ಗ್ಯಾರಂಟಿ ಮೇಲೆ ಗ್ಯಾರಂಟಿ(Guarantee) ಭರವಸೆಗಳನ್ನು ನೀಡಿ ವಿಧಾನ ಸಭೆ ಚುನಾವಣೆ(Election) ಗೆದ್ದ ಕಾಂಗ್ರೆಸ್ ಸರ್ಕಾರ ಸದ್ಯ ಕೊಟ್ಟಿರುವ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಈಗ ಉಳಿದಿರುವ ಯುವ ನಿಧಿ ಯೋಜನೆಯನ್ನು(Yuva Nidhi Scheme) ಜಾರಿಗೆ ತರಲು ಮುಂದಾಗಿದೆ. ಲೋಕಸಭಾ ಚುನಾವಣೆ (Lok Sabha) ಹೊಸ್ತಿನಲ್ಲಿ ಕಾಂಗ್ರೆಸ್ ಐದನೇ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದೆ. ಇಂದಿನಿಂದ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಅದನ್ನ ಮತ್ತೊಮ್ಮೆ ಸಾಭೀತು ಮಾಡಿದೆ. ಕೊಟ್ಟ ಮಾತಿನಂತೆ ತನ್ನ ಕೊನೆಯ ಗ್ಯಾರಂಟಿ ಯೋಜನೆ ಯುವ ನಿಧಿಯನ್ನ ತಿಂಗಳಾಂತ್ಯಕ್ಕೆ ಜಾರಿ ಮಾಡಲು ಮುಂದಾಗಿದೆ. ಡಿಸೆಂಬರ್ ತಿಂಗಳ 26ರಂದು ಯುವ ನಿಧಿ ಯೋಜನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಲುವಾಗಿನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿ ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇನ್ನು ರಾಷ್ಟ್ರ ಕವಿ, ಯುವ ಸಮುದಾಯದ ಸ್ಪೂರ್ತಿ ಕುವೆಂಪುರವರ ಪುಣ್ಯಭೂಮಿ ಶಿವಮೊಗ್ಗದಲ್ಲಿ 2024ರ ಜನವರಿ 12ರಂದು ಈ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಅಂದೇ ಯೂತ್ ಐಕಾನ್ ವಿವೇಕಾನಂದರ ಜನ್ಮ ಜಯಂತಿ ಅನ್ನೋದು ಮತ್ತೊಂದು ಗಮನಾರ್ಹ ವಿಚಾರ. ಪ್ರಸಕ್ತ ಸಾಲಿನಲ್ಲಿ ಯೋಜನಾ ಗಾತ್ರ 250 ಕೋಟಿಯಾಗಿದ್ದು ಮುಂದಿನ ವರ್ಷ ಇದರ ಪ್ರಮಾಣ 1,250 ಕೋಟಿಗಳಾಗಲಿದೆ. ರಾಜ್ಯದ ವಿಧ್ಯಾರ್ಥಿಗಳಿಗೆ ಮಾತ್ರ ಯೋಜನೆ ಲಾಭ ದೊರೆಯಲಿದೆ. ಇನ್ನು ಯೋಜನೆ ದುರ್ಬಳಕೆ ತಡೆಗೂ ಸರ್ಕಾರ ಕ್ರಮ ಕೈಗೊಂಡಿದೆ.
ಯುವಕರಿಗೆ ಕೆಲಸ ಸಿಗುವವರೆಗೆ ಯೋಜನೆ ಹಣ ಲಭ್ಯವಾಗತ್ತೆ ಇದಕ್ಕಾಗಿ ಅವರು ಪ್ರತಿ ತಿಂಗಳ 25ನೇ ತಾರೀಖಿನೊಳಗೆ ತಮ್ಮ ಅರ್ಜಿಯಲ್ಲಿ ನಿಖರ ಮಾಹಿತಿ ನಮೂದು ಮಾಡಬೇಕು. ಜೊತೆಗೆ ಯೋಜನೆ ಹಣ ಪಡೆಯುವವರ ಬಗ್ಗೆ ಸಮಗ್ರ ಮಾಹಿತಿಯನ್ನು ಸರ್ಕಾರ ಕಲೆ ಹಾಕಲಿದೆ. ಒಂದು ವೇಳೆ ಕೆಲಸ ಸಿಕ್ಕ ಬಳಿಕವೂ ಹಣ ಪಡೆಯುವುದು ಕಂಡುಬಂದರೆ ಅವರಿಂದ ಹಣ ವಾಪಾಸ್ ಪಡೆದುಕೊಳ್ಳಲು ಸರ್ಕಾರ ಪ್ಲಾನ್ ಮಾಡಿದೆ. ಯುವನಿಧಿ ಅರ್ಜಿ ಸಲ್ಲಿಕೆಯನ್ನ ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಸೇವಾಸಿಂಧು ಪೋರ್ಟ್ ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಯುವನಿಧಿ ಯೋಜನೆ ಸದುಪಯೋಗ ಪಡೆದುಕೊಳ್ಳಲು ಬೇಕಾದ ಅರ್ಹತೆಗಳೇನು?
ಯುವನಿಧಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?
ಯೋಜನೆಗೆ ಅರ್ಹರಾಗದೇ ಇರುವವರು
In the run-up to the Lok Sabha elections, the Congress has decided to implement the Fifth Guarantee Scheme. The registration process of Yuva Nidhi Scheme will start from today. CM Siddaramaiah and DCM DK Shivakumar will inaugurate the program at the banquet hall of Vidhana Soudha at 11 am today.
– ಅಂತರ್ಜಾಲ ಮಾಹಿತಿ
ಆನೇಕಲ್ ತಾಲೂಕಿನ ಜಿಗಣಿಯ ಕುಂಟ್ಲರೆಡ್ಡಿ ಬಡಾವಣೆಯ ವೇಂಕಟೇಶ್ ಎಂಬುವರ ಮನೆಗೆ ನಿನ್ನೆ ನುಗ್ಗಿದ್ದ…
ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಸಾವಿರದ 600 ಚಾಲಕ ತರಬೇತಿ ಕೇಂದ್ರಗಳನ್ನು…
ಇಂದು ಕೆಲವು ಕಡೆ ಗುಡುಗು ಸಹಿತ ಮಳೆಯ ಲಕ್ಷಣವಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ…
ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ…
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490