ಪರಿಸರ ಸ್ನೇಹಕ್ಕೆ ಒಂದು ಹೆಜ್ಜೆ | ಗೋಮಯದಿಂದ ತಯಾರಾದ ಕಾಗದ | ಮೊದಲ ಬಾರಿಗೆ ತಯಾರಾದ ಕಾಗದ ರಾಮಚಂದ್ರಾಪುರ ಮಠದಲ್ಲಿ ಲೋಕಾರ್ಪಣೆ‌ |

July 25, 2022
8:11 PM

ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಮತ್ತು ಸಂಶೋಧನಾ ಖಂಡದ ವತಿಯಿಂದ ಗೋಮಯದಿಂದ ತಯಾರಿಸಿದ ಕಾಗದದ ಲೋಕಾರ್ಪಣೆಯನ್ನು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ   ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ  ನೆರವೇರಿಸಿದರು.

ಭಾರತೀಯ ಗೋತಳಿಯ ಸಂವರ್ಧನೆ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕಾಮದುಘಾ ವತಿಯಿಂದ ಗೋಮಯ ಕಾಗದ ತಯಾರಿಸಿರುವುದು ಅತ್ಯಂತ ಅರ್ಥಪೂರ್ಣ. ಶ್ರೀಮಠದಲ್ಲಿ ಇಂಥ ಪರಿಸರಸ್ನೇಹಿ ಕಾಗದದ ಬಳಕೆಯನ್ನು ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದರು. ಇದು ರಾಸಾಯನಿಕ ಮುಕ್ತವಾಗಿರುವುದರಿಂದ ಪರಿಸರ ಸ್ನೇಹಿಯಾಗಿರುವುದು ಮಾತ್ರವಲ್ಲದೇ, ಗೋವಿನ ಉತ್ಪನ್ನಗಳ ಮೌಲ್ಯವರ್ಧನೆಯಲ್ಲೂ ಮಹತ್ವದ ಅಂಶ ಎನಿಸಲಿದೆ. ಶ್ರೀಮಠದ ಭಕ್ತರು ಮತ್ತು ಸಾರ್ವಜನಿಕರು ಇಂಥ ಪ್ರಯೋಗಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಶ್ರೀಗಳು ಆಶಿಸಿದರು.ಗೋಮಯ ಕಾಗದದಲ್ಲಿ ಮುದ್ರಿಸಿದ ವಿವಾಹ ಆಮಂತ್ರಣವನ್ನೂ ಸ್ವಾಮೀಜಿ ಬಿಡುಗಡೆ ಮಾಡಿ ಇದು ಅನುಕರಣೀಯ ಎಂದರು.

ಸಂಪೂರ್ಣ ಪರಿಸರ ಸ್ನೇಹಿ, ರಾಸಾಯನಿಕ ರಹಿತ, ನೈಸರ್ಗಿಕವಾದ ಈ ವಿಶಿಷ್ಟ ಕಾಗದವನ್ನು ಶುದ್ಧ ದೇಸಿ ಗೋವಿನ ಸೆಗಣಿಯಿಂದ ತಯಾರಿಸಲಾಗಿದ್ದು, ಇದೇ ಮೊದಲ ಬಾರಿಗೆ ಇದನ್ನು ಸಿದ್ಧಪಡಿಸಲಾಗಿದೆ ಎಂದು ಈ ಯೋಜನೆ ಬಗ್ಗೆ ವಿವರ ನೀಡಿದ ಕಾಮದುಘಾ ವಿಭಾಗದ ಡಾ.ವೈ.ವಿ.ಕೃಷ್ಣಮೂರ್ತಿ ವಿವರಿಸಿದರು. ಸಾಮಾನ್ಯ ಕಾಗದ ಉತ್ಪಾದನೆಗೆ ಮರ ಹಾಗೂ ನೀರು ವ್ಯಾಪಕವಾಗಿ ಬಳಕೆಯಾಗುವುದರಿಂದ ಪರಿಸರಕ್ಕೆ ಇದು ದೊಡ್ಡ ಹೊರೆಯಾಗಿ ಪರಿಣಿಸುತ್ತಿದೆ. ವಿದೇಶಗಳಲ್ಲಿ ಇಂದು ಇಂಥ ಪರಿಸರ ಸ್ನೇಹಿ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ ಇದ್ದು, ನಾವೂ ಇದರ ಮಹತ್ವ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ಸಂಶೋಧನಾ ಖಂಡದ ಡಾ.ರವಿ ಪಾಂಡವಪುರ, ಲೋಕಸಂಪರ್ಕ ವಿಭಾಗದ ಶಿಶಿರ್ ಹೆಗಡೆ, ಮಾಧ್ಯಮ ವಿಭಾಗದ ಉದಯಶಂಕರ ಮಿತ್ತೂರು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror