Advertisement
MIRROR FOCUS

ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದ ಭರವಸೆ..! ಟಿಶ್ಯೂ ಕಲ್ಚರ್‌ನಲ್ಲಿ ಮೊದಲ ಹಂತದ ಅಡಿಕೆ ಗಿಡಗಳು ನಾಟಿಗೆ ಸಿದ್ಧ

Share

ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಪ್ರಯತ್ನ ಮಾಡುತ್ತಿದೆ. ದೀರ್ಘಾವಧಿ ರೋಗ ತಡೆ ಅಡಿಕೆ ತಳಿಯನ್ನು ಟಿಶ್ಯೂ ಕಲ್ಚರ್‌ ಮೂಲಕ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿರುವ ವಿಜ್ಞಾನಿಗಳ ಪ್ರಯತ್ನದಲ್ಲಿ ಇದೀಗ ಮೊದಲ ಹಂತದ ಅಡಿಕೆ ಗಿಡಗಳು ನಾಟಿಗೆ ಸಿದ್ಧವಾಗಿದೆ. ಮುಂದೆಯೂ ಅಧ್ಯಯನ ನಡೆಯಲಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ದೀರ್ಘಾವಧಿ ರೋಗ ತಡೆ ಅಡಿಕೆ ತಳಿ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿದೆ. ವಿಶೇಷವಾಗಿ ಹಳದಿ ಎಲೆ ರೋಗದ ಹಾಟ್‌ಸ್ಫಾಟ್‌ ಪ್ರದೇಶಗಳಾದ ಸಂಪಾಜೆ, ಅರಂತೋಡು, ಚೆಂಬು ಹಾಗೂ ಶೃಂಗೇರಿ ಭಾಗಗಳಿಂದ ರೋಗಬಾಧೆ ಕಾಣದ ಅಡಿಕೆ ಮರಗಳ ಎಳೆ ಹಿಂಗಾರಗಳನ್ನು ಸಂಗ್ರಹಿಸಿ ಟಿಶ್ಯೂ ಕಲ್ಚರ್‌ ವಿಧಾನದಲ್ಲಿ ಅಭಿವೃದ್ಧಿಪಡಿಸುವ ಪ್ರಯತ್ನ ಕೈಗೊಳ್ಳಲಾಗಿದೆ. ಇದರ ಜೊತೆಗೆ ಗಿಡ್ಡ ತಳಿಯ ಹೈಬ್ರೀಡ್‌ ಟಿಶ್ಯೂ ಕಲ್ಚರ್‌ ಕೂಡಾ ನಾಟಿಯ ಹಂತಕ್ಕೆ ಬಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ನಾಟಿಗೆ ಸಿದ್ಧವಾಗಿರುವ ಟಿಶ್ಯೂ ಕಲ್ಚರ್ ಅಡಿಕೆ ಗಿಡ
ನಾಟಿಗೆ ಸಿದ್ಧವಾಗಿರುವ ಗಿಡ್ಡ ತಳಿ ಟಿಶ್ಯೂ ಕಲ್ಚರ್‌ ಗಿಡ

ಪ್ರಯೋಗಾಲಯದಲ್ಲಿ ಆರಂಭಿಕ ಹಂತದ ಬೆಳವಣಿಗೆ ಕಾಣಿಸಿಕೊಂಡು ಗಿಡದ ಬೆಳವಣಿಗೆ ಹಂತಕ್ಕೆ ಬಂದು ಇದೀಗ ಮೊದಲ ಹಂತದ ನಾಟಿಗೆ ಸುಮಾರು 25 ಗಿಡಗಳು ಸಿದ್ಧವಾಗಿದೆ.  ಇದರ ಜೊತೆಗೇ ಮತ್ತಷ್ಟು ಗಿಡಗಳು ಪ್ರಯೋಗಾಲಯದಲ್ಲಿ ಬೆಳವಣಿಗೆಯಾಗುತ್ತಿದೆ.  ಪ್ರಯೋಗಾಲಯದ ಮೊದಲ ಹಂತದಿಂದಲೇ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳಿಂದಲೇ ಪ್ರಯತ್ನ ನಡೆದಿದ್ದು ಬೇರು ಹಾಗೂ ಎಲೆಗಳ ಬೆಳವಣಿಗೆಗಳ ಬಗ್ಗೆ ಆರಂಭದಲ್ಲಿ ಸಮಸ್ಯೆ ಇತ್ತು. ಅದರ ನಿವಾರಣೆಗೆ ವಿಜ್ಞಾನಿಗಳು ಪ್ರಯತ್ನ ಮಾಡಿದ್ದರು. ಅಲ್ಲಿ ಯಶಸ್ಸು ಕಂಡಿದ್ದು ಮುಂದಿನ ಬೆಳವಣಿಗೆಯ ನಂತರ ಈಗ ಗಿಡ ನಾಟಿಯ ಹಂತಕ್ಕೆ ಸಿದ್ಧವಾಗಿದೆ.

