Advertisement
Exclusive - Mirror Hunt

ʼಕೊಕೊ ಕ್ರೀಂ’ ಗೆ ಬೇಡಿಕೆ…! ಇದು ರೈತನ ಇನೋವೇಶನ್ – ಇಲ್ಲಿ ಡೈರಿ ಇಲ್ಲ… ಕೆಮಿಕಲ್ ಇಲ್ಲ…ತೆಂಗಿನ ಹಾಲು ಮಾತ್ರಾ..!

Share

ತೆಂಗು ಮೌಲ್ಯವರ್ಧನೆ ಹೇಗೆ? ಮತ್ತು ಯಾಕೆ ಅಗತ್ಯ?  ಈ ಪ್ರಶ್ನೆ ಇಂದು ಕೃಷಿ ವಲಯದಲ್ಲಿ ಎಲ್ಲೆಡೆ ಕೇಳಿಬರುತ್ತಿದೆ. ರೈತರು ಕೃಷಿಯಲ್ಲೇ ಉಳಿಯಬೇಕಾದರೆ, ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವುದು ಮಾತ್ರವೇ ಶಾಶ್ವತ ಪರಿಹಾರ ಎಂಬ ನಂಬಿಕೆಯಿಂದ ಪ್ರಯತ್ನ ಆರಂಭಿಸಿದ ಒಬ್ಬ ಕೃಷಿಕ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮೂಲದ ಸುರೇಶ್‌ ಭಟ್ ಅವರು ತೆಂಗಿನ ಮೌಲ್ಯವರ್ಧನೆ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಕೃಷಿಕನಾಗಿ ಉದ್ಯಮ ಆರಂಭಿಸಿದ ಅವರು, ಇಂದು ಮೈಸೂರಿನಲ್ಲಿ ತೆಂಗು ಆಧಾರಿತ ಹಲವು ನವೀನ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಮೈಸೂರಿನಲ್ಲಿ ಆರಂಭಿಸಿದ ವೆಗನ್‌ ಫ್ರೋಜನ್‌ ಡೆಸರ್ಟ್‌ ಸೇರಿದಂತೆ ಹಲವು ತೆಂಗು ಉತ್ಪನ್ನಗಳು ಉದ್ಯಮವಾಗಿ ಬೆಳೆದಿದೆ. ಇದು ಕೇವಲ ಉದ್ಯಮ ಕಥೆಯಲ್ಲ — ಕೃಷಿ ಭವಿಷ್ಯದ ಮಾದರಿಯೂ ಹೌದು.

“ಮೌಲ್ಯವರ್ಧನೆಯ ಪ್ರೇರಣೆ” ಒಂದು ಲೇಖನ  ಪ್ರೇರಣೆ : ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಮೌಲ್ಯವರ್ಧನೆ ಕುರಿತ ಲೇಖನ ಓದಿದ ಬಳಿಕ ಸುರೇಶ್‌ ಭಟ್ ಅವರ ಚಿಂತನೆಗೆ ಹೊಸ ದಿಕ್ಕು ಸಿಕ್ಕಿತು. “ರೈತರು ಕೃಷಿಯಲ್ಲೇ ಉಳಿಯಬೇಕಾದರೆ ಮೌಲ್ಯವರ್ಧನೆ ಅನಿವಾರ್ಯ” ಎಂಬ ಕೆನ್‌ಲವ್‌ ಅವರ ಮಾತು-ವಿಚಾರವು ಅವರನ್ನು ಪ್ರಯೋಗಗಳತ್ತ ಕರೆದೊಯ್ದಿತು.

ಅದೇ ಪ್ರೇರಣೆಯಿಂದ ಅವರು ನವೋದ್ಯಮ ಪ್ರಶಸ್ತಿ ಕೂಡ ಪಡೆದರು. ನಂತರ ಅನಿವಾರ್ಯ ಕಾರಣಗಳಿಂದ ಮೈಸೂರು ಕಡೆಗೆ ಸ್ಥಳಾಂತರಗೊಂಡ ಅವರು, ಅಲ್ಲಿಂದಲೇ ತಮ್ಮ ತೆಂಗು ಮೌಲ್ಯವರ್ಧನೆ ಉದ್ಯಮವನ್ನು ಆರಂಭಿಸಿದರು.

