Advertisement
MIRROR FOCUS

ಜೀರ್ಕನ ಹುಳಿ…. ಮಲೆನಾಡಿಗರಿಗೆ ಅತ್ಯುತ್ತಮ ಆರ್ಥಿಕ ಆದಾಯ ತರುವ ಮರ | ಪ್ರೋತ್ಸಾಹಿಸಿದರೆ ಅಡಿಕೆ ಬೆಳೆಗೆ ಪರ್ಯಾಯ ಬೆಳೆಯಾಗಲು ಸಾಧ್ಯ.. |

Share

ಮಲೆನಾಡಿನ(Malenadu) ಕಾಡು ಜಾತಿಯ ಮರದಲ್ಲೇ ಅತ್ಯಂತ ಸುಂದರ ಆಕಾರದ ಮರವಿದು(Tree). ಡಿಸಂಬರ್ ಕೊನೆಯ ಭಾಗದಲ್ಲಿ ಕ್ರಿಸ್ಮಸ್ ಬರುವುದೂ ಮತ್ತು ಈ ಮರ ಕ್ರಿಸ್ಮಸ್ ಮರದಂತೆ ಹಣ್ಣು(Fruit) ತುಂಬಿ ಸಮೃದ್ಧ ವಾಗಿರುವುದು ಕಾಕತಾಳೀಯವೇ ಸರಿ… ಒಂದು ಅಡಿ ಉದ್ದದ ಮೂರು ಇಂಚು ಅಗಲದ ದಪ್ಪ ಎಲೆಯ ಸಸ್ಯವಿದು. ಈ ಮರ ಹಲಸು ಮಾವಿನ ಮರದ ತರ ಅಡ್ಡ ಟಿಸಿಲೊಡೆದು ಬೆಳೆಯದೇ ನೇರವಾಗಿ ಬೆಳೆಯುತ್ತದೆ. ‌ಗೋಪುರದ ‌ನಮೂನೆಯಲ್ಲಿ ಈ ಮರ ನೋಡುಗರ ಗಮನ ಸೆಳೆಯುವಂತೆ ಬೆಳೆದಿರುತ್ತದೆ.

Advertisement
Advertisement

ಇದು “ಗಾರ್ಸಿನಿಯ ಝಂಟೋಸ್ಯೆಮಸ್ ” ಪ್ರಭೇದಕ್ಕೆ ಸೇರಿದ ಭಾರತೀಯ ಮೂಲದ ಸಸ್ಯ. ‌ನಮ್ಮ ಮಲೆನಾಡು ಮತ್ತು ಹಿಮಾಲಯದಲ್ಲಿ ಈ ಪ್ರಬೇಧವಿದೆ. ಜೀರ್ಕನ ಹುಳಿ(Cumin Sour) ಹಣ್ಣನ್ನು ಮರ ಹತ್ತಿ ಒಮ್ಮೆಗೆ ಮರದಿಂದ ಉದುರಿಸಿ ಮನೆಗೆ ತಂದು ಹಣ್ಣನ್ನು ಕಾಯಿಯನ್ನ, ಬೇರೆ ಬೇರೆ ಮಾಡಿ ಕಾಯಿಯನ್ನ ಹೆಚ್ಚಿ‌ ಅದರಲ್ಲಿನ ಹಾಲಿನ ಅಂಶ (ಒಗರಿನ ಅಂಶ) ತೊಳೆದು ಒಣಗಿಸಿ ನಂತರ ನೀರು ಹಾಕಿ ಬೇಯಿಸಿ ಇಂಗಿಸುವುದು ಇದೇ ರೀತಿಯಲ್ಲಿ ಹಣ್ಣನ್ನೂ ಹೆಚ್ಚಿ ಒಣಗಿಸಿ ತದನಂತರ ಈ ಹಣ್ಣಿನ ಚೂರನ್ನು ದೊಡ್ಡ ಪಾತ್ರೆಯಲ್ಲಿ ಬೇಯಿಸಿ “ಹುಳಿ ” ತಯಾರಿಸಿ ಅದನ್ನು ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಒಂದು ಹತ್ತು ಲೀಟರ್ ನ ಹಣ್ಣಿನ pulp ಬೇಯಿಸಿ ಇಂಗಿಸಿದ ಮೇಲೆ ಮೂರು ಲೀಟರ್ ಆಗಬಹುದು. ಈ ಹುಳಿ ದ್ರಾವಣ ನೋಡಲು ಕಪ್ಪು ಇರುತ್ತದೆ. ಈ ಜೀರ್ಕನ ಹುಳಿ ಒಂದು ವರ್ಷದ ತನಕ ಅಡಿಗೆಗೆ ಬರುತ್ತದೆ.

