ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್ 2022ರಲ್ಲಿ ‘ಕೋವಿಡ್-ಪಾಸಿಟಿವ್ ಆಟಗಾರರಿಗೆ’ ‘ಆಡುವ ಪರಿಸ್ಥಿತಿಗಳು’ ಎಂಬ ನಿಯಮಗಳಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಪ್ರಕಾರ ಕೋವಿಡ್ ಪಾಸಿಟಿವ್ ಇದ್ದರೂ ವೈದ್ಯರ ಶಿಫಾರಸು ಇದ್ದರೆ ಆಡಲು ಅವಕಾಶ ಕಲ್ಪಿಸಲಾಗಿದೆ.
ಇತ್ತೀಚಿನ ಐಸಿಸಿ ಆಟದ ಪರಿಸ್ಥಿತಿಗಳ ಪ್ರಕಾರ, ತಂಡದ ವೈದ್ಯರು ಅನುಮತಿ ನೀಡಿದರೆ ಕೊರೊನಾ ಪಾಸಿಟಿವ್ ಇದ್ದರೂ ಆಟಗಾರರಿಗೆ ಆಡಲು ಅನುಮತಿಸಲಾಗುವುದು. ಆದರೆ ಕೋವಿಡ್-ಪಾಸಿಟಿವ್ ಆಟಗಾರನಿಗೆ ತಂಡದ ವೈದ್ಯರಿಂದ ಅಗತ್ಯವಾದ ಕಡ್ಡಾಯ ಅನುಮತಿ ಸಿಗದಿದ್ದರೆ ತಂಡವು ಅವರನ್ನ ಬದಲಾಯಿಸಬಹುದು.
ವರದಿಯ ಪ್ರಕಾರ, ಒಬ್ಬ ಆಟಗಾರನಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದರೆ, ಪಂದ್ಯಾವಳಿಯ ಸಮಯದಲ್ಲಿ ಆತನಿಗೆ ಯಾವುದೇ ನಿಯಮಿತ ಪರೀಕ್ಷೆ ಇರುವುದಿಲ್ಲ ಅಥವಾ ಪ್ರತ್ಯೇಕವಾಗಿರಬೇಕಾಗಿಲ್ಲ. ಈ ಹಿಂದೆ, ಕೋವಿಡ್-ಪಾಸಿಟಿವ್ ಆಟಗಾರನು ಹಲವಾರು ಕೋವಿಡ್ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗಿತ್ತು ಮತ್ತು ಅವರನ್ನ ಪ್ರತ್ಯೇಕಿಸಲಾಗಿತ್ತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…