ಅಸ್ಸಾಂ ರೈಫಲ್ಸ್ ಮತ್ತೊಂದು ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದೆ ಮತ್ತು ಮೂರು ದಿನಗಳ ಅವಧಿಯಲ್ಲಿ ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅಡಿಕೆಯನ್ನು ವಶಪಡಿಸಿಕೊಂಡಿದೆ. ಕಳೆದೊಂದು ವಾರದಿಂದ ಈಶಾನ್ಯ ರಾಜ್ಯದ ಮೂಲಕ ಅಡಿಕೆ ಕಳ್ಳಸಾಗಾಣಿಕೆಗೆ ಸತತ ಪ್ರಯತ್ನವಾಗುತ್ತಿದೆ. ಇದುವರೆಗೆ 4 ಪ್ರಕರಣ ಪತ್ತೆಹಚ್ಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 4 ಮಹಿಳೆಯರ ಸಹಿತ 6 ಜನರನ್ನು ವಶಕ್ಕೆ ಪಡೆಯಲಾಗಿದೆ.
ಮಣಿಪುರದ ಮಾಚಿ ಮತ್ತು ಖಂಪಾಂಗ್ ಖುಲ್ಲೆನ್ ಪ್ರದೇಶದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಅರೆಸೇನಾ ಪಡೆಯ ಸಿಬಂದಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2.5 ಕೋಟಿ ಮೌಲ್ಯ ಬೆಲೆಯ 28.2 ಟನ್ ಅಡಿಕೆಯನ್ನು ವಶಪಡಿಸಿಕೊಂಡಿವೆ ಎಂದು ಹೇಳಿದೆ. ಕಾರ್ಯಾಚರಣೆಯ ವೇಳೆ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಆರು ಮಂದಿ ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಅಡಿಕೆಯನ್ನು ಕಸ್ಟಮ್ಸ್ ಇಲಾಖೆಗೆ ಹಸ್ತಾಂತರಿಸಿದೆ.
ಆ.27 ರಂದು ಅಸ್ಸಾಂ ರೈಫಲ್ಸ್‌ನ ಪಡೆಗಳು ಮಣಿಪುರದ ರಾಜ್ಯದ ಚಂದೇಲ್ ಜಿಲ್ಲೆಯಿಂದ ಬೂದು ಮಾರುಕಟ್ಟೆಯಲ್ಲಿ 5.29 ಕೋಟಿ ಮೌಲ್ಯದ 61.2 ಟನ್ ಅಡಿಕೆಯನ್ನು ವಶಪಡಿಸಿಕೊಂಡಿತ್ತು.
ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಡಿಕೆ ಕಳ್ಳಸಾಗಣೆಯು ಸತತವಾಗಿ ನಡೆಯುತ್ತಿದೆ. ಮಣಿಪುರ ಮತ್ತು ಮಿಜೋರಾಂನ ಗಡಿಗಳ ಮೂಲಕ ವ್ಯಾಪಕವಾಗಿ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿದೆ. ಇದನ್ನು ಭದ್ರತಾ ಪಡೆಯ ಸಿಬಂದಿಗಳು ಸತತವಾಗಿ ತಡೆಯುತ್ತಿದ್ದಾರೆ. ಈ ಕಳ್ಳಸಾಗಾಣಿಕೆಯ ಅಡಿಕೆಯು ಭಾರತಕ್ಕೆ ಪ್ರವೇಶಿಸಿದ ನಂತರ ದೇಶದ ಇತರ ಭಾಗಗಳಿಗೆ ಸಾಗಿಸಲಾಗುತ್ತದೆ.
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…