆಸಿದಾಗ ಮಣ್ಣಿನ ತೇವಾಂಶ ಧಾರಣೆ ಚೈತನ್ಯ ಸುಧಾರಿಸುತ್ತದೆ . ತೆಂಗಿನ ಜುಂಗನ್ನು ಸುಡಬೇಡಿ, ಸುಡುವವರಿಗೆ ಮಾರಿಬಿಡಬೇಡಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |

ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.

6 hours ago

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ

ಖಾಸಗಿಯವರಿಂದ ಒತ್ತುವರಿಯಾಗಿರುವ  ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…

12 hours ago

ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ

ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…

13 hours ago

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…

13 hours ago

ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿ ಸಂಯೋಗ | 5 ರಾಶಿಚಕ್ರಗಳಲ್ಲಿ ವಿಶೇಷ ಪ್ರಭಾವ |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ…

22 hours ago