ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ತೆಂಗು ಬೆಳೆಗಾರರಿಗೆ ಪಾಸಿಟಿವ್ ಸುದ್ದಿಯೊಂದು ಬರುತ್ತಿದೆ. ವಿಟ್ಲದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ (FPO) ತೆಂಗು ಬೆಳೆಗಾರರಿಗೆ ನೆರವಿಗೆ ಬರುತ್ತಿದೆ. ಕರೆ ಬಂದಲ್ಲಿಗೆ ತೆರಳಿ ತೆಂಗು ಕೊಯ್ಲು ಮಾಡುವ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಜ.2 ರಿಂದ ಈ ಕೆಲಸ ಆರಂಭವಾಗಲಿದೆ.
ಬಂಟ್ವಾಳ ತಾಲೂಕು ವಿಟ್ಲದಲ್ಲಿರುವ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯು ಈಗಾಗಲೇ ವಿವಿಧ ಕಾರ್ಯಗಳ ಮೂಲಕ ಗಮನ ಸೆಳೆದಿದೆ. ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪಿಂಗಾರ ತಂಡವು ಈಗಾಗಲೇ ಅಡಿಕೆ ಕೊಯ್ಲು ತಂಡವನ್ನು ರಚಿಸಿದೆ. ಈ ಮೂಲಕ ಅನೇಕ ಕೃಷಿಕರಿಗೆ ನೆರವಾಗಿದೆ. ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಯ ಬಹುಪಾಲು ಸಮಸ್ಯೆಯನ್ನು ನಿವಾರಣೆ ಮಾಡಿದೆ.ಕಳೆದ ವರ್ಷ ಈ ಸಂಸ್ಥೆ ಪೈಬರ್ ದೋಟಿಯ ಮೂಲಕ ಅಡಿಕೆ ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಮೂಲಕ 10 ತಿಂಗಳಲ್ಲಿ ಸುಮಾರು 30 ಲಕ್ಷ ವ್ಯವಹಾರ ನಡೆಸಿದೆ. ಅಷ್ಟೂ ರೈತರಿಗೆ ಸಹಾಯ ಮಾಡಿದೆ. ಇದೀಗ ಈ ಸಂಸ್ಥೆ ತೆಂಗು ಬೆಳೆಗಾರರಿಗೂ ನೆರವಾಗುತ್ತಿದೆ. ಅದೇ ಮಾದರಿಯಲ್ಲಿ ತಂಡವನ್ನು ರಚನೆ ಮಾಡುತ್ತಿದೆ. ಕರೆದಲ್ಲಿಗೆ ಹೋಗಿ ತೆಂಗು ಕೊಯ್ಲು ಮಾಡುವ ಯೋಜನೆಯನ್ನು ಸಿದ್ಧಪಡಿಸಿದೆ. ಕೇರಳದಲ್ಲಿ ಹಲೋ ನಾರಿಯಲ್ ತಂಡ ಈ ಮಾದರಿಯ ಕೆಲಸ ಮಾಡುತ್ತಿದ್ದು, ಈಚೆಗೆ ಕಾಸರಗೋಡು ಜಿಲ್ಲೆಯ ನೀರ್ಚಾಲಿನಲ್ಲೂ ಕೆಲಸ ಆರಂಭ ಮಾಡಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಂಗಾರ ಸಂಸ್ಥೆ ತೆಂಗು ಬೆಳೆಗಾರರಿಗೆ ನೆರವಾಗುತ್ತಿದೆ. ಈ ಪ್ರಯತ್ನ ರಾಜ್ಯದಲ್ಲೇ ಪ್ರಥಮ ಎನಿಸಿದೆ.
ಪಿಂಗಾರ ಸಂಸ್ಥೆಗೆ ಕರೆ ಮಾಡಿ ರೈತರು ಕೊಯ್ಲಿಗೆ ದಿನ ನಿಗದಿ ಮಾಡಬೇಕು. ನಿಗದಿತ ದಿನದಂದು ನಾಲ್ವರು ಕಾರ್ಮಿಕರ ಜೊತೆ ಓರ್ವ ಮ್ಯಾನೇಜರ್ ಓಮ್ನಿ ವಾಹನದಲ್ಲಿ ತೋಟಕ್ಕೇ ಬಂದು ತೆಂಗಿನ ಕೊನೆಗಳನ್ನು ಕತ್ತಿಯಿಂದ ಕಡಿದು ಕೊಡುತ್ತಾರೆ. ಒಂದು ಮರದ ಕೊಯ್ಲಿಗೆ 50 ರು. ನಿಗದಿಪಡಿಸಲಾಗಿದೆ. ಕನಿಷ್ಠ, ಗರಿಷ್ಠ ಮರಗಳ ಸಂಖ್ಯೆಯ ಮಿತಿ ಇಲ್ಲ, ಕರೆ ಬಂದಲ್ಲಿಗೆ ತೆರಳಿ ವರ್ಷಪೂರ್ತಿ ತಂಡ ಕಾರ್ಯಾಚರಿಸಲಿದೆ ಎಂದು ಹೇಳುತ್ತಾರೆ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ರಾಮ್ ಕಿಶೋರ್ ಮಂಚಿ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…