ಕೊರೋನಾ ಪಾಸಿಟಿವ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಜನರಿಗೆ ಧೈರ್ಯ ತುಂಬುವ ಕಾರ್ಯವನ್ನು ಸುಳ್ಯ ತಾಲೂಕಿನ ಗ್ರಾಮ ಭಾರತ ತಂಡದ ಗ್ರಾ ಪಂ ಸದಸ್ಯರು ಹಾಗೂ ಗ್ರಾಮ ಭಾರತ ತಂಡದ ಸದಸ್ಯರು ನಡೆಸಿದರು.
ಕಳೆದ ಕೆಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಕಂಡುಬಂದು ಸಂಪೂರ್ಣ ಗುಣಮುಖರಾದವರ ಮನೆಗೆ ಹಾಗೂ ಪಾಸಿಟಿವ್ ಕಂಡುಬಂದಿರುವ ಮತ್ತು ಸಾಮಾನ್ಯ ಜ್ವರ ಬಂದಿರುವ ಮನೆಗಳಿಗೆ ಭೇಟಿ ನೀಡಿದ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾ ಪಂ ಒಂದನೇ ವಾರ್ಡ್ ನ ಗ್ರಾಮ ಭಾರತದ ತಂಡದ ಗ್ರಾ ಪಂ ಸದಸ್ಯರು ಹಾಗೂ ಗ್ರಾಮ ಭಾರತ ತಂಡದ ಸದಸ್ಯರು ಧೈರ್ಯ ತುಂಬಿದರು. ಜ್ವರ ಪೀಡಿತರ ಮನೆಗೆ ತೆರಳಿ ಮಾನಸಿಕ ಧೈರ್ಯ ತುಂಬುವುದು, ಮನೆ ಪರಿಸ್ಥಿತಿ ಗಮನಿಸಿ ಅಗತ್ಯ ವಸ್ತುಗಳ ವಿತರಣೆ ಮತ್ತು ಔಷಧಿಯ ಸಲಹೆ , ತುರ್ತು ಚಿಕಿತ್ಸೆಗೆ ಬೇಕಾದ ನೆರವಿಗೆ ಮಾಹಿತಿ ನೀಡಲಾಯಿತು. ಯಾವುದೇ ಕಾರಣಕ್ಕೂ ಗ್ರಾಮಸ್ಥರು ಭಯಗೊಳ್ಳುವ ಅವಶ್ಯಕತೆ ಇಲ್ಲ, ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸದಸ್ಯರು ಧೈರ್ಯ ತುಂಬಿದರು. ಯಾವುದೇ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವಂತೆ ಸಲಹೆ ನೀಡಿದರು. ಯಾವುದೇ ಸಹಾಯ ಬೇಕಿದ್ದರೆ ಗ್ರಾ ಪಂ ಸದಸ್ಯರುಗಳಿಗೆ ಅಥವಾ ಸ್ವಯಂ ಸೇವಕರಿಗೆ ಮಾಹಿತಿ ನೀಡಲು ತಿಳಿಸಲಾಯಿತು.
ಈ ಸಂದರ್ಭ ಗ್ರಾ ಪಂ ಸದಸ್ಯರುಗಳಾದ ಎಂ ಕೆ ಶಾರದಾ, ಲತಾ ಕುಮಾರಿ ಆಜಡ್ಕ, ಭರತ್ ಕೆವಿ, ವಸಂತ ಮೊಗ್ರ ಗ್ರಾಮ ಭಾರತದ ತಂಡದ ಸದಸ್ಯರುಗಳಾದ ಹರ್ಷಿತ್ ಕಾಂತಿಲ, ಬಾಬು ಕಮಿಲ, ರವೀಂದ್ರ ಆಜಡ್ಕ, ಮಹೇಶ್ ಪುಚ್ಚಪ್ಪಾಡಿ ಮೊದಲಾದವರು ಇದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…