ಜೀವನದಲ್ಲಿ ವ್ಯಕ್ತಿತ್ವವನ್ನು ನಿರ್ಮಿಸುವ ಅಂಶಗಳಲ್ಲಿ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ಎರಡೂ ಅತ್ಯಂತ ಮುಖ್ಯವಾದವುಗಳು. ಬದುಕಿನಲ್ಲಿ ಬುದ್ಧಿ, ಜ್ಞಾನ, ಸಂಪತ್ತು, ಅನುಭವ ಎಲ್ಲವೂ ಇದ್ದರೂ ಆತ್ಮವಿಶ್ವಾಸವಿಲ್ಲದೆ ಹಾಗೂ ಸಮರ್ಪಕ ಸಂವಹನವಿಲ್ಲದೆ ಅವುಗಳ ಮೌಲ್ಯ ಅರ್ಧಕ್ಕಿಂತಲೂ ಕಡಿಮೆ. ಈ ಕಾರಣದಿಂದಲೇ ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಿಕೊಳ್ಳಲು ಹಾಗೂ ಸಮಾಜದಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಳ್ಳಲು ಈ ಎರಡೂ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ..
ಆತ್ಮವಿಶ್ವಾಸದಸ್ವರೂಪ: ಆತ್ಮವಿಶ್ವಾಸವೆಂದರೆ ಅಹಂಕಾರವಲ್ಲ; ಅದು “ನಾನು ಮಾಡಬಲ್ಲೆ” ಎಂಬ ಮನದ ಧೈರ್ಯ. ಭಗವದ್ಗೀತೆಯ ವಾಕ್ಯ “ಉದ್ಧರೆದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್” ಎಂದರೆ ವ್ಯಕ್ತಿಯು ತನ್ನನ್ನೇ ತಾನು ಎತ್ತಿಕೊಳ್ಳಬೇಕು ಎಂಬ ಸಂದೇಶ ನೀಡುತ್ತದೆ. ಆತ್ಮವಿಶ್ವಾಸವೇ ಆ ಎತ್ತುವ ಶಕ್ತಿ. ಆತ್ಮವಿಶ್ವಾಸ ಹೊಂದಿದವನು ಸಂಕಷ್ಟದಲ್ಲಿ ಕುಗ್ಗದೆ ನಿಂತುಕೊಳ್ಳಲು, ಸೋಲನ್ನು ಸಹ ಪಾಠವನ್ನಾಗಿ ಪರಿವರ್ತಿಸಲು ಮತ್ತು ಇತರರಲ್ಲಿ ಪ್ರೇರಣೆ ಮೂಡಿಸಲು ಸಾಧ್ಯವಾಗುತ್ತದೆ.
ಆತ್ಮವಿಶ್ವಾಸವನ್ನುಬೆಳೆಸುವ_ಮಾರ್ಗಗಳು: ಆತ್ಮವಿಶ್ವಾಸವನ್ನು ಒಮ್ಮೆಯೇ ಪಡೆಯಲು ಸಾಧ್ಯವಿಲ್ಲ; ಅದು ದಿನನಿತ್ಯದ ಅಭ್ಯಾಸದ ಫಲ. ಮೊದಲಿಗೆ ಸ್ವಯಂ ಅರಿವು ಬೆಳೆಸಿಕೊಳ್ಳಬೇಕು. ತನ್ನ ಶಕ್ತಿ-ದುರ್ಬಲತೆಗಳನ್ನು ಅರಿತುಕೊಳ್ಳುವುದು ಮುಖ್ಯ. ಬಳಿಕ ಸಣ್ಣ ಸಾಧನೆಗಳ ಅನುಭವದಿಂದ ಮನಸ್ಸು ದೃಢವಾಗುತ್ತದೆ. ಧ್ಯಾನ, ಯೋಗ, ವ್ಯಾಯಾಮ ಇವು ದೈಹಿಕ-ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅತ್ಯಂತ ಮುಖ್ಯವಾಗಿ, ವಿಫಲತೆಯನ್ನು ಭಯದಿಂದ ನೋಡುವುದಕ್ಕಿಂತ ಪಾಠವಾಗಿ ಸ್ವೀಕರಿಸಿದಾಗ ಆತ್ಮವಿಶ್ವಾಸ ಮತ್ತಷ್ಟು ಬಲವಾಗುತ್ತದೆ.