ಟಿಶ್ಯೂ ಕಲ್ಚರ್‌ ಹಂತಗಳು
ಪ್ರಯೋಗಾಲಯದ ಒಳಗೆ ಬೆಳೆಯುತ್ತಿರುವ ಗಿಡಗಳು

ಟಿಶ್ಯೂ ಕಲ್ಚರ್‌ ತಂತ್ರಜ್ಞಾನವನ್ನು ಈ ಹಿಂದೆ ಹಲವು ಕೃಷಿ ಬೆಳೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದ್ದರೂ, ಅಡಿಕೆ ಹಾಗೂ ತೆಂಗಿನ ಬೆಳೆಯಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವುದು ಕಷ್ಟಕರವಾಗಿತ್ತು. ಆದರೂ ಇದೀಗ ಸಿಪಿಸಿಆರ್‌ಐ ವಿಜ್ಞಾನಿಗಳು ಧನಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿ ಕಾರ್ಯ ಮುಂದುವರಿಸಿದ್ದರ ಪರಿಣಾಮ ಅಡಿಕೆ ಗಿಡ ಸಿದ್ಧವಾಗಿದೆ. ಈಗ ಗಿಡದ ಪೂರ್ಣ ಅಭಿವೃದ್ಧಿ ಸಾಧ್ಯವಾದರೂ, ನಂತರ ಅದರ ಬೆಳವಣಿಗೆ, ಕ್ಷೇತ್ರ ಅಧ್ಯಯನ ಹಾಗೂ ಪರಿಣಾಮಕಾರಿತ್ವ ಪರಿಶೀಲನೆಯ ಬಳಿಕವಷ್ಟೇ ಕೃಷಿಕರಿಗೆ ಗಿಡ ಲಭ್ಯವಾಗುವ ಸಾಧ್ಯತೆ ಇದೆ.

ಟಿಶ್ಯೂ ಕಲ್ಚರ್‌ ಗಿಡಗಳ ಜೊತೆ ವಿಜ್ಞಾನಿಗಳು

ಪ್ರಯೋಗಾಲಯದಲ್ಲಿ ಬೆಳೆಯುತ್ತಿರುವ ಟಿಶ್ಯೂ ಕಲ್ಚರ್‌ ಗಿಡಗಳ ಬೆಳವಣಿಗೆಯ ಹಂತಗಳನ್ನು ವೀಕ್ಷಿಸಲು ಕೃಷಿಕರ ತಂಡ ಸಿಪಿಸಿಆರ್‌ಐ ಕೇಂದ್ರಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ವಿಜ್ಞಾನಿಗಳು ಟಿಶ್ಯೂ ಕಲ್ಚರ್‌ ಗಿಡಗಳ ಬೆಳವಣಿಗೆ ವಿಧಾನ, ಸವಾಲುಗಳು ಹಾಗೂ ಮುಂದಿನ ಸಂಶೋಧನಾ ಹಂತಗಳ ಕುರಿತು ಮಾಹಿತಿ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್‌, ಹಿರಿಯ ವಿಜ್ಞಾನಿಗಳಾದ ಡಾ. ವಿನಾಯಕ ಹೆಗ್ಡೆ, ಪ್ರಯೋಗಾಲಯದ ತಾಂತ್ರಿಕ ವಿಜ್ಞಾನಿ ಮುರಳಿಕೃಷ್ಣ ಹಾಗೂ ತಂಡ ಕೃಷಿಕರಿಗೆ ಟಿಶ್ಯೂ ಕಲ್ಚರ್‌ ತಳಿಯ ಕುರಿತು ಮಾಹಿತಿ ನೀಡಿದರು. ಕೃಷಿಕರ ತಂಡದಲ್ಲಿ ಸುಳ್ಯ ಸಹಕಾರಿ ಯೂನಿಯನ್‌ ಅಧ್ಯಕ್ಷ ರಮೇಶ್‌ ದೇಲಂಪಾಡಿ,  ಅಖಿಲಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ, ಕೃಷಿಕ ಅರುಣ್‌ ಕುಮಾರ್‌ ಕಾಂಚೋಡು ಇದ್ದರು.

