ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡ ರೈತರ ತಾಲೂಕಿನಲ್ಲಿ ವಿಮೆ ಮಾಡಿಸಲಾಗಿರುವ ಬೆಳೆಯು ಆಯಾ ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ದಾಖಲಾಗಿರಬೇಕಿರುತ್ತದೆ. ಈ ಯೋಜನೆಯಡಿ ನೋಂದಾವಣೆಗೊಂಡ ಫಲಾನುಭವಿಗಳ ಸರ್ವೆ ನಂಬರ್ ಗಳಲ್ಲಿನ ಬೆಳೆಯ ಮಾಹಿತಿಯು ಬೆಳೆ ಸಮೀಕ್ಷೆಯ ದತ್ತಾಂಶದೊಂದಿಗೆ ತಾಳೆ ಹೊಂದದೇ ಇರುವ ಸಂದರ್ಭದಲ್ಲಿ ಬೆಳೆ ವಿಮೆ ಪರಿಹಾರ ಮೊತ್ತವನ್ನು ಪಾವತಿಸುವ ಮುನ್ನ ಬೆಳೆ ಸಮೀಕ್ಷೆ ಕೈಗೊಂಡು ತದನಂತರ ಪ್ರಕರಣವನ್ನು ಇತ್ಯರ್ಥಪಡಿಸಲಾಗುತ್ತದೆ.
2023-24 ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡು ಬೆಳೆ ಸಮೀಕ್ಷೆಯ ದತ್ತಾಂಶದೊಂದಿಗೆ ತಾಳೆ ಹೊಂದದೇ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮೇ 31 ಕೊನೆಯ ದಿನ. ಈ ಕುರಿತು ಸಂಬಂಧಿಸಿದ ರೈತರಿಗೆ ಈಗಾಗಲೇ ಮೊಬೈಲ್ ಸಂದೇಶವನ್ನು ಕಳುಹಿಸಲಾಗಿರುತ್ತದೆ. 2023-24 ನೇ ಸಾಲಿನಲ್ಲಿ ಯೋಜನೆಯಡಿ ನೋಂದಾವಣೆಗೊಂಡ ಯಾವುದೇ ರೈತರು ಈ ರೀತಿಯ ಸಂದೇಶವನ್ನು ಸ್ವೀಕರಿಸಿದಲ್ಲಿ, ಬೆಳೆ ಸಾಲ ಹೊಂದಿರುವ ರೈತರು ತಾವು ನೋಂದಾವಣೆಗೊಂಡ ಬ್ಯಾಂಕ್ ಶಾಖೆಯನ್ನು ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರು ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…
ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…
ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…
ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…
ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…
ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…