ಸೂರ್ಯನಿಗೆ ಟಾರ್ಚ್ ಹಾಕ್ತಿರಾ ಅನ್ನೋ ಮಾತು ನೀವು ಕೇಳಿರಬಹುದು. ಇಲ್ಲಿ ಅದೇ ಕತೆ ಆಗಿದೆ. ಕಾಫಿನಾಡು ಚಿಕ್ಕಮಗಳೂರಿಗೆ ಕಾಫಿ ಸಪ್ಲೈ ಮಾಡ್ತಿದ್ದಾರೆ ಇಲ್ಲೊಬ್ಬ ಕೃಷಿಕ. ಅದು ಕರಾವಳಿಯ ಶಿರಸಿಯಿಂದ. ಹೌದು, ಆಶ್ಚರ್ಯ ಆದ್ರೂ ಇದು ನಿಜ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಫಿ ಘಮಲು ಜೋರಾಗಿದೆ. ಕಾಫಿ (Coffee) ಈ ಮಲೆನಾಡಿಗೆ ಹೊಸತಲ್ಲ. ಹಿಂದೊಮ್ಮೆ ಕಾವೇರಿ ಕಾಫಿ ತಳಿ ಇತ್ತು, ನಂತರ ಹೋಯಿತು. ಇದೀಗ ಟನ್‌ಗಟ್ಟಲೆ ಕಾಫಿಯನ್ನು ಬೆಳೆಯುವ ಪ್ರಯತ್ನವನ್ನು ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಗಡಿ ಕೈ ಮೂಲದ ರಾಮಚಂದ್ರ ಹೆಗಡೆಯವರು ಮಾಡಿದ್ದಾರೆ.
20 ಎಕರೆ ಪ್ರದೇಶದಲ್ಲಿ ಕಾಫಿ ಬೆಳೆ: ಮಲೆನಾಡ ಹೆಬ್ಬಾಗಿಲಾದ ಶಿರಸಿಗೆ ಹೆಜ್ಜೆ ಇಡುವ ಮುನ್ನ ಮಲೆನಾಡಿನ ಸೆರಗಾದ ಮುಂಡಗೋಡನ್ನು ದಾಟಬೇಕು. ಈ ಮುಂಡಗೋಡಿಂದ 30 ಕಿಲೋಮೀಟರ್ ದೂರದ ತಾಲೂಕಿನ ಮಳಗಿ ಗ್ರಾಮದಲ್ಲಿ ಕಾಫಿಯನ್ನು ಉಪಬೆಳೆಯಾಗಿ ಪ್ರಯತ್ನಿಸಿದ ಇವರು, ಈಗ ಅರೇಬಿಕ್ ಹಾಗೂ ರೊಬಸ್ಟಾ ಎರಡು ತಳಿಯನ್ನು 20 ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಕೇದಾರ ತೋಟ ಎಂಬ ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಈ ಬೆಳೆಯು ಈಗ ಕಾಫಿ ಹಬ್ ಆದ ಚಿಕ್ಕಮಗಳೂರನ್ನು ತಲುಪುತಿದೆ.
ಚಿಕ್ಕಮಗಳೂರಿಗೆ ಕಾಫಿ ಸರಬರಾಜು: ಇಲ್ಲಿನ ವಾತಾವರಣಕ್ಕೆ ಕಾಫಿ ಚೆನ್ನಾಗಿ ಒಗ್ಗುತ್ತಿದ್ದು ಅಧಿಕ ಇಳುವರಿಯನ್ನು ನೀಡುತ್ತಿದೆ, ಇನ್ನೊಂದು ವಿಶೇಷವೇನೆಂದರೆ ಇಲ್ಲಿನ ಕಾಫಿಯನ್ನು ಕದಂಬ ಮಾರ್ಕೆಟಿಂಗ್ ಸೊಸೈಟಿ ಮೂಲಕ ಚಿಕ್ಕಮಗಳೂರಿನ ಮೂಲದ ಕಂಪೆನಿಗಳು ಖರೀದಿಸುತ್ತವಂತೆ. ಕಾಫಿನಾಡಿಗೇ ಕಾಫಿ ಸರಬರಾಜು ಮಾಡುವಷ್ಟು ಕಾಫಿ ಬೆಳೆಯ ಕ್ರಾಂತಿ ಉತ್ತರ ಕನ್ನಡದಲ್ಲಿ ಆಗಿದ್ದು ಇದೇ ಮೊದಲು.
ಹೆಚ್ಚಿನ ಲಾಭ : ವಾರ್ಷಿಕವಾಗಿ 25-50 ಟನ್‌ನಷ್ಟು ಕಾಫಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮೊದಲು ಇದ್ದ ಮಾವಿಗಿಂತ ಹೆಚ್ಚಿನ ಲಾಭವನ್ನು ಈ ಬೆಳೆ ಕೊಡುತ್ತಿದೆ. ಹಾಗೆಯೇ ಈ ಪ್ಲಾಂಟೇಶನ್ ಆಗಿದ್ದು ಕೇವಲ 5 ವರ್ಷದ ಹಿಂದೆ ಅಂದರೆ 2018ರಲ್ಲಿ. ಅಲ್ಲಿ ತನಕ ಇಲ್ಲಿದೆ ಕಾಫಿ ಘಮಲು ಈಗ ಜೋರಾಗಿದೆ. ಸದ್ಯದರಲ್ಲಿಯೇ ಕಾಫಿ ಉತ್ತರ ಕನ್ನಡದ ಪ್ರಮುಖ ಬೆಳೆ ಆಗಲಿದೆ.
Ramachandra Hegade, who tried coffee as a sub-crop in Malagi village of taluk, 30 kilometers away from Mundagode, is now growing Arabica and Robusta in an area of 20 acres. This crop, which is grown in an area called Kedara Thota, has now reached Chikkamagaluru, the coffee hub.
– ಅಂತರ್ಜಾಲ ಮಾಹಿತಿ
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್…
ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…