ಕೊರೋನಾ ಲಸಿಕೆ ಪರಿಣಾಮದ ಬಗ್ಗೆ ಅಧ್ಯಯನ ವರದಿ ಬಿಡುಗಡೆ | 65+ ವಯಸ್ಸಿನ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳ |

April 30, 2021
7:48 PM

ಕೊರೋನಾ ಲಸಿಕೆಯ ಬಗ್ಗೆ ಅಮೇರಿಕಾದ ರೋಗ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ನಡೆಸಿದ ಫೆಡರಲ್‌ ಸ್ಟಡಿಯ ವರದಿಯ ಪ್ರಕಾರ ಕೊರೋನಾ ಲಸಿಕೆ ಹಾಕಿಸಿಕೊಂಡ ವಯಸ್ಕರಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು  ತಗ್ಗಿಸಿದೆ ಎಂದು ಸಾಬೀತಾಗಿದೆ. ವಯಸ್ಕರಲ್ಲಿ  ಕೊರೋನಾ ಪಾಸಿಟಿವ್‌ ಕಂಡುಬಂದರೂ ಹಿರಿಯರನ್ನು ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಶೇ.94ರಷ್ಟು ಕಡಿಮೆ ಎನ್ನುವುದು  ವರದಿಯಲ್ಲಿ ಕಂಡುಬಂದಿರುವ ಅಂಶ.

Advertisement
Advertisement

ಅಮೇರಿಕಾದ ರೋಗ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ನಡೆಸಿದ ಫೆಡರಲ್‌ ಸ್ಟಡಿ ಇದಾಗಿದ್ದು, ಕೊರೋನಾ ಲಸಿಕೆ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಇದು ಸೋಂಕು ನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಲಸಿಕೆಗಳ ಪರೀಕ್ಷೆಯ ವೇಳೆ ಇದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.

Advertisement

ಸಿಡಿಸಿಯ ಅಧ್ಯಯನ ವರದಿ ಪ್ರಕಾರ, ಕೊರೋನಾ ಲಸಿಕೆಗಳು 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಶೇಕಡಾ 94 ರಷ್ಟು ಪರಿಣಾಮಕಾರಿ, ಅವರು ಎರಡೂ ಡೋಸ್ ಪಡೆದಿದ್ದಾರೆ ಮತ್ತು ಎರಡನೇ ಡೋಸ್ ನಂತರ 14 ದಿನಗಳ ನಂತರವೂ ಪರಿಶೀಲನೆ ಮಾಡಲಾಗಿದೆ. ಜನವರಿಯಿಂದ ಮಾರ್ಚ್ ವರೆಗೆ 14 ರಾಜ್ಯಗಳಲ್ಲಿ 400 ಕ್ಕೂ ಹೆಚ್ಚು ಆಸ್ಪತ್ರೆಗೆ ದಾಖಲಾದ ವಯಸ್ಕರನ್ನು ಈ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕಾರ ಕೊರೋನಾದ ಎರಡು ಡೋಸ್‌ಗಳನ್ನು ಪಡೆದ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಲ್ಲಿ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.94ರಷ್ಟು ಕಡಿಮೆ ಕಂಡುಬಂದಿದ್ದು, ಒಂದು ಡೋಸ್‌‌ ಪಡೆದು ಕೊರೋನಾ ಸೋಂಕಿಗೆ ಒಳಗಾದವರ ಪೈಕಿ ಈ ಪ್ರಮಾಣ ಶೇ.64ರಷ್ಟು ಇರುತ್ತದೆ ಎಂದು  ಉಲ್ಲೇಖಿಸಲಾಗಿದೆ.

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror