ರಸ್ತೆ ಬದಿಯಲ್ಲಿ ಅಡ್ಡಾಡುವ ಹಸು, ಎತ್ತುಗಳ ಬಗ್ಗೆ ಸಾರ್ವಜನಿಕರು ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಬುಧವಾರ ಚೆನ್ನೈನಲ್ಲಿ ಶಾಲಾ ಬಾಲಕಿಯ ಮೇಲೆ ರಸ್ತೆ ಬದಿಯಲ್ಲಿ ಅಡ್ಡಾಡುತ್ತಿದ್ದ ಗೂಳಿಯೊಂದು ಭಯಾನಕ ರೀತಿಯಲ್ಲಿ ದಾಳಿ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದೀಗ ಆಡಳಿತವು ಎಚ್ಚೆತ್ತುಕೊಂಡಿದೆ.ಈ ಘಟನೆಯು ಎಲ್ಲಾ ಕಡೆಗೂ ಎಚ್ಚರಿಕೆ ಆಗಬೇಕಿದೆ.
ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯ ಮೇಲೆ ಗೂಳಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಚೆನ್ನೈನ ಎಂಎಂಡಿಎ ಕಾಲೋನಿ ಬಳಿಯ ಎಲಂಗೋ ನಗರದಲ್ಲಿ ಬುಧವಾರ ಮಧ್ಯಾಹ್ನ 3.20 ರ ಸುಮಾರಿಗೆ ಈ ಘಟನೆ ನಡೆದಿದೆ. ಗಾಂಧಿನಗರದ ನಿವಾಸಿ ಆಯೇಷಾ ತನ್ನ ತಾಯಿ ಮತ್ತು ತನ್ನ ಕಿರಿಯ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಗೂಳಿಯು ದಾಳಿ ಮಾಡಿದೆ.
ಸಮೀಪದ ಮನೆಯೊಂದರಿಂದ ದೊರೆತ ಸಿಸಿಟಿವಿ ವಿಡಿಯೋದಲ್ಲಿ ಎರಡು ಹಸುಗಳು ಬಾಲಕಿ ಮುಂದೆ ನಡೆಯುತ್ತಿರುವುದು ಕಂಡು ಬಂದಿದೆ. ಇದ್ದಕ್ಕಿದ್ದಂತೆ, ಒಂದು ಹಸುವು ಹುಡುಗಿಯ ಕಡೆಗೆ ತಿರುಗಿ ಅವಳ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಕೊಂಬುಗಳಿಂದ ತಿವಿದು ಬಾಲಕಿಯನ್ನು ಎತ್ತಿ ಎಸೆದಿದೆ. ಈ ಸಂದರ್ಭ ಸ್ಥಳೀಯರು ಗೂಳಿಯನ್ನು ಹೆದರಿಸಲು ಪ್ರಯತ್ನಿಸುತ್ತಿರುವುದು ಹಾಗೂ ಬಾಲಕಿಯ ತಾಯಿ ಸಹಾಯಕ್ಕಾಗಿ ಕುರುಚಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಸತತ ಪ್ರಯತ್ನಗಳ ನಂತರ, ಗೂಳಿಯನ್ನು ಸ್ಥಳದಿಂದ ಸ್ಥಳೀಯರು ಓಡಿಸಿದ್ದಾರೆ. ಬಾಲಕಿ ಗಾಯಗೊಂಡಿದ್ದಳು.
ಈ ವಿಡಿಯೋ ವೈರಲ್ ಆಗಿರುವುದು ಗಮನಿಸಿದ ಚೆನ್ನೈ ಕಾರ್ಪೊರೇಷನ್ ಕಮಿಷನರ್ ಜೆ ರಾಧಾಕೃಷ್ಣನ್, ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…