ಆಲ್ಬರ್ಟ್ ಬಾಂಡುರಾ ಅವರ Self-Efficacy Theory ಪ್ರಕಾರ – ವ್ಯಕ್ತಿಯು ನಿರ್ದಿಷ್ಟ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ನಂಬಿಕೆ ಹೊಂದಿದಾಗ ಆತ್ಮವಿಶ್ವಾಸ ಬೆಳೆಯುತ್ತದೆ.
ಅಬ್ರಹಾಂ ಮಾಸ್ಲೋ ಅವರ Hierarchy of Needs ತತ್ತ್ವದಲ್ಲಿ ““Esteem Needs” ಎಂದರೆ ‘ಗೌರವ ಮತ್ತು ಸಾಧನೆಗಳ ಅಗತ್ಯ’ ತೃಪ್ತಿಗೊಳ್ಳುವುದಕ್ಕೆ ಆತ್ಮವಿಶ್ವಾಸವೇ ಆಧಾರ.” ಎಂದು ಹೇಳಿದೆ.
ಮನೋವಿಜ್ಞಾನಿಗಳು ಆತ್ಮವಿಶ್ವಾಸವು ನಕಾರಾತ್ಮಕ ಭಯವನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸುವ ಮನಸ್ಥಿತಿ ಎಂಬುದಾಗಿ ಹೇಳಿದ್ದಾರೆ .
ಆತ್ಮ ವಿಶ್ವಾಸದ ವೃದ್ಧಿಗೆ ಸಂವಹನ ಕೌಶಲ್ಯ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ವ್ಯಕ್ತಿಯ ಭಾವನೆ, ಆಲೋಚನೆ, ಜ್ಞಾನ ಇವು ಇತರರಿಗೆ ತಲುಪಬೇಕಾದರೆ ಸಂವಹನ ಮುಖ್ಯ. ಅದು ಮಾತಿನ ಮೂಲಕವಷ್ಟೇ ಅಲ್ಲ, ಮುಖಭಾವ, ದೇಹಭಾಷೆ, ಕಿವಿಗೊಡುವ ಶಕ್ತಿ ಇವುಗಳ ಮೂಲಕವೂ ಸಾಧ್ಯ. ಉತ್ತಮ ಸಂವಹನ ಕೌಶಲ್ಯ ಹೊಂದಿದವನು ಎಲ್ಲೆಡೆ ಆತ್ಮೀಯತೆ ಮೂಡಿಸಲು, ಸಂಬಂಧಗಳನ್ನು ಗಟ್ಟಿ ಮಾಡಿಸಲು ಮತ್ತು ನಾಯಕತ್ವ ಪ್ರದರ್ಶಿಸಲು ಸಮರ್ಥನಾಗುತ್ತಾನೆ.
ಕಾರ್ಲ್ ರೋಜರ್ಸ್ ಅವರ Person-Centered Therapy ಪ್ರಕಾರ – ಉತ್ತಮ ಸಂವಹನದ ಮೂಲ ““Empathy, Congruence, and Unconditional Positive Regard”. ಸಹಾನುಭೂತಿ, ಆಂತರಿಕ ಸಾಮರಸ್ಯ ,ನಿರಪೇಕ್ಷ ಸಕಾರಾತ್ಮಕ ಗೌರವಗಳಾಗಿದೆ.
ಡೇಲ್ ಕಾರ್ನೆಗಿ ತನ್ನ ಪ್ರಸಿದ್ಧ ಗ್ರಂಥ to Win Friends and Influence People ನಲ್ಲಿ – ಸಂವಹನ ಕೌಶಲ್ಯವು ವ್ಯಕ್ತಿಗೆ ಸಮಾಜದಲ್ಲಿ ಯಶಸ್ಸನ್ನು ತರಬಲ್ಲ ಅತ್ಯಂತ ದೊಡ್ಡ ಆಸ್ತಿ ಎಂದು ಬೋಧಿಸಿದ್ದಾನೆ.