Advertisement

ಹಿತಮಿತವಾಗಿ ಬಳಸಿದರೆ ಅದ್ಭುತವಾದ ರುಚಿ ಆರೋಗ್ಯ. ಹೆಚ್ಚು ಬಳಸಿದರೆ ಪಿತ್ತ ಎನ್ನುತ್ತಾರೆ. ಈ ಹುಳಿ ಹಣ್ಣಿನ‌ ಹುಳಿ ರಸ ಮಾಂಸಾಹಾರಿ ಅಡುಗೆಗೆ ಅದರಲ್ಲೂ ಮೀನು ಪದಾರ್ಥಗಳಿಗೆ ಅತ್ಯುತ್ತಮವಂತೆ. ಈ ಹುಳಿಯನ್ನ ಮಲೆನಾಡಿನಲ್ಲಿ ಆಡೊಳಿ‌‌ ಅಂತ ಕರೀತಾರೆ. ಈಗ ಪಟ್ಟಣದ ಹುಣಸೆ ಹುಳಿ ಬಂದ ಮೇಲೆ ಮಲೆನಾಡಿನ ಕಡೆ ಈ ಜನವರಿ ತಿಂಗಳಲ್ಲಿ ಫಸಲು ಕಟಾವಿಗೆ ಬರುವ ಜೀರ್ಕನ ಹುಳಿ ಸಂಗ್ರಹ ನಿಂತಿದೆ. ಹುಣಸೆ ಹುಳಿಗಿಂತ ಈ ಹುಳಿ ಅತ್ಯಂತ ಆರೋಗ್ಯಕರ. ನಮ್ಮ ಆಹಾರ ಸಂಶೋಧನಾ ಕೇಂದ್ರದವರು ಈ ಹುಳಿ ಹಣ್ಣನ್ನು ಮೌಲ್ಯವರ್ಧನೆ ಮಾಡಲು ಯೋಜಿಸಿದರೆ ಈ ಜೀರ್ಕನ ಹುಳಿ ಮರ ಮಲೆನಾಡಿಗರಿಗೆ ಒಂದು ಅತ್ಯುತ್ತಮ ಲಾಭದಾಯಕ ಕೃಷಿ ಬೆಳೆಯಾಗಬಹುದು.

Advertisement

ಇವತ್ತಿನ ಆಹಾರ ತಂತ್ರಜ್ಞಾನದಲ್ಲಿ ಜೀರ್ಕನ ಹುಳಿ ಪೌಡರ್ ಮಾಡಬಹುದು, ಟಿನ್ ಗಳಲ್ಲಿ ಹಾಕಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಅನುಭವಿಗಳ ಅಂಬೋಣದಂತೆ ” ಜೀರ್ಕನ ಹುಳಿಯ ಮಾಂಸಾಹಾರಿ ಅಡುಗೆ ಉಂಡವರು ಜೀರ್ಕನ ಹುಳಿ ಮರವನ್ನು ಹುಡುಕಿಕೊಂಡು ಹೋಗ್ತಾರೆ …!!” ಎಂಬುವಷ್ಟು ಜೀರ್ಕನ ಖ್ಯಾತಿ ಇದೆ. ಇದನ್ನು ಕೃಷಿ ಮಾಡಿದರೆ ಒಂದು ಮರದಲ್ಲಿ ಹತ್ತು ವರ್ಷಗಳ ನಂತರ ಒಂದು ಕ್ವಿಂಟಾಲ್ ಬೆಳೆ ಬರಬಹುದು. ಎಕರೆಗೆ ನೂರು ಮರ ಸಲೀಸಾಗಿ ಬೆಳೆಸಬಹುದು. ಮೌಲ್ಯವರ್ಧನೆ ಮಾರುಕಟ್ಟೆ ಮಾಡಿದರೆ ಈ ಜೀರ್ಕನ ಹುಳಿ ಮರ ಮಲೆನಾಡಿಗರಿಗೆ ಅತ್ಯುತ್ತಮ ಆರ್ಥಿಕ ಉತ್ಪತ್ತಿ ತರುವ ಮರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಡಿಕೆಯಂತಹ ಬೆಳೆಯಿಂದು ಎಲೆಚುಕ್ಕಿ ಶಿಲೀಂಧ್ರ ರೋಗದ ಆತಂಕದಲ್ಲಿರುವಾಗ ನಮ್ಮದೇ ಮಲೆನಾಡು ಮೂಲದ ಇಂತಹ ಹಣ್ಣು ಹುಳಿ ಔಷಧೀಯ ಸಸ್ಯ ಗಳನ್ನು ಸಂಬಂಧಿಸಿದ ಇಲಾಖೆ ಸಂಶೋಧನೆ ಅಭಿವೃದ್ಧಿ ಮಾಡಿದರೆ ಮಲೆನಾಡಿನ ರೈತ ಸಮುದಾಯ ನಿಟ್ಟುಸಿರಿಡುತ್ತದೆ.‌ ಜೊತೆಗೆ ಪ್ರಾಣಿ ಪಕ್ಷಿಗಳೂ ಉಳಿಯುತ್ತದೆ.