ಸುರೇಶ್‌ ಭಟ್

ವರ್ಜಿನ್‌ ಕೊಕೊನಟ್‌ ಆಯಿಲ್‌ನಿಂದ ‘ಝೀರೋ ವೇಸ್ಟೇಜ್‌’ ಕಾನ್ಸೆಪ್ಟ್‌ :  ವರ್ಜಿನ್‌ ಕೊಕೊನಟ್‌ ಆಯಿಲ್‌ ತಯಾರಿಕೆ ಆರಂಭಿಸಿದಾಗ, ತೆಂಗಿನ ಕಾಯಿಯಿಂದ ದೊರೆಯುವ ಎಣ್ಣೆಯ ಪ್ರಮಾಣ ಕಡಿಮೆ ಎಂಬುದು ಸ್ಪಷ್ಟವಾಯಿತು. ಇದರಿಂದ ತೆಂಗಿನ ಪ್ರತಿಯೊಂದು ಅಂಶವನ್ನೂ ಉಪಯೋಗಿಸುವ “ಝೀರೋ ವೇಸ್ಟೇಜ್‌” ಪರಿಕಲ್ಪನೆ ರೂಪುಗೊಂಡಿತು.

ಇದರ ಫಲವಾಗಿ ಈಗ ಅವರು ಹತ್ತಾರು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ವಿಶೇಷವಾಗಿ “ಕೊಕೊ ಕ್ರೀಂ” ಎಂಬ 100% ವೆಗನ್‌ ಫ್ರೋಜನ್‌ ಡೆಸರ್ಟ್‌ ಮಾರುಕಟ್ಟೆಯಲ್ಲಿ  ಬೇಡಿಕೆ ಪಡೆದಿದೆ.

100% ವೆಗನ್‌ – ಫ್ರೂಟ್‌ ಬೇಸ್‌ಡ್‌ ಫ್ರೋಜನ್‌ ಡೆಸರ್ಟ್‌ : ಇಂದಿನ ಆರೋಗ್ಯ ಜಾಗೃತ ಯುಗದಲ್ಲಿ ಜನರು ಹೆಚ್ಚು ನೈಸರ್ಗಿಕ ಹಾಗೂ ಸಸ್ಯಆಧಾರಿತ ಆಹಾರಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ತೆಂಗಿನ ಹಾಲು ಮತ್ತು ನೈಸರ್ಗಿಕ ಹಣ್ಣಿನ ಪಲ್ಪ್‌ನಿಂದ ತಯಾರಿಸಲಾದ ‘ಕೊಕೊ ಕ್ರೀಂ’ ಹೊಸ ಪರಿಕಲ್ಪನೆಯಾಗಿ ಹೊರಹೊಮ್ಮಿದೆ. ಯಾವುದೇ ಕೃತಕ ಪದಾರ್ಥಗಳಿಲ್ಲ, ರಾಸಾಯನಿಕ ಬಳಕೆ ಇಲ್ಲ, ನೀರು ಸೇರಿಸಿ ಹದಗೆಡಿಸಿದ ಅಂಶಗಳಿಲ್ಲ, ಪ್ರೀಮಿಕ್ಸ್‌ ಅಥವಾ ಡೈರಿ ಉತ್ಪನ್ನಗಳಿಲ್ಲದೆ ಇದನ್ನು ತಯಾರು ಮಾಡುತ್ತಾರೆ.‌

ತೆಂಗಿನ ಹಾಲು ಸ್ವಾಭಾವಿಕವಾಗಿ ಸಮೃದ್ಧವಾಗಿರುವುದರಿಂದ, ಕಡಲೆ ಅಥವಾ ಧಾನ್ಯ ಹಾಲಿನಂತೆ ನೆನೆಸುವ ಅಥವಾ ನೀರು ಸೇರಿಸುವ ಅಗತ್ಯವಿಲ್ಲ. ಇದರಿಂದ ಇದು ಹೆಚ್ಚು ನೈಸರ್ಗಿಕ, ಹೆಚ್ಚು ಪೋಷಕಾಂಶಯುಕ್ತ ಹಾಗೂ ಉತ್ತಮ ಟೆಕ್ಸ್ಚರ್‌ ಹೊಂದಿದ ಸಸ್ಯ ಹಾಲು ಎಂದು ಪರಿಗಣಿಸಲಾಗುತ್ತದೆ.

