ಇಂದಿನ ಆಧುನಿಕ ಯುಗದಲ್ಲಿ ಅಧಿಕ ಕಾರ್ಯ ಒತ್ತಡಗಳಿಂದ ಸಾಮಾನ್ಯವಾಗಿ ಉಂಟಾಗುವ ಸಮಸ್ಯೆ ಅಂದರೆ ಅದುವೇ ಸೊಂಟ ನೋವು. ಬೆನ್ನು ನೋವು ಎಂಬುದು ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಇತ್ತೀಚೆಗೆ ಇದಕ್ಕೆ ವಯಸ್ಸಿನ ಅಂತರವೂ ಸಹ ಇಲ್ಲ. ಇದೇ ಸಮಸ್ಯೆ ಅನೇಕರನ್ನು ನಿರಂತರವಾಗಿ ಕಾಡುತ್ತಿರುತ್ತವೆ.
ಸೊಂಟ ನೋವಿಗೆ ಸಾಮಾನ್ಯ ಕಾರಣಗಳು :
* ದೀರ್ಘಾವಧಿ ಯವರಿಗೆ ಒಂದೇ ಬದಿಯಲ್ಲಿ / ಭಂಗಿಯಲ್ಲಿ ಮಲಗುವುದು
* ಅತಿಯಾದ ಶ್ರಮ / ಪ್ರಯಾಣ
* ವಿಚಿತ್ರವಾದ ಭಂಗಿಯಲ್ಲಿ ಕುಳಿತು ಕೊಳ್ಳುವುದು
* ಅತಿಯಾಗಿ ಬಗ್ಗಿಕೊಂಡೆ ಅತಿ ಕೆಲಸ ಮಾಡುವುದು
* ಉಳುಕು ಮೂಳೆ ಮುರಿತ
* ಏಕಕಾಲದಲ್ಲಿ ಅತಿ ವ್ಯಾಯಾಮ ಮಾಡುವುದು
ಸೊಂಟ ನೋವು ತಡೆಗಟ್ಟಲು ಸುಲಭ ಪರಿಹಾರಗಳು :
* ಸುರಕ್ಷಿತ ಮತ್ತು ಆರೋಗ್ಯಕರ ವ್ಯಾಯಾಮಗಳು
* ಯೋಗಾಸನ
* ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು
* ನೇರವಾಗಿ ನಿಂತುಕೊಳ್ಳುವುದು ನೇರವಾಗಿ ನಡೆಯುವುದು ನೇರವಾಗಿ ಮಲಗುವುದು
* ನೋವಿನ ಪ್ರದೇಶದಲ್ಲಿ ಬಿಸಿ ನೀರಿನ ಶಾಖ ಕೊಡುವುದು
* ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾದ ತೈಲ ಗಳಿಂದ ನೋವಿನ ಜಾಗಕ್ಕೆ ಮಸಾಜ್ ಮಾಡುವುದು.
* ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಒಂದಾದ ಪಂಚಕರ್ಮ ಚಿಕಿತ್ಸೆ ಸೊಂಟ ನೋವಿಗೆ ಉತ್ತಮ ಚಿಕಿತ್ಸೆ ಆಗಿದೆ ಅದರಲ್ಲಿ ಕಟ್ಟಿಬಸ್ತಿ ಚಿಕಿತ್ಸಾ ವಿಧಾನದಿಂದ ಸೊಂಟ ನೋವು ನಿವಾರಣೆ ಮಾಡಬಹುದು.
ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ನಿಮಗೆ ತೊಂದರೆಗಳಾದಲ್ಲಿ ದಯವಿಟ್ಟು ನಿರ್ಲಕ್ಷಿಸಬೇಡಿ. ನೋವು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರು ನೋವಿನ ಕಾರಣ ಕಂಡುಹಿಡಿಯಬಹುದು ಮತ್ತು ಅದನ್ನು ನಿರ್ವಹಿಸಲು ಯೋಜನೆಯನ್ನು ರೂಪಿಸಬಹುದು. ಸೊಂಟ ನೋವನ್ನು ನಿರ್ಲಕ್ಷಿಸಿದರೆ ಮತ್ತು ಚಿಕಿತ್ಸೆ ನೀಡದೆ ಹೋದಲ್ಲಿ ಅದು ಹೆಚ್ಚಿನ ಗಂಭೀರ ಸಮಸ್ಯೆಗಳಿಗೆ( ಅಂಗವೈಕಲ್ಯಕ್ಕೆ) ಕಾರಣವಾಗಬಹುದು.
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.
ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…