Advertisement
MIRROR FOCUS

ದೇಶದ ಆರ್ಥಿಕ ಅಸಮಾನತೆ ಇಳಿಮುಖ | ಶೇಕಡಾ 5ಕ್ಕಿಂತ ಕಡಿಮೆಯಾದ ಬಡತನ | ಉತ್ತಮ ಸ್ಥಿತಿಯತ್ತ ಗ್ರಾಮೀಣ ಪ್ರದೇಶಗಳು – ಸಮೀಕ್ಷೆ

Share

ಅಭಿವೃದ್ಧಿ ಹೊಂದುತ್ತಿರುವ ದೇಶ(Developing country) ನಮ್ಮ ಭಾರತ(India). ದಿನದಿಂದ ದಿನಕ್ಕೆ ದೇಶದ ಆರ್ಥಿಕ ಸ್ಥಿತಿ(Economic condition) ಹಾಗೂ ಜನರ ಜೀವನ ವೆಚ್ಚ ಏರುತ್ತಾ ಸಾಗಬೇಕು. ಮೂಲಭೂತ ಸೌಕರ್ಯಗಳು(Basic amenities) ಸುಧಾರಬೇಕು. ಈ ನಿಟ್ಟಿನಲ್ಲಿ ಭಾರತ ಸಾಗುತ್ತಿದೆಯಾ ಎನ್ನುವ ಬಗ್ಗೆ ಸಮೀಕ್ಷೆಯೊಂದನ್ನು(Survey) ನಡೆಸಲಾಗಿತ್ತು. ಅದರ ಪ್ರಕಾರ ದೇಶದಲ್ಲಿ ಬಡತನ ಪ್ರಮಾಣ(poverty rate) ಶೇಕಡಾ 5 ಕ್ಕಿಂತ ಕೆಳಗೆ ಇಳಿದಿದೆ. ನಗರ ಪ್ರದೇಶಗಳ(Urban) ಜೊತೆಗೆ ಗ್ರಾಮೀಣ ಜನರು(Rural People) ಕೂಡ ಉತ್ತಮ ಸ್ಥಿತಿಗೆ ತಲುಪುತ್ತಿದ್ದಾರೆ. ಆರ್ಥಿಕ ಅಸಮಾನತೆ(economic inequality) ಇಳಿಮುಖವಾಗುತ್ತಿದೆ ಎಂಬ ವರದಿಯೊಂದು ಹೊರಬಿದ್ದಿದೆ.

ನ್ಯಾಷನಲ್​ ಸ್ಯಾಂಪಲ್​ ಸರ್ವೇ ಆಫೀಸ್​ (NSSO) ಬಿಡುಗಡೆ ಮಾಡಿರುವ ಗೃಹಬಳಕೆದಾರರ ವೆಚ್ಚ ಸಮೀಕ್ಷೆಯಲ್ಲಿ ಈ ಅಂಶಗಳು ಇವೆ. ದೇಶ ನಿಧಾನವಾಗಿ ಬಡತನ ರೇಖೆಯಿಂದ ಹೊರಬರುತ್ತಿದೆ. ಜನರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ ಎಂಬ ಮುನ್ಸೂಚನೆಯನ್ನು ಈ ವರದಿ ಉಲ್ಲೇಖಿಸಿದೆ.‌ ಈ ಬಗ್ಗೆ ನೀತಿ ಆಯೋಗದ ಸಿಇಒ ಸುಬ್ರಹ್ಮಣ್ಯಂ ಅವರು ಮಾತನಾಡಿದ್ದಾರೆ.

ಈ ಬಗ್ಗೆ ವಿಶ್ಲೇಷಿಸಿರುವ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು, 2011-12ಕ್ಕೆ ಹೋಲಿಸಿದರೆ ತಲಾ ಗೃಹಬಳಕೆಯ ಮಾಸಿಕ ವೆಚ್ಚ 2022-23ರಲ್ಲಿ ದ್ವಿಗುಣಗೊಂಡಿದೆ. ಸರ್ಕಾರ ಕೈಗೊಂಡಿರುವ ಬಡತನ ನಿರ್ಮೂಲನೆ ಕ್ರಮಗಳು ಯಶಸ್ಸು ಪಡೆಯುತ್ತಿವೆ ಎಂಬುದು ಕೂಡ ಇಲ್ಲಿ ವಿಧಿತವಾಗುತ್ತಿದೆ. ದೇಶದ ಬಡತನ ಪ್ರಮಾಣವು ಶೇಕಡಾ 5ಕ್ಕಿಂತ ಕಡಿಮೆಗೆ ಕುಸಿದಿದೆ ಎಂದರು.

ಅಭಿವೃದ್ಧಿ ಪಥದಲ್ಲಿ ಹಳ್ಳಿಗಳು: ನಗರ ಪ್ರದೇಶಗಳ ಜೊತೆಗೆ ಹಳ್ಳಿಗಾಡಿನ ಜನರೂ ಉತ್ತಮ ಸ್ಥಿತಿಗೆ ತಲುಪುತ್ತಿದ್ದಾರೆ. ಸಮಾಜದಲ್ಲಿನ ಜನರನ್ನು 20 ವಿವಿಧ ವರ್ಗಗಳನ್ನಾಗಿ ವಿಂಗಡಿಸಿ ಸಮೀಕ್ಷೆ ನಡೆಸಲಾಗಿದೆ. ವರದಿ ಪ್ರಕಾರ, ಎಲ್ಲ ವರ್ಗಗಳ ಸರಾಸರಿ ತಲಾದಾಯ ಗ್ರಾಮೀಣ ಪ್ರದೇಶದಲ್ಲಿ 3,773 ರೂಪಾಯಿ ಇದ್ದರೆ, ನಗರ ಪ್ರದೇಶಗಳಲ್ಲಿ 6,459 ರೂಪಾಯಿ ಇದೆ ಎಂದು ನಮೂದಿಸಿದೆ. ನಗರಗಳಲ್ಲಿ ಹೆಚ್ಚಿನ ದರ ನಿಗದಿ ಮಾಡಿದ್ದರೂ, ಗ್ರಾಮೀಣರು ಹಿಂದೆ ಉಳಿದಿಲ್ಲ ಎಂಬುದನ್ನು ಸಮೀಕ್ಷೆ ಗುರುತಿಸುತ್ತದೆ ಎಂದು ವಿಶ್ಲೇಷಿಸಿದರು.

ಅತಿ ಕಡಿಮೆ ತಲಾದಾಯ ಗುರುತಿಸಿದರೂ, ಗ್ರಾಮೀಣ ಪ್ರದೇಶಗಳಲ್ಲಿ ಅದು ರೂಪಾಯಿ 1,373 ಮತ್ತು ನಗರ ಪ್ರದೇಶಗಳಲ್ಲಿ 2,001 ರೂಪಾಯಿ ಇದೆ ಎಂದು ನಿಗದಿಪಡಿಸಲಾಗಿದೆ. ಬಡತನದ ಪ್ರಮಾಣವನ್ನು ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಇಂದಿನ ದರಕ್ಕೆ ಹೋಲಿಸಿದರೆ, ಶೇಕಡಾ 0-5 ಸರಾಸರಿಯಷ್ಟು ಕಾಣುತ್ತೇವೆ. ಇದರರ್ಥ, ದೇಶದಲ್ಲಿ ಬಡತನ 0 ದಿಂದ 5 ಪ್ರತಿಶತದ ಒಳಗೆ ಇದೆ ಎಂಬುದು ತಿಳಿಯುತ್ತದೆ ಎಂದು ನೀತಿ ಆಯೋಗದ ಸಿಇಒ ತಿಳಿಸಿದರು.

1.55 ಲಕ್ಷ ಗ್ರಾಮೀಣ ಕುಟುಂಬಗಳು ಮತ್ತು 1.07 ಲಕ್ಷ ನಗರ ಕುಟುಂಬಗಳಿಂದ ನೀಡಿದ ಮಾಹಿತಿಯನ್ನು ಆಧರಿಸಿ ಎನ್​ಎಸ್​ಎಸ್​ಒ ಈ ವರದಿಯನ್ನು ತಯಾರಿಸಿದೆ. ಇನ್ನು, ಯಾವುದೇ ವಸ್ತುಗಳ ಬಳಕೆಯ ವಿಚಾರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 2.5 ಪಟ್ಟು ಹೆಚ್ಚಾಗಿದೆ. ಅದರಲ್ಲೂ ನಗರಕ್ಕಿಂತ ಹಳ್ಳಿಗಳಲ್ಲೇ ಅತಿ ಹೆಚ್ಚಿನ ಬಳಕೆ ದರ ಇದೆ. ನಗರ – ಗ್ರಾಮೀಣ ಅಸಮಾನತೆಗಳನ್ನು ಇದು ಕಡಿಮೆ ಮಾಡುತ್ತದೆ ಎಂದು ಸುಬ್ರಹ್ಮಣ್ಯಂ ಹೇಳಿದರು.

Accordingly, the poverty rate in the country has come down below 5 percent. Along with urban areas, rural people are also getting better off. A good report has come out that economic inequality is on the decline.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

5 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

5 hours ago

ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ

ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…

6 hours ago

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್‌ 14 ಅಥವಾ 15ರಿಂದ ಹಲವೆಡೆ…

15 hours ago

ಗ್ಯಾಸ್‌ ಸರಬರಾಜು ಆತಂಕ : ಹೋಟೆಲ್‌ ಉದ್ಯಮಕ್ಕೆ ಹೊಡೆತ, ಗೃಹ ಬಳಕೆದಾರರಿಗೆ ಆದ್ಯತೆ

ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್‌ ಮತ್ತು ಆಹಾರ ವಿತರಣೆ…

15 hours ago

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ

ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…

19 hours ago