ಮದ್ಯ ಪ್ರಿಯರಿಗೆ ಹಿಮಾಚಲ ಪ್ರದೇಶದಲ್ಲಿ ಹೆಚ್ಚು”ವರಿ”….| ಪ್ರತಿ ಬಾಟಲ್ ಮೇಲೆ 10 ರೂ. ಗೋ ತೆರಿಗೆ |ನಮ್ಮ ರಾಜ್ಯದಲ್ಲೂ ಮಾಡಿದರೆ ಒಳ್ಳೆಯದಿತ್ತು….!

Advertisement

ಇದಪ್ಪ ವರಸೇ ಅಂದ್ರೆ. ಕುಡಿಯೊದೇನೋ ಕುಡಿತಿರಿ.. ಹಾಗೆ ನಿಮ್ಮ ಹೆಂಡತಿ ಮಕ್ಕಳಿಗೆ ಒಂದರ್ಧ ಲೀಟರ್ ಹಾಲು ಆದ್ರೂ ತಗೊಂಡೋಗ್ರೋ ಅಂದ್ರೆ ಈ ಕುಡುಕರು ನಾವು ಕುಡಿದ್ರೆ ಸಾಕು, ಹೆಂಡತಿ ಮಕ್ಳು ಹಾಳಾಗೊಗ್ಲಿ ಅಂತಿದ್ರು. ಆದ್ರೆ ಇವಾಗ ಹಿಮಾಚಲದ ಪ್ರದೇಶದ ಸರ್ಕಾರ ಅಂಥವರಿಗೆ ಸರಿಯಾಗೆ ಬುದ್ಧಿ ಕಲಿಸಿದೆ.

Advertisement

ಮದ್ಯಪಾನ ಪ್ರಿಯರಿಗೆ ಶಾಕ್ ನೀಡಿರುವ ಹಿಮಾಚಲ ಪ್ರದೇಶ ಸರ್ಕಾರ ಪ್ರತಿ ಬಾಟಲ್ ಮದ್ಯದ ಮೇಲೆ 10 ರೂ. ‘ಗೋ ತೆರಿಗೆವಿಧಿಸುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸುರೇಶ್ ಕುಮಾರ್ ಸುಖು ಮಾರ್ಚ್ 15ರಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದರು. ಇದರಲ್ಲಿಗೋ ತೆರಿಗೆವಿಧಿಸುವ ನಿರ್ಧಾರ ಪ್ರಕಟಿಸಿದ್ದಾರೆ.

Advertisement
Advertisement

ರಾಜ್ಯದ ಆರ್ಥಿಕ ಚಟುವಟಿಕೆಯಲ್ಲಿ ಜಾನುವಾರುಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಹಸು ಸಾಕಾಣಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇದರಿಂದ ವಾರ್ಷಿಕ ನೂರು ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನು ಹಿಮಾಚಲ ಪ್ರದೇಶ ಸರ್ಕಾರ ಹೊಂದಿದೆ ಎನ್ನಲಾಗಿದೆ.

Advertisement

Advertisement

ಬಜೆಟ್ ಭಾಷಣ ಮಾಡಿದ ಸುಖು, ಮೊದಲು ಹಲವು ರಾಜ್ಯಗಳಲ್ಲಿ ಗೋ ಸಂಬಂಧಿ ತೆರಿಗೆ ಸಂಗ್ರಹಿಸಲಾಗುತ್ತದೆ. ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಚಂಡೀಗಢಗಳಲ್ಲಿ ಗೋ ತೆರಿಗೆ ಸಂಗ್ರಹಿಸಲಾಗುತ್ತಿದೆ. ರಾಜ್ಯಗಳಲ್ಲಿ ಮದ್ಯದ ಹೊರತಾಗಿ ಬೇರೆ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ತೆರಿಗೆಯನ್ನು ಮದ್ಯದ ಮೇಲೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೇ ರೀತಿ ನಮ್ಮ ರಾಜ್ಯದಲ್ಲೂ ಮಾಡಿದ್ರೆ ಒಳ್ಳೆಯದಿತ್ತು. ಹೇಗೂ ರಾಜ್ಯದ ಬೊಕ್ಕಸಕ್ಕೆ ತಮ್ಮಿಂದಾದ ಸಹಾಯ ಮಾಡ್ತಿದ್ದಾರೆ. ಹಾಗೆ ಗೋ ರಕ್ಷಣೆಗೂ ಮದ್ಯ ಪ್ರಿಯರು ಸಹಕರಿಸಿದರೆ ಗೋ ಸಂತತಿ ಉಳಿಯಬಹುದು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮದ್ಯ ಪ್ರಿಯರಿಗೆ ಹಿಮಾಚಲ ಪ್ರದೇಶದಲ್ಲಿ ಹೆಚ್ಚು”ವರಿ”….| ಪ್ರತಿ ಬಾಟಲ್ ಮೇಲೆ 10 ರೂ. ಗೋ ತೆರಿಗೆ |ನಮ್ಮ ರಾಜ್ಯದಲ್ಲೂ ಮಾಡಿದರೆ ಒಳ್ಳೆಯದಿತ್ತು….!"

Leave a comment

Your email address will not be published.


*