ಅಡಿಕೆ ಹಳದಿ ಎಲೆ ರೋಗ ಮುಂದುವರಿದ ಅಧ್ಯಯನಗಳು | ವಿಜ್ಞಾನಿಗಳು ಏನು ಹೇಳುತ್ತಾರೆ ? | ಹತ್ತಿರವಾಗುತ್ತಿರುವ ಬೆಳೆಗಾರರು-ವಿಜ್ಞಾನಿಗಳು | ರೈತರ ತೋಟಗಳೇ ಈಗ ಸಂಶೋಧನಾ ಕೇಂದ್ರ |

October 12, 2021
3:29 PM

ಅಡಿಕೆ ಬೆಳೆಗಾರರಿಗೆ ತೋಟದಲ್ಲಿ ಈಗ ಕಾಡುವ ಸಮಸ್ಯೆಗಳಲ್ಲಿ ಪ್ರಮುಖವಾದ್ದು ಹಳದಿ ಎಲೆರೋಗ. ಇದುವರೆಗೆ ಹಲವು ಸಂಶೋಧನೆಗಳು ನಡೆದಿದ್ದರೂ ಈಗ ಕೆಲವು ವರ್ಷಗಳಿಂದ ಬೆಳೆಗಾರರ ತೋಟವೇ ಸಂಶೋಧನಾ ಕೇಂದ್ರಗಳಾಗುತ್ತಿವೆ. ಇದೀಗ ಇನ್ನೊಂದು ಅಧ್ಯಯನವೂ ಬೆಳೆಗಾರರ ತೋಟದಲ್ಲಿಯೇ ನಡೆಯಲಿದೆ.

Advertisement
Advertisement
Advertisement

ಅಡಿಕೆ ಹಳದಿ ಎಲೆ ರೋಗವು ಅನೇಕ ವರ್ಷಗಳಿಂದ ಸುಳ್ಯ ತಾಲೂಕಿನಲ್ಲಿ, ಶೃಂಗೇರಿ, ಕೊಪ್ಪ ಮೊದಲಾದ ಕಡೆಗಳಲ್ಲಿ ಕಾಡುವ ರೋಗವಾಗಿತ್ತು. ಈಚೆಗೆ ಹಬ್ಬುತ್ತಾ ಹಲವು ತೋಟಗಳಲ್ಲಿ  ಕಂಡುಬಂದಿದೆ. ಈ ರೋಗ ನಿಯಂತ್ರಣ ಹಾಗೂ ರೋಗ ನಿವಾರಣೆಗೆ ವಿಜ್ಞಾನಿಗಳು ವಿವಿಧ ರೀತಿಯಿಂದ ಅಧ್ಯಯನ, ಸಂಶೋಧನೆ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಬೆಳೆಗಾರರ ತೋಟವೇ ಸಂಶೋಧನೆಯ ಕೇಂದ್ರವಾಗಿತ್ತು. ಪ್ರಾಕ್ಟಿಕಲ್‌ ಮಾಡುವ ಮೂಲಕ ವಿಜ್ಞಾನಿಗಳು ಡಾಟಾ ಸಂಗ್ರಹಿಸಿ ಅಧ್ಯಯನ ನಡೆಸುತ್ತಿದ್ದರು. ಅಂತಹದ್ದರಲ್ಲಿ  ಪ್ಲಾಸಿಕ್‌ ಹೊದಿಕೆ ಕೂಡಾ ಒಂದು.

Advertisement

ಐದು ವರ್ಷಗಳ ಹಿಂದೆ ಅಡಿಕೆ ಹಳದಿ ಎಲೆರೋಗ ಬಾಧಿತ ಪ್ರದೇಶಗಳಲ್ಲಿ ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ  ತೋಟದಲ್ಲಿ ಪ್ಲಾಸ್ಟಿಕ್‌ಹೊದಿಕೆ ಅಳವಡಿಕೆ ಮಾಡಿತ್ತು. ಪ್ಲಾಸ್ಟಿಕ್‌ಹೊದಿಕೆ ಹೊದಿಸಿ ಪೋಷಕಾಂಶಗಳ ನಿರ್ವಹಣೆ ಹಾಗೂ ಇತರ ಅಧ್ಯಯನ ನಡೆಸಿದ್ದರು. ಇದೀಗ ಈ ಮರದ ಬೇರುಗಳು ಆರೋಗ್ಯಯುತವಾಗಿರುವುದು ಹಾಗೂ ಉತ್ತಮ ಫಲಿತಾಂಶ ನೀಡಿದೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ರೋಗ ಹರಡುವುದು ಕಡಿಮೆಯಾಗಿದೆ  ಹಾಗೂ ಗಿಡಗಳ ಆರೋಗ್ಯ , ಇಳುವರಿಯಲ್ಲಿ ಸ್ಥಿರತೆ ಕಂಡುಬಂದಿದೆ ಎಂದು ವರದಿ ಹೇಳುತ್ತದೆ. (ಇಲ್ಲಿದೆ ವಿಡಿಯೋ ವರದಿ )

Advertisement

ಅನೇಕ ವರ್ಷಗಳಿಂದ ಕಂಡುಬಂದ ಅಡಿಕೆ ಹಳದಿ ಎಲೆ ರೋಗದ ಅಧ್ಯಯನ, ಸಂಶೋಧನೆ ಹಲವು ವರ್ಷಗಳಿಂದ ಆಗಿದೆ. ಇದೀಗ ಇನ್ನೊಂದು ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿ ಒಂದು. ಇದೀಗ  ರೋಗ ನಿರೋಧಕ ತಳಿ ಅಭಿವೃದ್ಧಿ ಹಾಗೂ ಅದರ ಜೊತೆಗೇ ಟಿಶ್ಯೂ ಕಲ್ಚರ್‌ಗಿಡಗಳನ್ನೂ ಅಭಿವೃದ್ಧಿ ಮಾಡಲು ಸಿಪಿಸಿಆರ್‌ಐ ವಿಜ್ಞಾನಿಗಳು ಮುಂದೆ ಬಂದಿದ್ದಾರೆ. ಇದಕ್ಕಾಗಿ ಹಳದಿ ಎಲೆರೋಗ ಪೀಡತ ಹಾಟ್‌ಸ್ಫಾಟ್‌ ಪ್ರದೇಶದಲ್ಲಿ ಈಗಾಗಲೇ ಇರುವ  ರೋಗ ನಿರೋಧಕ ಅಡಿಕೆ ಮರವನ್ನು ಹುಡಕಿ ಅದರ ಮೂಲಕ ಗಿಡ ತಯಾರಿ ಮಾಡುವುದು ಜೊತೆಗೇ ಅಂಗಾಶ ಕಸಿ ಮಾಡುವುದಕ್ಕೆ ಈಗ ಸಿದ್ಥತೆ ನಡೆದಿದೆ.

ಡಾ.ಅನಿತಾ ಕರುಣ್
ಈಗಾಗಲೇ ಪ್ಲಾಸ್ಟಿಕ್‌ ಹೊದಿಕೆಯ ಮೂಲಕ ಅಡಿಕೆ ಮರಗಳು ಆರೋಗ್ಯಯುತವಾಗಿ ಇಳುವರಿಯಲ್ಲಿ ಸ್ಥಿರತೆ ಇರುವುದು  ಅಧ್ಯಯನದ ಮೂಲಕ ತಿಳಿದುಬಂದಿದೆ. ಇದರ ಜೊತೆಗೆ ರೋಗ ಹರಡುವುದು  ನಿಧಾನವಾಗಿದೆ. ಮುಂದೆ ರೋಗ ನಿರೋಧಕ ತಳಿ ಅಭಿವೃದ್ಧಿ ಕಡೆಗೆ ಗಮನಹರಿಸಲಾಗುವುದು
 –  ಡಾ.ಅನಿತಾ ಕರುಣ್‌ , ನಿರ್ದೇಶಕಿ, ಸಿಪಿಸಿಆರ್‌ಐ , ಕಾಸರಗೋಡು

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಉಪ ಉತ್ಪನ್ನಗಳ ತಯಾರಿಕೆ ಬೆಂಬಲ ಘೊಷಿಸಿದ ಅಭ್ಯರ್ಥಿ |
April 23, 2024
1:54 PM
by: ದ ರೂರಲ್ ಮಿರರ್.ಕಾಂ
ಹಿಪ್ಪಲಿ ಗಿಡಕ್ಕೆ ಕರಿಮೆಣಸು ಕಸಿ ಎಷ್ಟು ಸೂಕ್ತ..? ಲಾಭ ಏನು..? | ಇದು ಕರಿಮೆಣಸು ಬಳ್ಳಿಗೆ ಬರುವ ರೋಗ ತಡೆಗಟ್ಟುತ್ತದೆಯೇ..?
April 23, 2024
1:41 PM
by: The Rural Mirror ಸುದ್ದಿಜಾಲ
ಲೋಕಸಭೆ ಚುನಾವಣೆಗೆ ದಿನಗಣನೆ | ‘ಚುನಾವಣಾ ಪರ್ವ – ದೇಶದ ಗರ್ವ’ ಘೋಷ ವಾಕ್ಯದೊಂದಿಗೆ ಚುನಾವಣೆ | ಚುನಾವಣಾ ಆಯೋಗದಿಂದ ಭರದ ಸಿದ್ಧತೆ
April 23, 2024
1:25 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror