ಪ್ರತಿ ಒಂದು ಲಕ್ಷ ಎಕರೆಗೆ ಕೊಟ್ಟಿಗೆ ಗೊಬ್ಬರ(cow dung manure) ಸಿಗುವುದು ಕೇವಲ ಹತ್ತು ಸಾವಿರ ಎಕರೆಗಿಂತ ಕಡಿಮೆ ಕೃಷಿ ಪ್ರದೇಶಕ್ಕೆ(Agricultural Field) ಮಾತ್ರ. ಉಳಿದ ತೊಂಬತ್ತು ಸಾವಿರ ಎಕರೆಗೆ ಕೊಟ್ಟಿಗೆ ಗೊಬ್ಬರ ಇಲ್ಲ. ರೈತರು(Farmer) ನ್ಯಾಯಯುತ ಬೆಲೆಗೆ ಕೊಟ್ಟಿಗೆ ಗೊಬ್ಬರ ಬಳಸುವ ಮನಸು ಮಾಡಿದರೆ ಗೊಬ್ಬರನ ವಿದೇಶದಿಂದ( abroad) ಆಮದು(Import) ಮಾಡಿಕೊಳ್ಳಬೇಕು. ಅಷ್ಟು ಅವಶ್ಯಕವಾಗಬಹುದು.
ಆದರೆ ರೈತರು ಈಗೀಗ ಕೊಟ್ಟಿಗೆ ಗೊಬ್ಬರವನ್ನು ಬಳಸೋದು ಕಡಿಮೆ ಮಾಡಿದಾರೆ. ಈಗ ಗೋವು ಹಾಲಿಗಾಗಿ ಮಾತ್ರ ಸಾಕಣೆ ಎನ್ನುವಂತಾಗಿದೆ. ಸಗಣಿ ಬೇಡಿಕೆ ಇಲ್ಲವಾದರೆ ಹಾಲು ಕೊಡದ ಹಸು ಮತ್ತು ಹೋರಿ ಇನ್ಯಾತಕ್ಕೆ ಸಾಕ್ತಾರೆ..?
ಇದು ವಾಸ್ತವ…
ಸಗಣಿ ಗೊಬ್ಬರ ಬಳಸದು ಬಿಟ್ಟ ಮೇಲೆ ನಮ್ಮ ಭಾಗದ ಪ್ರಮುಖ ಬೆಳೆ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೇ ಬರ್ತಿಲ್ಲ. ಈಗ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಬೇಸಾಯಕ್ಕೆ ಸಗಣಿ ಗೊಬ್ಬರ ಬಳಸುವ ಮನಸು ಮಾಡ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಸುವ ರೈತರು ಹೆಚ್ಚಾದರೆ ಖಂಡಿತವಾಗಿಯೂ ಎಲ್ಲಾ ಹಸುಗಳು ಸ್ವಾಭಿಮಾನದಿಂದ ಉಳಿಯಲು ಸಾದ್ಯ. ಕೃಷಿಗೆ ಸಗಣಿ ಗೊಬ್ಬರ ವ್ಯಾಪಕವಾಗಿ ಬಳಕೆಯಾಗುವುದು ಹಸುಗಳ ಉಳಿಯಲು ಪೂರಕವಾದ ವಾತಾವರಣ ಸೃಷ್ಟಿಸುತ್ತದೆ.
ರೈತರು ಕೊಟ್ಟಿಗೆ ಗೊಬ್ಬರ ಕೃಷಿ ಗೆ ಬಳಸಲು ಸರ್ಕಾರವೂ ಪ್ರೋತ್ಸಾಹ ನೀಡಬೇಕು. ಸಮಾಜ ರೈತರು ಗೋವುಗಳು ಉಳಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಮನಸು ಮಾಡಿದರೆ ಗೋವುಳಿಯುತ್ತದೆ. ಗೋವು ಹೊರೆಯಲ್ಲ…
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…