ಅಡಿಕೆ ಬೆಳೆಗಾರರಿಗೆ ತೋಟದಲ್ಲಿ ಈಗ ಕಾಡುವ ಸಮಸ್ಯೆಗಳಲ್ಲಿ ಪ್ರಮುಖವಾದ್ದು ಹಳದಿ ಎಲೆರೋಗ. ಇದುವರೆಗೆ ಹಲವು ಸಂಶೋಧನೆಗಳು ನಡೆದಿದ್ದರೂ ಈಗ ಕೆಲವು ವರ್ಷಗಳಿಂದ ಬೆಳೆಗಾರರ ತೋಟವೇ ಸಂಶೋಧನಾ ಕೇಂದ್ರಗಳಾಗುತ್ತಿವೆ. ಇದೀಗ ಇನ್ನೊಂದು ಅಧ್ಯಯನವೂ ಬೆಳೆಗಾರರ ತೋಟದಲ್ಲಿಯೇ ನಡೆಯಲಿದೆ.
ಅಡಿಕೆ ಹಳದಿ ಎಲೆ ರೋಗವು ಅನೇಕ ವರ್ಷಗಳಿಂದ ಸುಳ್ಯ ತಾಲೂಕಿನಲ್ಲಿ, ಶೃಂಗೇರಿ, ಕೊಪ್ಪ ಮೊದಲಾದ ಕಡೆಗಳಲ್ಲಿ ಕಾಡುವ ರೋಗವಾಗಿತ್ತು. ಈಚೆಗೆ ಹಬ್ಬುತ್ತಾ ಹಲವು ತೋಟಗಳಲ್ಲಿ ಕಂಡುಬಂದಿದೆ. ಈ ರೋಗ ನಿಯಂತ್ರಣ ಹಾಗೂ ರೋಗ ನಿವಾರಣೆಗೆ ವಿಜ್ಞಾನಿಗಳು ವಿವಿಧ ರೀತಿಯಿಂದ ಅಧ್ಯಯನ, ಸಂಶೋಧನೆ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಬೆಳೆಗಾರರ ತೋಟವೇ ಸಂಶೋಧನೆಯ ಕೇಂದ್ರವಾಗಿತ್ತು. ಪ್ರಾಕ್ಟಿಕಲ್ ಮಾಡುವ ಮೂಲಕ ವಿಜ್ಞಾನಿಗಳು ಡಾಟಾ ಸಂಗ್ರಹಿಸಿ ಅಧ್ಯಯನ ನಡೆಸುತ್ತಿದ್ದರು. ಅಂತಹದ್ದರಲ್ಲಿ ಪ್ಲಾಸಿಕ್ ಹೊದಿಕೆ ಕೂಡಾ ಒಂದು.
ಐದು ವರ್ಷಗಳ ಹಿಂದೆ ಅಡಿಕೆ ಹಳದಿ ಎಲೆರೋಗ ಬಾಧಿತ ಪ್ರದೇಶಗಳಲ್ಲಿ ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ತೋಟದಲ್ಲಿ ಪ್ಲಾಸ್ಟಿಕ್‌ಹೊದಿಕೆ ಅಳವಡಿಕೆ ಮಾಡಿತ್ತು. ಪ್ಲಾಸ್ಟಿಕ್‌ಹೊದಿಕೆ ಹೊದಿಸಿ ಪೋಷಕಾಂಶಗಳ ನಿರ್ವಹಣೆ ಹಾಗೂ ಇತರ ಅಧ್ಯಯನ ನಡೆಸಿದ್ದರು. ಇದೀಗ ಈ ಮರದ ಬೇರುಗಳು ಆರೋಗ್ಯಯುತವಾಗಿರುವುದು ಹಾಗೂ ಉತ್ತಮ ಫಲಿತಾಂಶ ನೀಡಿದೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ರೋಗ ಹರಡುವುದು ಕಡಿಮೆಯಾಗಿದೆ ಹಾಗೂ ಗಿಡಗಳ ಆರೋಗ್ಯ , ಇಳುವರಿಯಲ್ಲಿ ಸ್ಥಿರತೆ ಕಂಡುಬಂದಿದೆ ಎಂದು ವರದಿ ಹೇಳುತ್ತದೆ. (ಇಲ್ಲಿದೆ ವಿಡಿಯೋ ವರದಿ )
ಅನೇಕ ವರ್ಷಗಳಿಂದ ಕಂಡುಬಂದ ಅಡಿಕೆ ಹಳದಿ ಎಲೆ ರೋಗದ ಅಧ್ಯಯನ, ಸಂಶೋಧನೆ ಹಲವು ವರ್ಷಗಳಿಂದ ಆಗಿದೆ. ಇದೀಗ ಇನ್ನೊಂದು ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿ ಒಂದು. ಇದೀಗ ರೋಗ ನಿರೋಧಕ ತಳಿ ಅಭಿವೃದ್ಧಿ ಹಾಗೂ ಅದರ ಜೊತೆಗೇ ಟಿಶ್ಯೂ ಕಲ್ಚರ್‌ಗಿಡಗಳನ್ನೂ ಅಭಿವೃದ್ಧಿ ಮಾಡಲು ಸಿಪಿಸಿಆರ್‌ಐ ವಿಜ್ಞಾನಿಗಳು ಮುಂದೆ ಬಂದಿದ್ದಾರೆ. ಇದಕ್ಕಾಗಿ ಹಳದಿ ಎಲೆರೋಗ ಪೀಡತ ಹಾಟ್‌ಸ್ಫಾಟ್ ಪ್ರದೇಶದಲ್ಲಿ ಈಗಾಗಲೇ ಇರುವ ರೋಗ ನಿರೋಧಕ ಅಡಿಕೆ ಮರವನ್ನು ಹುಡಕಿ ಅದರ ಮೂಲಕ ಗಿಡ ತಯಾರಿ ಮಾಡುವುದು ಜೊತೆಗೇ ಅಂಗಾಶ ಕಸಿ ಮಾಡುವುದಕ್ಕೆ ಈಗ ಸಿದ್ಥತೆ ನಡೆದಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…