ಇಂದಿನ “How to Win Friends and Influence People ” ಸಿದ್ಧಾಂತ ಪ್ರಕಾರ – ಸಮರ್ಥ ಸಂವಹನವು ಭಾವನೆಗಳನ್ನು ಅರಿತು, ಸಮರ್ಪಕವಾಗಿ ವ್ಯಕ್ತಪಡಿಸುವ ಶಕ್ತಿ.
ಸಂವಹನ ಕೌಶಲ್ಯ ಬೆಳೆಸುವ_ಮಾರ್ಗಗಳು: ಸಂವಹನ ಕೌಶಲ್ಯವನ್ನು ಬೆಳೆಸುವುದು ನಿರಂತರ ಅಭ್ಯಾಸದ ಫಲ. ಸ್ಪಷ್ಟವಾಗಿ, ಸರಳವಾಗಿ, ಆತ್ಮವಿಶ್ವಾಸದಿಂದ ಮಾತನಾಡುವುದು ಮೊದಲ ಹೆಜ್ಜೆ. ಜೊತೆಗೆ ಉತ್ತಮ ಶ್ರೋತೃವಾಗಿರುವುದು ಅತ್ಯಂತ ಮುಖ್ಯ. ದೇಹಭಾಷೆಯಲ್ಲೂ ಸರಿಯಾದ ಹಾವಭಾವ, ದೃಷ್ಟಿ, ನಗು ಇವು ಮಾತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಪದಸಂಪತ್ತು ಹೆಚ್ಚಿಸಲು ಓದು-ಬರಹ ಸಹಾಯಕ. ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವ ಅಭ್ಯಾಸದಿಂದ ಭಯವು ಕಡಿಮೆಯಾಗುತ್ತದೆ.
ಆತ್ಮವಿಶ್ವಾಸ ಮತ್ತು ಸಂವಹನ ಇವೆರಡರ ಪರಸ್ಪರ ಸಂಬಂಧ : ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ಎರಡೂ ಪರಸ್ಪರ ಪೂರಕ. ಆತ್ಮವಿಶ್ವಾಸವಿಲ್ಲದೆ ಉತ್ತಮ ಸಂವಹನ ಸಾಧ್ಯವಿಲ್ಲ; ಸಂವಹನ ಕೌಶಲ್ಯವಿಲ್ಲದೆ ಆತ್ಮವಿಶ್ವಾಸ ಹೊರಹೊಮ್ಮುವುದಿಲ್ಲ. ಇವೆರಡೂ ಬೆಳೆಸಿಕೊಂಡಾಗ ಮಾತ್ರ ವ್ಯಕ್ತಿ ತನ್ನ ಆಂತರಿಕ ಸಾಮರ್ಥ್ಯವನ್ನು ಸಮಾಜದಲ್ಲಿ ಪ್ರಕಾಶಮಾನವಾಗಿ ಪ್ರದರ್ಶಿಸಲು ಸಾಧ್ಯ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯಗಳು ವ್ಯಕ್ತಿಯ ನೈಜ ಬಂಡವಾಳ.
ಆತ್ಮವಿಶ್ವಾಸಮತ್ತುಸಂವಹನಕೌಶಲ್ಯಬೆಳೆಸುವಹಂತಹಂತದವಿಧಾನಗಳು
ಆತ್ಮವಿಶ್ವಾಸ (Self Confidence) ಮತ್ತು ಸಂವಹನ ಕೌಶಲ್ಯ (Communication Skills) ಎರಡೂ ವ್ಯಕ್ತಿತ್ವದ ಬೆಳವಣಿಗೆಯ ಪ್ರಮುಖ ಆಧಾರಗಳು. ಇವುಗಳನ್ನು ಒಮ್ಮೆಯೇ ಪಡೆಯಲು ಸಾಧ್ಯವಿಲ್ಲ; ದಿನನಿತ್ಯದ ಅಭ್ಯಾಸ ಮತ್ತು ಸಹಜಜೀವನಶೈಲಿಯ ಮೂಲಕ ನಿಧಾನವಾಗಿ ಬೆಳೆಸಿಕೊಳ್ಳಬೇಕು.
- ಆತ್ಮವಿಶ್ವಾಸಬೆಳೆಸುವ_ಹಂತಗಳು:
• ಮೊದಲ ಹಂತ ದಲ್ಲಿ ಸ್ವಯಂ ಅರಿವು (Self Awareness) ಎಂದರೆ ನಮ್ಮ ಶಕ್ತಿಗಳು ಮತ್ತು ದೌರ್ಬಲ್ಯಗಳನ್ನು , ಆಸಕ್ತಿಗಳನ್ನು ದಾಖಲಿಸಿಕೊಳ್ಳಬೇಕು .
