ಜೋಡೆತ್ತು ಸಾಕಾಣಿಕೆ(Cattle) ಮಾಡುವ ರೈತರಿಂದ(Farmer) ಯಾವುದೇ ಜಾತಿಯಿಲ್ಲ(Caste) ಹಾಗೂ ಯಾವುದೇ ಧರ್ಮವೂ ಕೂಡ ಇಲ್ಲ. ಆದರೆ, ಇಂದು ಪ್ರತಿಯೊಂದು ಜಾತಿ ಹಾಗೂ ಧರ್ಮದಲ್ಲಿರುವ ಜೋಡೆತ್ತು ಸಾಕಾಣಿಕೆದಾರರು ತಾವು ಹಾಕಿದ ಬಂಡವಾಳವನ್ನೂ ಕೂಡ ಮರಳಿ ಪಡೆಯದ ಸ್ಥಿತಿಯಲ್ಲಿದ್ದಾರೆ. ಈ ಕಾರಣಕ್ಕಾಗಿ, ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಿದಾಗ, ಅನೇಕ ಎತ್ತುಗಳು ಕಾಸಾಯಿಖಾನೆಯ(Slaughterhouse) ಪಾಲಾಗುತ್ತಿವೆ. ಎತ್ತುಗಳನ್ನು ಸಾಕಾಣಿಕೆ ಮಾಡುವ ರೈತರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ, ಹೋರಿಕರುಗಳನ್ನು ಸಾಕಿ ಸಲುಹಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ಇದರಿಂದ ಹೋರಿಕರುಗಳನ್ನು ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ, ಇಂದು ದಿನಾಲು ಲಕ್ಷಾಂತರ ಹೋರಿಕರುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ನಮ್ಮ ಕಣ್ಣು ಮುಂದೆ ಓಡಾಡುವ ಜೀವಂತ ಬಾಲ ನಂದಿಗಳನ್ನು ಕಾಸಾಯಿಖಾನೆಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡು, ನಾವು ದೇವಸ್ಥಾನಗಳಲ್ಲಿರುವ ನಂದಿಗಳನ್ನು ಪೂಜಿಸಿದರೆ, ದೇವಸ್ಥಾನಗಳಲ್ಲಿರುವ ಯಾವ ನಂದಿಯೂ ಕೂಡ ಮುಂದೆ ನಮ್ಮ ಮಕ್ಕಳು ನರಕಯಾತನೆಯನ್ನು ಅನುಭವಿಸುವುದನ್ನು ತಪ್ಪಿಸಲಾರ. ಈ ಕಟು ಸತ್ಯದ ದರ್ಶನವು ಸಮಸ್ಯೆ ಕೈ ಮೀರಿ ಹೋಗುವ ಮುಂಚೆ ಸಮಾಜಕ್ಕೆ ಆಗಲೇಬೇಕಾಗಿದೆ.
ಗ್ರಾಮಗಳಲ್ಲಿ ಅನ್ನ ಸಂಪತ್ತು ಉಳಿಯಬೇಕಾದರೆ ನಂದಿ ಸಂಪತ್ತನ್ನು ಉಳಿಸಿಕೊಳ್ಳಲೇಬೇಕಾಗಿದೆ. ನಮ್ಮ ಗ್ರಾಮಗಳಲ್ಲಿರುವ ಹಿರಿಯ ರೈತರೊಂದಿಗೆ ಹಾಗೂ ಜೋಡೆತ್ತು ಸಾಕಾಣಿಕೆ ಮಾಡುವ ರೈತರೊಂದಿಗೆ ಈ ವಿಷಯದ ಕುರಿತು ಚರ್ಚಿಸಿದಾಗ ಜೋಡೆತ್ತುಗಳ ಮಹತ್ವದ ಕುರಿತು ನಮಗೆ ಖಂಡಿತ ಅರಿವಾಗುತ್ತದೆ. ಈ ಕಾರಣಕ್ಕಾಗಿ, ಪ್ರತಿಯೊಂದು ಜಾತಿ ಹಾಗೂ ಧರ್ಮದಲ್ಲಿರುವ ಜೋಡೆತ್ತುಗಳನ್ನು ಹೊಂದಿದ ರೈತರನ್ನು ಒಗ್ಗೂಡಿಸಿ ಜೋಡೆತ್ತುಗಳನ್ನು ಉಳಿಸಲು ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ವ ಜಾತಿ ಹಾಗೂ ಸರ್ವ ಧರ್ಮ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.
ಮೊದಲ ಹಂತದಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕು ಮಟ್ಟದ “ಜೋಡೆತ್ತು ಸಾಕಾಣಿಕೆದಾರರ ಸರ್ವ ಜಾತಿ ಹಾಗೂ ಸರ್ವ ಧರ್ಮ ಸಮ್ಮೇಳನ” ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ. ಹಾಗಾಗಿ, ಸರ್ವರ ಒಳಿತನ್ನು ಒಳಗೊಂಡ ಈ ಕಾರ್ಯದಲ್ಲಿ ಕೈ ಜೋಡಿಸಲು ಇಚ್ಚಿಸುವ ಆಸಕ್ತರು ಹೆಚ್ಚಿನ ಮಾಹಿತಿ ಪಡೆಯಲು 8884390598 ಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com, 9110885321, Abhishek
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…