ತೆಂಗಿನಕಾಯಿ ಮಾರುಕಟ್ಟೆಯಲ್ಲಿ ಮತ್ತೆ ಸಂಚಲನ ಕಂಡುಬಂದಿದೆ. ಕೆಲವು ಸಮಯಗಳ ಹಿಂದೆ ಕೆಜಿಗೆ 50 ರೂಪಾಯಿ ತಲಪಿದ್ದ ಧಾರಣೆ ಇದೀಗ ಮತ್ತೆ 50 ರೂಪಾಯಿ ತಲಪಿದೆ. ಸದ್ಯ ಹಸಿ ತೆಂಗಿನಕಾಯಿಗೆ 49 ರೂಪಾಯಿ ಹಾಗೂ ಒಣ ತೆಂಗಿನಕಾಯಿಗೆ 50 ರೂಪಾಯಿಗೆ ಖರೀದಿ ನಡೆದಿದೆ.
ಸೆಪ್ಟಂಬರ್ ಹಾಗೂ ಅಕ್ಟೋಬರ್ ಸುಮಾರಿಗೆ ಕೆಜಿಗೆ 40-50 ರೂಪಾಯಿ ಆಸುಪಾಸಿನಲ್ಲಿದ್ದ ತೆಂಗಿನ ಕಾಯಿ ಮಾರುಕಟ್ಟೆ ಈಗ ಮತ್ತೆ 50 ರೂಪಾಯಿಗೆ ಏರಿಕೆಯಾಗಿದೆ. ಕೇರಳದಲ್ಲೂ ಧಾರಣೆ ಏರಿಕೆ ಕಂಡಿದೆ. ಗ್ರಾಹಕರಿಗೆ 60-65 ರೂಪಾಯಿಗೆ ಮಾರಾಟವಾಗುತ್ತಿದೆ. ಕರ್ನಾಟಕ,ಕೇರಳ ಹಾಗೂ ತಮಿಳುನಾಡಿನಲ್ಲಿ ತೆಂಗಿನ ಬೆಳೆ ಹೆಚ್ಚು ಇರುವ ಪ್ರದೇಶವಾಗಿದೆ. ಈ ಮೂರು ರಾಜ್ಯಗಳಲ್ಲೂ ತೆಂಗಿನ ಇಳುವರಿ ಕಡಿಮೆಯಾಗಿದೆ. ಈ ಬಾರಿಯ ಬೇಸಗೆಯಲ್ಲಿ ಎಳನೀರು ಮಾರಾಟ ಹೆಚ್ಚಾಗಿದೆ. ಈ ಕಾರಣದಿಂದ ತೆಂಗಿನ ಕಾಯಿ ಇಳುವರಿ ಕಡಿಮೆಯಾಗಿದೆ. ಪ್ರಸುತ್ತ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ತೆಂಗಿನ ಕಾಯಿಗಳ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಕಂಡಿದೆ.
ಈಗಾಗಲೇ ತಾಪಮಾನ ಏರಿಕೆ ಇರುವುದರಿಂದ ಎಳನೀರಿಗೂ ಬೇಡಿಕೆ ಇದೆ. ಹೀಗಾಗಿ ಎಳನೀರು ಧಾರಣೆಯೂ ಏರಿಕೆಯಾಗಿದೆ. ಎರಡು ತಿಂಗಳಿನಿಂದಲೇ ಎಳನೀರಿಗೆ ಬೇಡಿಕೆ ಇದೆ. ಈ ಕಾರಣದಿಂದ 40-45 ರೂಪಾಯಿ ಇದ್ದ ಧಾರಣೆ ಈಗ 50 ರೂಪಾಯಿ ತಲಪಿದೆ. ಇದರ ಜೊತೆಗೇ ತೆಂಗಿನಕಾಯಿಗೂ ಧಾರಣೆ ಏರಿಕೆಯಾಗಿದೆ.
ಇನ್ನು ತೆಂಗಿನಕಾಯಿಗೆ ಬೇಡಿಕೆಯ ಸಮಯ. ಶಬರಿಮಲೆ ಯಾತ್ರಿಕರು ಸೇರಿದಂತೆ ಹಲವು ಹಬ್ಬಗಳು ಮುಂದಿನ ದಿನಗಳಲ್ಲಿ ಇರಲಿದೆ. ಬೇರೆ ರಾಜ್ಯಗಳಿಂದಲೂ ತೆಂಗಿನಕಾಯಿ ತರಿಸಿಕೊಳ್ಳುವಷ್ಟು ಬೆಳೆಯೂ ಕಡಿಮೆ ಇದೆ. ಹೀಗಾಗಿ ಈ ಪೂರೈಕೆಯ ಕೊರತೆಯು ಮುಂದಿನ ಒಂದೆರಡು ತಿಂಗಳು ಇರುವ ಸಾಧ್ಯತೆ ಇದೆ.
ಸಂಜೆಯ ಹೊತ್ತು ತೋಟದ ಅಂಚು ಅಥವಾ ಪಕ್ಕದ ಕಾಡಿನಲ್ಲಿ ಸಂಚರಿಸುತ್ತಿದ್ದರೆ ಅಲ್ಲೆಲ್ಲ ಜೇನು…
ಅಡುಗೆಯ ಮಾಪಕಗಳು ಒಂದೊಂದು ಮನೆಗೆ ಒಂದೊಂದು ರೀತಿ ಇರುತ್ತವೆ. ಅವುಗಳ ಕಡೆಗೆ ನಿಗಾ…
ದೇವರ ದರ್ಶನಕ್ಕೆ ಗಂಟೆಗಟ್ಟಲೆ ಕಾಯುವ ಭಕ್ತರ ದಂಡನ್ನು ನೋಡಿದಾಗ ಹಿಂದೂ ಧರ್ಮಕ್ಕೆ ಯಾವ…
ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಜಾನುವಾರುಗಳಿಗೆ ವಿಮಾ ಸೌಲಭ್ಯ ನೀಡುವ…
ಏ 10 ರಿಂದ ಶ್ರೀ ದೇವರ ಪೇಟೆ ಸವಾರಿ ಆರಂಭಗೊಂಡು ಏ 18ರ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ . 9535156490