ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಸಿ ಪತಿ ಪರಾರಿಯಾದ ಘಟನೆ ಸುಳ್ಯ ನಗರದ ಬೀರಮಂಗಲದಲ್ಲಿ ಬೆಳಕಿಗೆ ಬಂದಿದೆ. ಬಾಡಿಗೆ ಮನೆಯೊಂದರಲ್ಲಿ ಮಹಿಳೆಯ ಮೃತದೇಹವು ಗೋಣಿಯಲ್ಲಿ ತುಂಬಿಸಿದ ರೀತಿಯಲ್ಲಿ ಪತ್ತೆಯಾಗಿದೆ.ದೆಹಲಿ ಹಾಗೂ ದೇಶದ ವಿವಿಧ ಕಡೆಯ ಪ್ರಕರಣಗಳು ಚರ್ಚೆಯಾಗುತ್ತಿರುವ ನಡುವೆಯೂ ಸುಳ್ಯದಲ್ಲೂ ಅದೇ ಮಾದರಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಈತ ಕಳೆದ ಆರು ತಿಂಗಳಿನಿಂದ ಬೀರಮಂಗಲ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ಹೊಟೇಲ್ ನವರಲ್ಲಿ ಹೇಳಿ ಊರಿಗೆ ತೆರಳಿದ್ದ.
ಇಂದು ಪಕ್ಕದ ರೂಂ ನವರಿಗೆ ವಾಸನೆ ಬರಲು ಆರಂಭಿಸಿದಾಗ ಸಂಶಯ ಮೂಡಿತು. ಅವನು ಹೋಗುವಾಗ ಅವನ ಪತ್ನಿಯನ್ನು ಕರೆದುಕೊಂಡು ಹೋಗಿರಲಿಲ್ಲ ಎಂಬ ಸಂದೇಹದ ಮೇರೆಗೆ ಅವರು ಹೊಟೇಲ್ ಮಾಲೀಕರಿಗೆ ತಿಳಿಸಿ ಹೊಟೇಲ್ ಮಾಲಕರು ಪೋಲಿಸರಿಗೆ ವಿಷಯ ತಿಳಿಸಿ ಪೊಲೀಸರು ಇಂದು ಸಂಜೆ ಬಾಡಿಗೆ ಮನೆಗೆ ಬಂದು ಬಾಗಿಲು ಒಡೆದು ಪರಿಶೀಲಿಸುವಾಗ ಮನೆಯೊಳಗೆ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಶಂಕಿತ ಆರೋಪಿ ಪರಾರಿಯಾಗಿದ್ದು, ಸುಳ್ಯ ಪೋಲಿಸರು ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…