ತೆಂಗಿನಿಂದ ಹತ್ತಾರು ಉತ್ಪನ್ನಗಳು:  ಸುರೇಶ್‌ ಭಟ್ ಅವರ ಪ್ರಯೋಗಗಳು ಕೇವಲ ಐಸ್‌ ಕ್ರೀಂ ಮಟ್ಟದಲ್ಲೇ ನಿಲ್ಲಲಿಲ್ಲ. ಅವರು ತೆಂಗಿನ ಸಂಪೂರ್ಣ ಬಳಕೆಯತ್ತ ಗಮನಹರಿಸಿ ಹಲವು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ತೆಂಗಿನ ಹಾಲಿನ ಪಾನೀಯಗಳು, ತೆಂಗಿನ ನೀರಿನಿಂದ ವಿನೇಗರ್‌, ವೈನ್‌, ಒಣ ತೆಂಗಿನ ಪೌಡರ್‌ ಮತ್ತು ಕುಕೀಸ್‌, ಡ್ರಾಗನ್‌ ಫ್ರೂಟ್‌, ನೆಲ್ಲಿಕಾಯಿ, ಹಲಸು ಪಲ್ಪ್‌ ಪಾನೀಯಗಳು, ಮೊಟ್ಟೆ ಹಣ್ಣು (ಹಳದಿ ಚಿಕ್ಕು) ಐಸ್‌ ಕ್ರೀಂ, ಅಡಿಕೆ ಚೊಗರು ಆಧಾರಿತ ಪ್ರಯೋಗಗಳು ಕೂಡಾ ಮಾಡಿದ್ದಾರೆ. ಅಡಿಕೆಯನ್ನು ಹಿಂಡಿ ಚೊಗರು ತೆಗೆಯುವ ಪ್ರಯತ್ನ ಮಾಡಿದ್ದೇವೆ.  ಅದರಿಂದಲೂ ಐಸ್‌ ಕ್ರೀಂ, ತೆಂಗಿನ ಹಾಲಿನ ಜೊತೆಗೂ ಸೇರಿಸಿ ಪ್ರಯೋಗ ನಡೆದಿದೆ. ಚೊಗರು ತೆಗೆದು ನಂತರ ಬೇಯಿಸಿದಾಗ‌ ಅಡಿಕೆ ಚಾಕೋಲೇಟ್‌ ಗೆ ಅತ್ಯುತ್ತಮವಾಗುತ್ತದೆ. ಇನ್ನೂ ಈ ಬಗ್ಗೆ ಕೆಲಸವಾಗಬೇಕು. ಈ ಬಗ್ಗೆ ಇನ್ನಷ್ಟು ಸಂಶೊಧನೆ ನಡೆಯಬೇಕಿದೆ ಎನ್ನುತ್ತಾರೆ ಸುರೇಶ್. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ತೆಂಗಿನ ನೀರು ಬೇಗ ಹಾಳಾಗುವುದರಿಂದ, ಅದರ ಸಂಸ್ಕರಣೆ ಮಾಡಿ ಪಲ್ಪ್‌ ಜೊತೆಗೆ ಮಿಶ್ರಣ ಮಾಡುವ ಮೂಲಕ ಉತ್ತಮ ರುಚಿಯ ಪಾನೀಯಗಳನ್ನು ತಯಾರಿಸಲಾಗಿದೆ. ಕೊಕೊನೆಟ್‌ ವರ್ಜಿನ್‌ ಆರಂಭಿಸಿ 14 ವರ್ಷ ಆಯಿತು. ಹೀಗೆ ಮಾಡುತ್ತಿದ್ದಾಗ ತೆಂಗಿನಲ್ಲಿ ಹಾಳಾಗುವ ಅಂಶಗಳ ಬಗ್ಗೆ ಗಮನ ಕೊಟ್ಟು 7-8 ವರ್ಷಗಳ ಪ್ರಯತ್ನದಲ್ಲಿ ತೆಂಗಿನ ಹಾಲಿನ ಮೂಲಕ ಕೊಕೋ ಕ್ರೀಂ ಮಾಡುವ ಕೆಲಸ ಆಯ್ತು. ಕೊಕೊನಟ್‌ ವೈನ್‌ ಪನ್ನೀರ್‌, ಮೈದಾ ಬಳಸದೆ ಬನ್‌ ಕೂಡಾ ಮಾಡುವ ಪ್ರಯತ್ನ ಕೂಡಾ ಮಾಡಿದ್ದೇವೆ.

ರೈತರಿಂದ ನೇರ ಖರೀದಿ – ಮೌಲ್ಯವರ್ಧನೆಗೆ ಹೊಸ ಮಾರುಕಟ್ಟೆ :  ಸದ್ಯ ಅವರು ತೆಂಗಿನ ಕಾಯಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುವುದರ ಜೊತೆಗೆ ಮೌಲ್ಯವರ್ಧನೆ ಮೂಲಕ ಹೊಸ ಮಾರುಕಟ್ಟೆಯೂ ಸಿಗುತ್ತಿದೆ.