CPCRI Kasaragod scientists have achieved a major breakthrough in developing Yellow Leaf Disease resistant arecanut plants through tissue culture technology. Around 25 first-stage tissue culture plants are now ready for planting, while more plants continue to grow in the laboratory. Scientists say further field studies and observation will be conducted before making the plants available to farmers.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಚೀನಾದತ್ತ ಸಾಗುವ ಬಾವಿ ಚಂಡಮಾರುತ ದುರ್ಬಲ – 18 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, ಭಾರೀ ಮಳೆ-ಪ್ರವಾಹದ ಎಚ್ಚರಿಕೆ

ಸೂಪರ್ ಟೈಫೂನ್ ಬಾವಿ ದುರ್ಬಲವಾಗಿದ್ದರೂ ಪೂರ್ವ ಚೀನಾದಲ್ಲಿ ಭಾರೀ ಮಳೆ, ಪ್ರವಾಹ ಹಾಗೂ…

3 hours ago

ಹವಾಮಾನ ವರದಿ | 11-06-2026 | ಕರಾವಳಿ, ಮಲೆನಾಡಿನಲ್ಲಿ ಅಲ್ಲಲ್ಲಿ ಸಾಧಾರಣ ಮಳೆ, ಉಳಿದ ಭಾಗಗಳಲ್ಲಿ ಬಿಸಿಲು-ಮೋಡದ ವಾತಾವರಣ

ರಾಜ್ಯದಲ್ಲಿ ಮುಂಗಾರು ಇನ್ನೂ ದುರ್ಬಲವಾಗಿದ್ದು, ಸುಳ್ಯ, ಕಡಬ ಹಾಗೂ ಸೋಮವಾರಪೇಟೆ ಭಾಗಗಳಲ್ಲಿ ಮಾತ್ರ…

10 hours ago

ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚು | ಕಿತ್ತಳೆ ಬಣ್ಣಕ್ಕೆ ತಿರುಗಿದ ಆಕಾಶ, ಭೀಕರ ಕಾಡ್ಗಿಚ್ಚಿಗೆ 12 ಬಲಿ- ಸ್ಪೇನ್‌ನಲ್ಲಿ ಭಯಾನಕ ದುರಂತ

ದಕ್ಷಿಣ ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚಿನಿಂದ 12 ಮಂದಿ ಸಾವನ್ನಪ್ಪಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ.…

14 hours ago

ತೀವ್ರ ಬಿಸಿಗೆ ತುತ್ತಾಗುವ ನಗರಗಳಲ್ಲಿ ಭಾರತ ಅಗ್ರಸ್ಥಾನ: ವಿಶ್ವದ ಟಾಪ್-50 ಪಟ್ಟಿಯಲ್ಲಿ 14 ಭಾರತೀಯ ನಗರಗಳು

ತೀವ್ರ ಬಿಸಿಯ ಅಪಾಯದಲ್ಲಿರುವ ವಿಶ್ವದ ಟಾಪ್-50 ನಗರಗಳಲ್ಲಿ 14 ಭಾರತೀಯ ನಗರಗಳು ಸೇರಿವೆ.…

14 hours ago

ಚೀನಾಕ್ಕೆ ಹಲಸಿನ ಹಣ್ಣು ರಫ್ತು: ಬಾಂಗ್ಲಾದೇಶದ ವಿದೇಶಿ ವಿನಿಮಯ ಆದಾಯ ಹೆಚ್ಚುವ ನಿರೀಕ್ಷೆ

ಚೀನಾಕ್ಕೆ ಹಲಸಿನ ಹಣ್ಣು ರಫ್ತು ಹೆಚ್ಚಿಸುವ ಮೂಲಕ ವಿದೇಶಿ ವಿನಿಮಯ ಆದಾಯವನ್ನು ಹೆಚ್ಚಿಸಲು…

18 hours ago

ಹವಾಮಾನ ವರದಿ | 10-07-2026 | ಕರ್ನಾಟಕದಲ್ಲಿ ಮುಂಗಾರಿಗೆ ತಾತ್ಕಾಲಿಕ ವಿರಾಮ..! ಕರಾವಳಿಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆ, ಒಳನಾಡಿನಲ್ಲಿ ಬಿಸಿಲು ಹೆಚ್ಚಳ

ಕರ್ನಾಟಕದಲ್ಲಿ ಮುಂಗಾರು ತಾತ್ಕಾಲಿಕ ವಿರಾಮ ಪಡೆದಿದ್ದು, ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಮಾತ್ರ…

2 days ago