ಕೊರೋನಾ ಕಲಿಸಿದ ಪಾಠ

April 17, 2021
12:20 PM

“ಕೊರೋನಾ”  ಈ ಜಗತ್ತನ್ನು ವ್ಯಾಪಿಸಿದ ಮಹಾಮಾರಿ. ಲಕ್ಷಾಂತರ ಜನರ ಸಾವಿಗೆ ಕಾರಣವಾದ  ಕೊರೋನಾ , ಅನೇಕರ ಬದುಕಿಗೆ ಪಾಠ ಕಲಿಸಿದೆ.

ಇಂದಿಗೂ ಕೊರೋನಾ ತೊಲಗಿಲ್ಲ. ಭಾರತದಲ್ಲಿ ಲಕ್ಷಾಂತರ ಜನರು ಈ ಮಹಾಮಾರಿಗೆ ತುತ್ತಾಗಿದ್ದಾರೆ. ಲಕ್ಷಾಂತರ ಜನರು ಇದರಿಂದಾಗಿ ಸಾವನ್ನಪ್ಪಿದ್ದಾರೆ. ಈಗಲೂ ಆತಂಕ ಹೆಚ್ಚಾಗಿದೆ.

ಪ್ರತಿಯೊಂದು ಕೆಟ್ಟದರಲ್ಲೂ ಒಳ್ಳೆಯದನ್ನು ಹುಡುಕುವ ಪ್ರಯತ್ನ ಮಾಡಬೇಕು.  ಕೊರೋನಾ ಎಂಬ  ಮಹಾಮಾರಿಯೂ ಸಹ ನಮಗೆ ಹಲವಾರು ಪಾಠಗಳನ್ನು ಕಲಿಸಿದೆ. ಕೊರೋನಾ  ಸಂಬಂಧಗಳ ಬೆಲೆಯನ್ನು ತಿಳಿಸಿಕೊಟ್ಟಿದೆ. ಈಗಿನ  ಯಾಂತ್ರಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೆಲಸ ಹುಡುಕಿಕೊಂಡು ದೂರದ ಪ್ರದೇಶಗಳಿಗೆ ತಮ್ಮ ತಂದೆ-ತಾಯಿ, ಅಣ್ಣ-ತಮ್ಮ, ಹೆಂಡತಿ-ಮಕ್ಕಳು ಎಲ್ಲರನ್ನೂ ಬಿಟ್ಟು ಹೋಗುತ್ತಾರೆ.

ಆದರೆ ಈ ಕೊರೋನಾ ಮಹಾಮಾರಿಗೆ ಹೆದರಿ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಮರಳಿದರು. ತಮ್ಮ ತಂದೆ-ತಾಯಿ, ಅಣ್ಣ-ತಮ್ಮ, ಹೆಂಡತಿ-ಮಕ್ಕಳ ಜೊತೆಗೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆದರು. ಪ್ರತಿನಿತ್ಯ ಬೆಳಿಗ್ಗೆ ಎದ್ದು ತಮ್ಮ ತಮ್ಮ ಕೆಲಸಗಳಿಗೆ ಹೊರಗಡೆ ಹೋಗುತ್ತಿದ್ದ ಜನರಿಗೆ “ಲಾಕ್ ಡೌನ್” ಆಗಿ ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗುತ್ತಿದ್ದ ಜನರು ಮನೆಯಲ್ಲಿಯೇ ಕುಳಿತುಕೊಳ್ಳುವಂತಾಯಿತು. ಕೆಲವರಿಗಂತೂ ಪ್ರತಿನಿತ್ಯ ಸೂರ್ಯ ಕಿಟಕಿಯಲ್ಲಿಯೇ ಹುಟ್ಟಿ ಕಿಟಕಿಯಲ್ಲಿಯೇ ಮುಳುಗುವಂತಾಯಿತು. ತಮ್ಮ ನೆರೆ-ಹೊರೆಯವರನ್ನು ಎಂದೂ ಮಾತನಾಡಿಸದ ಜನರು ಈ ಲಾಕ್ ಡೌನ್ ಸಮಯದಲ್ಲಿ ತಮ್ಮ ನೆರೆ-ಹೊರೆಯವರ ಜೊತೆಗೆ ಸಮಯವನ್ನು ಕಳೆದರು. ಹಲವಾರು ಜನರು ಚಿತ್ರಕಲೆ, ಬರವಣಿಗೆ ಮುಂತಾದ ತಮಗೆ ಇಷ್ಟವಾದ ಕಲೆಗಳನ್ನು ಕಲಿತರು. ಪ್ರೀತಿ, ಸ್ನೇಹ, ಸಂಬಂಧಗಳ ನಿಜವಾದ ಬೆಲೆಯನ್ನು ಅರಿತರು. ಸಮಯದ ಮಹತ್ವವನ್ನು ಅರಿತುಕೊಂಡರು.

ವಿದ್ಯಾರ್ಥಿಗಳ ಒಂದು ವರ್ಷವನ್ನು ಈ ಕೊರೋನಾ ಕಿತ್ತುಕೊಂಡಿದೆ ನಿಜ. ಆದರೆ ಆಕಸ್ಮಾತ್ತಾಗಿ ಎದುರಾಗುವ ಸಮಸ್ಯೆಗಳಿಗೆ ಈ ಕೊರೋನಾ ಒಂದು ಉತ್ತಮವಾದ ಉದಾಹರಣೆಯಾಗಿದೆ. ಮನುಷ್ಯರು ಅತ್ಯಂತ ಕಡಿಮೆ ಸೌಲಭ್ಯದಿಂದ ಹೇಗೆ ಬದುಕಬಹುದು ಎಂದು ಕೊರೋನಾ ಕಲಿಸಿಕೊಟ್ಟಿದೆ. ಕೊರೋನಾದಿಂದಾಗಿ ನಾವು  ಕಳೆದುಕೊಂಡಿದ್ದು ನಿಜ, ಆದರೆ ಅದೇ ರೀತಿ  ಪಡೆದುಕೊಂಡಿದ್ದೂ ನಿಜ. “ಕೊರೋನಾ” ಜೀವನದಲ್ಲಿ ನಮಗೆ ಒಂದು ಪಾಠವಾಗಿದೆ.

# ಉಲ್ಲಾಸ್ ಕಜ್ಜೋಡಿ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?
March 17, 2025
10:34 AM
by: ವಿವೇಕಾನಂದ ಎಚ್‌ ಕೆ
ಮುಂದಿನ ಸೂರ್ಯಗ್ರಹಣದ ಪ್ರಭಾವಗಳು ಏನು..? ಯಾವ ರಾಶಿಯವರಿಗೆ ಉತ್ತಮ..?
March 17, 2025
6:13 AM
by: ದ ರೂರಲ್ ಮಿರರ್.ಕಾಂ
ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!
March 16, 2025
8:13 AM
by: ರಮೇಶ್‌ ದೇಲಂಪಾಡಿ
ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!
March 16, 2025
8:00 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror