ಅಡಿಕೆಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆ | ಕೃಷಿಕರು ಹಾಗೂ ವಿಜ್ಞಾನಿಗಳು ಜೊತೆಯಾದರೆ ಇನ್ನಷ್ಟು ಕೆಲಸ

August 27, 2022
1:47 PM

ವಿಜ್ಞಾನಿಗಳ ಕೃಷಿ ಸಲಹೆಗಳ ಜೊತೆಗೆ ಕೃಷಿಯಲ್ಲಿ ಕೃಷಿಕರ ಅನುಭವಗಳು ಕೂಡಾ ಮಹತ್ವ ಪಡೆಯುತ್ತವೆ. ಹೀಗಾಗಿ ಕೃಷಿಕರು ಮತ್ತು ವಿಜ್ಞಾನಿಗಳ ಸಂವಾದಗಳು ನಡೆಯಬೇಕು. ಆಗ ಇನ್ನಷ್ಟು ಕೆಲಸ ನಡೆಯಲು ಸಾಧ್ಯ ಎಂದು ಕೃಷಿ‌ ವಿಜ್ಞಾನಿ ಡಾ.ರವಿ ಭಟ್ ಹೇಳಿದರು.

Advertisement
Advertisement
Advertisement
Advertisement

ಅವರು ಶನಿವಾರ ವಿಟ್ಲದ‌ ಸಿಪಿಸಿಆರ್ ಐ ಹಾಗೂ ಬಂಟ್ವಾಳ ತೋಟಗಾರಿಕಾ ಇಲಾಖೆಯ ವತಿಯಿಂದ ಸಿಪಿಸಿಆರ್ ಐ ವಠಾರದಲ್ಲಿ ನಡೆದ ಅಡಿಕೆಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆಯ ಕಾರ್ಯಾಗಾರದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಅಡಿಕೆ ಬೆಳೆಯಲ್ಲಿ ಸಸಿಗಳ ಆರೋಗ್ಯ ನಿರ್ವಹಣೆ ಅಗತ್ಯವಾಗಿದೆ. ಅಡಿಕೆ ಹಳದಿ ಎಲೆರೋಗ ಸೇರಿದಂತೆ ಇತರ ರೋಗಗಳ ಅಧ್ಯಯನ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಅಧ್ಯಯನ, ‌ಪರಿಹಾರದ ಬಗ್ಗೆ ಪ್ರಯತ್ನ ನಡೆಯುತ್ತಿದೆ. ಮುಂದೆ ಕೃಷಿಕರು ಹಾಗೂ ವಿಜ್ಞಾನಿಗಳ ನಡುವೆ ಸಂವಾದಕ್ಕೆ ಪ್ರತೀ ತಿಂಗಳ ಸಭೆ ನಡೆಸುವ ಬಗ್ಗೆಯೂ‌ ಚಿಂತನೆ ನಡೆಸಲಾಗುವುದು ಎಂದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ, ಅಡಿಕೆ ಕೃಷಿಯಲ್ಲಿ ಇಂದು ತಂತ್ರಜ್ಞಾನಗಳ ಬಳಕೆ ಅನಿವಾರ್ಯವಾಗಿದೆ.‌ ತಾಂತ್ರಿಕ ಸಲಹೆ ಮೂಲಕವೇ ಯುವ ಕೃಷಿಕರು ಅಡಿಕೆ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳೆಗಾರರು ಹಳದಿ ಎಲೆರೋಗ ಹಾಗೂ ಕೊಳೆರೋಗಕ್ಕೆ ಸಂಬಂಧಿಸಿದಂತೆ ಹೆಚ್ಚು ಅಧ್ಯಯನ ಹಾಗೂ ಪರಿಹಾರದ ನಿರೀಕ್ಷೆಯನ್ನು ಬೆಳೆಗಾರರು ಹೊಂದಿದ್ದಾರೆ ಎಂದರು.

Advertisement

ಅತಿಥಿಗಳಾಗಿ ಮಾತನಾಡಿದ ಅಡಿಕೆ ಪತ್ರಿಕೆ ಸಂಪಾದಕ‌ ಶ್ರೀಪಡ್ರೆ, ವಿಜ್ಞಾನಿ ಹಾಗೂ ಕೃಷಿ‌ಕ‌ ವಿಜ್ಞಾನಿಗಳ ಸಂವಹನ ನಿರಂತರವಾಗಿ ನಡೆಯಬೇಕು ಎಂದರು.

ಅತಿಥಿಯಾಗಿದ್ದ ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ ಮಾತನಾಡಿ, ಅಡಿಕೆ ಹಳದಿ ಎಲೆರೋಗದ ಗಂಭೀರತೆಯನ್ನು ಹಾಗೂ ಕೃಷಿಕರ ಸಮಸ್ಯೆಯ ಬಗ್ಗೆ ವಿವರಿಸಿದರು.

Advertisement

ಬಂಟ್ವಾಳ ತೋಟಗಾರಿಕಾ ಇಲಾಖಾ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್‌ ಡಿಸೋಜಾ, ಸಿಪಿಸಿಆರ್ ಐ ವಿಜ್ಞಾನಿ ಗಳಾದ ಡಾ.ವಿನಾಯಕ , ಡಾ.ತುಂಬನ್ ಉಪಸ್ಥಿತರಿದ್ದರು.

ಇದೇ ವೇಳೆ ವಿಜ್ಞಾನಿ ಡಾ.ಥವಾಪ್ರಕಾಶ್ ಪಾಂಡ್ಯನ್‌ ಅಭಿವೃದ್ಧಿಪಡಿಸಿದ ಟ್ರೈಕೋಡರ್ಮಾ ಬಿಡುಗಡೆಗೊಳಿಸಲಾಯಿತು.

Advertisement

ವಿಟ್ಲ ಸಿಪಿಸಿಆರ್ ಐ ನಿರ್ದೇಶಕ ಡಾ.ಸಿ ಟಿ‌ ಜೋಸ್ ಪ್ರಸ್ತಾವನೆಗೈದರು. ವಿಜ್ಞಾನಿ ಡಾ.ನಾಗರಾಜ್ ಸ್ವಾಗತಿಸಿದರು.‌ ವಿಜ್ಞಾನಿ ಡಾ.ಭವಿಷ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ
Weather Updates | ಕರಾವಳಿ ಭಾಗದಲ್ಲಿ ಮಳೆಯ ಸಾಧ್ಯತೆ ಕ್ಷೀಣ |
January 30, 2025
11:47 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror