ರಾಜ್ಯದ ಪ್ರತಿಯೊಬ್ಬ ಪ್ರಜೆಗಳು ಕಡ್ಡಾಯವಾಗಿ ಮಾಡಲೇಬೇಕಾದ ಕೆಲಸ | ಸಾರ್ವಜನಿಕ ಜನ ಜಾಗೃತಿಗಾಗಿ

December 13, 2023
10:45 AM
ಆಧಾರ್ ಕಾರ್ಡ್ ದಾಖಲೆಗಳನ್ನು ಅಪ್​ಡೇಟ್ ಮಾಡುವ ಗಡುವನ್ನು ಡಿಸೆಂಬರ್ 14ರಿಂದ 2024ರ ಮಾರ್ಚ್ 14ರವರೆಗೆ ವಿಸ್ತರಿಸಲಾಗಿದೆ.

ಆಧಾರ್ ಕಾರ್ಡ್(Adhar Card) ಭಾರತದಲ್ಲಿನ(India) ಪ್ರಮುಖ ಐಡಿ(ID)ಗಳಲ್ಲಿ ಒಂದಾಗಿದೆ, ಇದನ್ನು ಯಾವುದೇ ಸರ್ಕಾರಿ ಸೌಲಭ್ಯ(Govt Facility) ಪಡೆಯಲು, ಬ್ಯಾಂಕ್ ಖಾತೆ(Bank Account) ತೆರೆಯಲು ಮತ್ತು ಇತರೆ ಹಲವು ಉದ್ದೇಶಗಳಿಗೆ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್ ಅನ್ನು ಅಪ್‌ಡೇಟ್‌ ಮಾಡುವುದು ಬಹಳ ಮುಖ್ಯವಾಗಿದೆ. ಆಧಾರ್ ನೀಡುವ ಸಂಸ್ಥೆಯಾದ ಯುಐಡಿಎಐ, ನಾಗರಿಕರಿಗೆ ಆಧಾರ್ ಅನ್ನು ಉಚಿತವಾಗಿ ನವೀಕರಿಸುವ ಸೌಲಭ್ಯವನ್ನು ಒದಗಿಸಿದೆ. ಇದೀಗ ಆಧಾರ್ ಕಾರ್ಡ್ ದಾಖಲೆ ಅಪ್​ಡೇಟ್ ಮಾಡಲು ಕಾಲಾವಕಾಶವನ್ನು ವಿಸ್ತರಿಸಿದೆ.2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ದಾಖಲೆ ಅಪ್​ಡೇಟ್ ಮಾಡಬಹುದು ಎಂದು ಯುಐಡಿಎಐ ಸಂಸ್ಥೆ ತಿಳಿಸಿದೆ.

Advertisement

ಆಧಾರ್ ಕಾರ್ಡ್ ದಾಖಲೆಗಳನ್ನು ಉಚಿತವಾಗಿ ಅಪ್​ಡೇಟ್ ಮಾಡಲು ಡಿಸೆಂಬರ್ 14ರವರೆಗೆ ಇದ್ದ ಅವಕಾಶವನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. 2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ದಾಖಲೆ ಅಪ್​ಡೇಟ್ ಮಾಡಬಹುದು ಎಂದು ಯುಐಡಿಎಐ ಸಂಸ್ಥೆ  ತಿಳಿಸಿದೆ. ಈ ಹಿಂದೆ 2023ರ ಸೆಪ್ಟೆಂಬರ್ 14ಕ್ಕೆ ಡೆಡ್​ಲೈನ್ ಇತ್ತು. ಅದನ್ನು ಡಿಸೆಂಬರ್ 14ಕ್ಕೆ ವಿಸ್ತರಿಸಲಾಯಿತು. ಈಗ ಡಿಸೆಂಬರ್ 15ರಿಂದ ಮಾರ್ಚ್ 14ರವರೆಗೆ ಗಡುವು ಹೆಚ್ಚಿಸಲಾಗಿದೆ.

ಇದರ ಜೊತೆಗೆEpic ವೋಟರ್ ಐಡಿ ಕಾರ್ಡ್ ಗಳಿಗೆ(Voter ID Card) ಇನ್ನೂ ಯಾರು Adhaar Link Form 6b ಮಾಡಿಸಿಲ್ಲ ಹಾಗೂ ಹಳೆಯ ವೋಟರ್ ಐಡಿ ಕಾರ್ಡ್ ಇಂದ ಹೊಸ Smart Card ಪಡೆದಿಲ್ಲ ಅವರುಗಳು ಮುಂದಿನ ವರ್ಷ ಮಾರ್ಚ್ ಮೂವತ್ತೊಂದರ ಒಳಗೆ ಲಿಂಕ್ ಮಾಡಿ ಕಾರ್ಡ್ ಪಡೆಯಬೇಕು.

ABHA PMJAY ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆ ಹಾಗೂ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಯೋಜಿತ ಐದು ಲಕ್ಷದ ವರೆಗಿನ ಉಚಿತ ಆರೋಗ್ಯ ವಿಮೆಯ ಕಾರ್ಡ್ ಗಳನ್ನು ಮರು ಪಡೆಯುವುದು.

2019 ರ ಏಪ್ರಿಲ್ ಗಿಂತ ಹಿಂದೆ ಖರೀದಿಸಿದ ಎಲ್ಲಾ ರೀತಿಯ ವಾಹನಗಳಿಗೆ ಕಡ್ಡಾಯ HSRP ನಂಬರ್ ಪ್ಲೇಟ್ (Number Plate)ಪಡೆಯುವುದು ಕಡ್ಡಾಯವಾಗಿದ್ದು ಮುಂದಿನ ವರ್ಷ ಪೆಬ್ರವರಿ 17 ರೊಳಗಾಗಿ ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿಸಿಕೊಂಡು ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಬೇಕು.

ರಾಜ್ಯ ಎಲ್ಲಾ ರೀತಿಯ ಪಿಂಚಣಿದಾರರು ಕಡ್ಡಾಯವಾಗಿ ವರ್ಷಕ್ಕೊಮ್ಮೆ ಜೀವಂತ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ.. ಇಲ್ಲದಿದ್ದಲ್ಲಿ ಪಿಂಚಣಿ ಪಡೆಯಲು ಅಸಾದ್ಯವಿದೆ.. ಜೀವಂತ ಪ್ರಮಾಣ ಪತ್ರ (Life Certificate) ಪಡೆಯಲು aadhar Card, mobile, PPO No, Bank passbook ಮೂಲಕ Bio metric ಬೆರಳಚ್ಚು ಅಥವಾ Iris ಕಣ್ಣಿನ ದೃಢೀಕರಣ ವಿಧಾನದಿಂದ ಪ್ರಮಾಣ ಪತ್ರ ಪಡೆಯಬಹುದು.

Aadhaar Card is one of the most important IDs in India, it is used for accessing any Govt Facility, opening a Bank Account and many other purposes. In such a situation, updating Aadhaar is very important. UIDAI, the Aadhaar issuing agency, has provided citizens with the facility to update Aadhaar free of cost. 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು
April 10, 2025
9:58 AM
by: The Rural Mirror ಸುದ್ದಿಜಾಲ
ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group