ವಿಮಾನ ಅಪಘಾತದಲ್ಲಿ ಬದುಕುಳಿದ ನಾಲ್ಕು ಮಕ್ಕಳು ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ 40 ದಿನಗಳ ನಂತರ ಪತ್ತೆಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಮಿಲಿಟರಿ ಪಡೆ ಶೋಧ ಕಾರ್ಯ ನಡೆಸುತ್ತಿತ್ತು. ಅಪಘಾತದಲ್ಲಿ ವಿಮಾನದ ಪೈಲಟ್ ಹಾಗೂ ಇತರ ಮೂವರು ಶವಗಳನ್ನು ಸೈನ್ಯವು ಅಪಘಾತದ ಸ್ಥಳದಲ್ಲಿ ಪತ್ತೆ ಮಾಡಿತ್ತು. ಆದರೆ ಮಕ್ಕಳ ಸುಳಿವು ಪತೆತಯಾಗಿರಲಿಲ್ಲ.
ಈ ಮಕ್ಕಳ ಪತ್ತೆ ಕಾರ್ಯದ ಬಳಿಕ ಕೊಲಂಬಿಯಾ ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದ್ದು, “ಇಡೀ ದೇಶಕ್ಕೆ ಸಂತೋಷವಾಗಿದೆ” ಎಂದು ಹೇಳಿದರು.
ಮೇ 1 ರಂದು ಅಮೆಜಾನ್ ಕಾಡಿನಲ್ಲಿ ಅವರ ಲಘು ವಿಮಾನ ಇಂಜಿನ್ ವೈಫಲ್ಯದಿಂದಾಗಿ ಪತನಗೊಂಡು ಮಕ್ಕಳ ತಾಯಿ ಮತ್ತು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದರು. ಆ ಬಳಿಕ ಮೂವರ ಮೃತದೇಹ ಪತ್ತೆಯಾಗಿತ್ತು, ಆದರೆ ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ಅಲ್ಲಿನ ಸೇನೆ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ನಡುವೆ ಮಕ್ಕಳು ಪತ್ತೆಯಾಗಿದ್ದಾರೆ ಎಂದು ಕಳೆದ ತಿಂಗಳು ಕೊಲಂಬಿಯಾ ಅಧ್ಯಕ್ಷರು ಟ್ವೀಟ್ ಮಾಡಿ ಟೀಕೆಗೆ ಒಳಗಾಗಿದ್ದರು. ಕೊಲಂಬಿಯಾದ ಮಕ್ಕಳ ಕಲ್ಯಾಣ ಸಂಸ್ಥೆಯು ತನ್ನ ಕಚೇರಿಗೆ ನೀಡಿದ ಮಾಹಿತಿಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಅವರು ಮರುದಿನ ಟ್ವೀಟ್ ಮೂಲಕ ತಿಳಿಸಿ ಗೊಂದಲ ನಿವಾರಿಸಿದ್ದರು. ಅದಾದ ಬಳಿಕ ನಿರಂತರ ಪತ್ತೆ ಕಾರ್ಯ ಆರಂಭವಾಗಿತ್ತು.
40 ದಿನಗಳಿಂದ ರಕ್ಷಣೆಗಾಗಿ ಮಕ್ಕಳು ಅಮೆಜಾನ್ ಕಾಡಿನಲ್ಲಿ ಓಡಾಟ ಮಾಡುತ್ತಿದ್ದರು, ಇಷ್ಟೂ ದಿನ ಕಾಡಿನ ಗೆಡ್ಡೆಗೆಣಸು ಹಾಗೂ ನೀರು ಕುಡಿದು ಬದುಕಿದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ವಿಮಾನ ಅಪಘಾತದ ನಂತರ ಮೂವರು ಮೃತಪಟ್ಟರೆ, ಮಕ್ಕಳು ಅಪಘಾತ ಸ್ಥಳದಿಂದ ತಪ್ಪಿಸಿಕೊಂಡಿದ್ದರು. ಸಹಾಯಕ್ಕಾಗಿ ಮಳೆಕಾಡಿನಲ್ಲಿ ಅಲೆದಾಡಿದರು. ಸೇನಾ ಪಡೆಯುವ ವಿಮಾನ ಹಾಗೂ ಮೃತದೇಹ ಪತ್ತೆಯ ಬಳಿಕ ಮಕ್ಕಳಿಗಾಗಿ ಹುಡುಕಾಟ ನಡೆಸಿದಾಗ ಕಾಡಿನಲ್ಲಿ ಸಣ್ಣ ಹೆಜ್ಜೆಗುರುತುಗಳನ್ನು ಕಂಡುಹಿಡಿದಿದ್ದರು. ಹೀಗಾಗಿ ಮಕ್ಕಳ ಇರುವಿಕೆ ಬಗ್ಗೆ ಆಗ ಖಚಿತ ಪಡಿಸಿದರೂ ದಿನ ಉರುಳಿದಂತೆ ಬದುಕಿರುವ ಸಾಧ್ಯತೆ ಕ್ಷೀಣವಾಗ ತೊಡಗಿತ್ತು. ಆದರೆ ಮಳೆಕಾಡಿನಲ್ಲಿ ಮಕ್ಕಳು ಇನ್ನೂ ಜೀವಂತವಾಗಿದ್ದಾರೆ ಎಂದು ಶೋಧ ತಂಡಗಳು ಖಚಿತ ಪಡಿಸಿ ಹುಡುಕಾಟ ಆರಂಭ ಮಾಡಿತ್ತು. ಮಕ್ಕಳ ಸಮುದಾಯದ ಸದಸ್ಯರು ಹಣ್ಣುಗಳು ಮತ್ತು ಕಾಡಿನ ಬದುಕುಳಿಯುವ ಕೌಶಲ್ಯಗಳ ಬಗ್ಗೆ ಅವರ ಜ್ಞಾನವನ್ನು ಹಂಚಿಕೊಂಡಿದ್ದರು. ಇದರ ಪರಿಣಾಮವಾಗಿ ಮಕ್ಕಳು ಕಾಡಿನಲ್ಲಿ ಜೀವಂತವಾಗಿ ಉಳಿಯಲು ಉತ್ತಮ ಅವಕಾಶ ನೀಡಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…