• ಎರಡನೆಯ ಹಂತದಲ್ಲಿ ಹಂತ ಸಣ್ಣ ಗುರಿಗಳು (Small Goals) ನಿರ್ಧರಿಸಿಕೊಳ್ಳಬೇಕು .ಅತಿದೊಡ್ಡ ಗುರಿಯನ್ನು ಒಮ್ಮೆಲೆ ಕೈಗೆತ್ತಿಕೊಳ್ಳಬಾರದು .ದಿನನಿತ್ಯ ಸಾಧಿಸಬಹುದಾದ ಚಿಕ್ಕ ಗುರಿಗಳನ್ನು ಇಟ್ಟುಕೊಂಡು ಯಶಸ್ಸಿನ ಅನುಭವ ಪಡೆದುಕೊಳ್ಳಬೇಕು
• ಮೂರನೆಯ ಹಂತ ದಲ್ಲಿ ಸಕಾರಾತ್ಮಕ ಚಿಂತನೆ ((Positive Thinking) ಯೊಂದಿಗೆ ನಕಾರಾತ್ಮಕ ಆಲೋಚನೆಗಳನ್ನು ಬದಲಿಸಿ, “ನಾನು ಮಾಡಬಲ್ಲೆ” ಎಂಬ ಮನೋಭಾವ ಬೆಳೆಸಿಕೊಳ್ಳಬೇಕು .ಪ್ರತಿ ಬೆಳಿಗ್ಗೆ ಪ್ರೇರಣಾದಾಯಕ ವಾಕ್ಯಗಳನ್ನು(affirmations) ಹೇಳಿಕೊಳ್ಳಬೇಕು.
• ನಾಲ್ಕನೆಯ ಹಂತದಲ್ಲಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವ್ಯಾಯಾಮ, ಯೋಗ, ಧ್ಯಾನದಿಂದ ಆರೋಗ್ಯಕರ ಜೀವನ ಶೈಲಿ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ.
• ಐದನೆಯ ಹಂತ ವಿಫಲತೆಯ ಪಾಠ (Learning from Failure) ಸವಾಲಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು .ಸೋಲನ್ನು ಕುಗ್ಗುವಿಕೆಯಾಗಿಸದೆ, ಮುಂದಿನ ಯಶಸ್ಸಿಗೆ ತಯಾರಿ ಎಂದು ನೋಡಿ.
ಪ್ರತಿಯೊಂದು ವಿಫಲತೆಯಲ್ಲೂ ಹೊಸ ಪಾಠವಿದೆ ಎಂದು ತಿಳಿದುಕೊಳ್ಳಬೇಕು.
2 .ಸಂವಹನ ಕೌಶಲ್ಯ ಬೆಳೆಸುವ ಹಂತಗಳು:
• ಮೊದಲನೆಯ ಹಂತದಲ್ಲಿ ಶ್ರವಣ ಶಕ್ತಿ (Active Listening) ಎಂದರೆ ಇತರರ ಮಾತನ್ನು ಸಂಪೂರ್ಣ ಗಮನದಿಂದ ಮಧ್ಯೆ ಅಡ್ಡಿ ಮಾಡದೆ ಕೇಳುವುದೇ ಉತ್ತಮ ಸಂವಹನದ ಮೊದಲ ಗುಣ.
• ಎರಡನೆಯ ಹಂತ ದಲ್ಲಿ ಸರಳ ಮತ್ತು ಸ್ಪಷ್ಟ ಭಾಷೆ ಬಳಸಬೇಕು.ಜಟಿಲ ಪದಗಳ ಬದಲು ಸರಳವಾದ, ಅರ್ಥಗರ್ಭಿತ ವಾಕ್ಯ ಬಳಸುವುದರಿಂದ ಅದು ಜನರನ್ನು ಬೇಗ ತಲುಪುತ್ತದೆ.ಸಾಧ್ಯವಾದಷ್ಟೂ ಅಸ್ಪಷ್ಟತೆ ಮತ್ತು ಅತಿರೇಕವನ್ನು ತಪ್ಪಿಸಿ.