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೋಟೆಲ್‌, ಮೇಳಗಳಲ್ಲಿ ಇವರ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ಮೌಲ್ಯವರ್ಧನೆ – ಕೃಷಿಯ ಭವಿಷ್ಯದ ಮಾರ್ಗ :  ಒಂದು ಉತ್ಪನ್ನದ ಮೌಲ್ಯವರ್ಧನೆ ಹಿಂದೆ ಅಪಾರ ಪರಿಶ್ರಮ ಇದ್ದರೂ, ಕೊನೆಯಲ್ಲಿ ಯಶಸ್ಸು ಸಿಗುತ್ತದೆ ಎಂಬುದು ಸುರೇಶ್‌ ಭಟ್ ಅವರ ಅನುಭವ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ರೈತರಿಗೆ ಹೆಚ್ಚುವರಿ ಆದಾಯ,  ಮಾರುಕಟ್ಟೆಯಲ್ಲಿ ಹೊಸ ಬೇಡಿಕೆ,  ಕಡಿಮೆ ಹೂಡಿಕೆಯಲ್ಲಿ ಉದ್ಯಮಾವಕಾಶ,  ಕೃಷಿಯಲ್ಲಿ ಯುವಕರನ್ನು ಉಳಿಸುವ ಸಾಧ್ಯತೆ ಇದೆ ಎನ್ನುವುದು ಸುರೇಶ್‌ ಅವರ ಅಭಿಪ್ರಾಯ.  ವೆಗನ್‌ ಫ್ರೋಜನ್‌ ಡೆಸರ್ಟ್‌ ಕ್ಷೇತ್ರ ಮುಂದಿನ ದಿನಗಳಲ್ಲಿ ದೊಡ್ಡ ಮಾರುಕಟ್ಟೆಯಾಗಿ ಬೆಳೆಯುವ ಸಾಧ್ಯತೆ ಕೂಡಾ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಒಂದು ವಸ್ತುವಿನ ಮೌಲ್ಯವರ್ಧನೆಯ ಹಿಂದೆ ಹೋದಾಗ ಅದರಲ್ಲಿ ಸಾಕಷ್ಟು ಪರಿಶ್ರಮ ಇರುತ್ತದೆ. ಆದರೆ ಕೊನೆಯಲ್ಲಿ ಯಶಸ್ಸು ಕೂಡಾ ಇರುತ್ತದೆ. ಇದರಿಂದ ರೈತರಿಗೆ ಅನುಕೂಲವೂ ಇದೆ. ಮಾರುಕಟ್ಟೆಯಲ್ಲಿ ಹೊಸದು ಆಗುತ್ತದೆ. ಒಮ್ಮಲೇ ಬೇಡಿಕೆ, ವ್ಯಾಪ್ತಿ ವಿಸ್ತಾರ ಮಾಡಿಕೊಳ್ಳಲೂ ಕಷ್ಟ ಇರುತ್ತದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಾಗ ಮೌಲ್ಯವರ್ಧನೆ, ರೈತರಿಗೆ ನೆರವು ಎರಡೂ ಆಗುತ್ತದೆ. ನಮ್ಮ ಪ್ರಯತ್ನಕ್ಕೂ ಖುಷಿಯಾಗುತ್ತದೆ ಎನ್ನುತ್ತಾರೆ ಸುರೇಶ್‌ ಭಟ್.‌

ಸುರೇಶ್‌ ಭಟ್‌ ಸಂಪರ್ಕಕ್ಕೆ – 9341117525

Suresh Bhat from Mundgod has built a successful coconut value addition enterprise in Mysuru by developing multiple innovative products including virgin coconut oil, vegan coconut cream frozen dessert, beverages and powders. His zero-waste approach ensures full utilization of coconut while creating better market opportunities for farmers. With rising global demand for plant-based foods, coconut value addition is emerging as a sustainable agribusiness model.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…

11 hours ago

ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!

ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…

2 days ago

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…

2 days ago

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…

2 days ago

ರಸ್ತೆ ಬದಿ ತ್ಯಾಜ್ಯ ಎಸೆತಕ್ಕೆ ಎಫ್‌ಐಆರ್ | ʼನಾನು ಎಸೆದಿಲ್ಲ’ ಎಂದರೂ ಸಿಕ್ಕ ಸಾಕ್ಷಿ…!

ರಸ್ತೆ ಬದಿ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಅಂಗಡಿ ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.…

2 days ago

2026ರಲ್ಲಿ ಮಳೆ ಕಡಿಮೆ…? ಎಲ್‌ನಿನೊ ಪರಿಣಾಮದಿಂದ ಭಾರತಕ್ಕೆ ಸಾಮಾನ್ಯಕ್ಕಿಂತ ಕಡಿಮೆ ಮಳೆ…!

2026ರಲ್ಲಿ ಭಾರತದಲ್ಲಿ ಮಳೆಗಾಲ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಮುನ್ಸೂಚನೆ…

3 days ago