• ಮೂರನೆಯ ಹಂತದಲ್ಲಿ ದೇಹಭಾಷೆ (Body Language) ಬಹಳ ಮುಖ್ಯ.ದೃಷ್ಟಿ (eye contact), ನಗು, ತಕ್ಕ ಹಾವಭಾವ ಇವು ಮಾತಿಗಿಂತ ಹೆಚ್ಚು ಹೇಳುತ್ತವೆ.ಆತ್ಮವಿಶ್ವಾಸದಿಂದ ನಿಂತು ಅಥವಾ ಕುಳಿತೇ ಮಾತನಾಡುವಾಗ ಸ್ಪಷ್ಟ ಮಾತನಾಡಬೇಕು .
• ನಾಲ್ಕನೆಯ ಹಂತದಲ್ಲಿ ಪದಸಂಪತ್ತು ಮತ್ತು ಓದು ಮುಖ್ಯವಾಗುತ್ತದೆ.ಪ್ರತಿದಿನ ಪುಸ್ತಕ, ಪತ್ರಿಕೆ, ಲೇಖನ ಓದಿ,ಹೊಸ ಪದಗಳನ್ನು ಕಲಿತು ಬಳಕೆ ಮಾಡಿದಾಗ ಇದು ಅಭಿವ್ಯಕ್ತಿಗೆ ಶಕ್ತಿಯನ್ನು ನೀಡುತ್ತದೆ.
• ಐದನೆಯ ಹಂತ ದಲ್ಲಿ ಅಭ್ಯಾಸ (Practice) ಡಾ ಬಗ್ಗೆ ಗಮನ ಕೊಡಬೇಕು .ಗುಂಪು ಚರ್ಚೆ, ಭಾಷಣ, ಪ್ರಸ್ತುತೀಕರಣಗಳಲ್ಲಿ ತೊಡಗಿಸಿಕೊಳ್ಳಬೇಕು.ಕನ್ನಡ, ಇಂಗ್ಲಿಷ್ ಅಥವಾ ಬೇರೆ ಭಾಷೆಯಲ್ಲೇ ಆಗಲಿ ಮಾತನಾಡುವ ಅಭ್ಯಾಸವೇ ಉತ್ತಮ ಸಂಹವನವನ್ನು ಬೆಳೆಸುತ್ತದೆ.
ಕೊನೆಯದಾಗಿ ಇವೆರಡರ ಸಮನ್ವಯ : ಸಕಾರಾತ್ಮಕ ಮನೋಭಾವದಿಂದ ಮಾತನಾಡಬೇಕು ಮಾತಿನಲ್ಲಿ ನಡುಕ ಬಂದರೂ ಆತ್ಮವಿಶ್ವಾಸದಿಂದ ಮುಂದುವರಿಯಿರಿಯಬೇಕು ಪ್ರತಿದಿನ ಅಭ್ಯಾಸ – ಸಂವಹನ ಮತ್ತು ಆತ್ಮವಿಶ್ವಾಸ ಎರಡರ ನಿರಂತರ ಅಭ್ಯಾಸದಿಂದ ಮಾತ್ರ ಕೌಶಲ್ಯ ಬೆಳೆಯುತ್ತವೆ. ಇತರರಿಂದ ಪ್ರತಿಕ್ರಿಯೆ ಪಡೆದು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಸಂದರ್ಶನ, ಸಭೆ, ಸ್ನೇಹ ವಲಯಗಳಲ್ಲಿ ಕಲಿತುದನ್ನು ಜಾರಿಗೆ ತರುವುದು ಮುಖ್ಯವಾಗುತ್ತದೆ. ಇವುಗಳನ್ನು ನಿರಂತರ ಅಭ್ಯಾಸದಿಂದ ಬೆಳೆಸಿಕೊಂಡಾಗ ಮಾತ್ರ ವ್ಯಕ್ತಿಯ ಜೀವನ ಅರ್ಥಪೂರ್ಣವಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ “ಸ್ವಯಂ ವಿಶ್ವಾಸದಿಂದ, ಸಮರ್ಥ ಸಂವಹನದಿಂದ ಲೋಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಬೇಕು.