ಯಾವುದೋ ವಿದೇಶಿ ಹಣ್ಣಿನ ಬೆಳೆಗಿಂತ ಈ ಸ್ವದೇಶಿ ಬೆಳೆ ಉತ್ತಮ ಖಾತರಿ ಬೆಳೆ ಅಲ್ವಾ….?? ಅರಣ್ಯ ಇಲಾಖೆಯು ಮಂಗ ಇತರೆ ಕಾಡು ಪ್ರಾಣಿಗಳಿಗೆ ಜೀರ್ಕನ ಹುಳಿಯಂತಹ ಹಣ್ಣಿನ ಬೆಳೆಯನ್ನು ಆರಿಸಿ ತಮ್ಮ ಅರಣ್ಯ ಪ್ರದೇಶದಲ್ಲಿ ಬೆಳೆಸಿ ಕಾಡು ಪ್ರಾಣಿಗಳು ಊರಿನ ಕೃಷಿ ಬೆಳೆಯ ಮೇಲೆ ದಾಳಿ ಮಾಡದಂತೆ ತಡೆಯಬಹುದು… ರಸ್ತೆಯ ಇಕ್ಕೆಲಗಳಲ್ಲಿ, ಪಾರ್ಕ್ ನಲ್ಲಿ,‌ ಮನೆಗಳ ಎದುರು ಈ ಮರವನ್ನು ಬೆಳೆಸಿದರೆ ಅತ್ಯಂತ ಅಚ್ಚುಕಟ್ಟಾಗಿ ಸುಂದರವಾಗಿ ಬೆಳೆಯುತ್ತದೆ. ಈ ಮರದ ಎಲೆ ವರಲೆ ನಿರೋಧಕ. ಹಿಂದೆ ಮರದ ಮುಚ್ಚಿಗೆ ಮಾಡುವಾಗ ಹಲಗೆ ಸೇರುವ ಓಣಿಯಲ್ಲಿ ಈ ಜೀರ್ಕನ ಹುಳಿ ಮರದ ಎಲೆಯನ್ನು ಇಟ್ಟು ಅದರ ಮೇಲೆ ಮಣ್ಣು ಹಾಕಿ ಸಮ ಮಟ್ಟ ಮಾಡುತ್ತಿದ್ದರು. ಇದು ನೂರು ವರ್ಷಗಳ ಕಾಲ ಹೀಗೆ ಮಣ್ಣಿನಡಿಯಲ್ಲಿ ಇದ್ದರೂ ಪುಡಿಯಾಗುತ್ತಿರಲಿಲ್ಲವಂತೆ. ಈ ಮರದ ಎಲೆ ಕೂಡ ಸಂಸ್ಕರಣೆ ಸಂಶೋಧನೆಗೆ ಅರ್ಹ.

Advertisement

ಇಂತಹ ಮಲೆನಾಡಿನ ನೈಸರ್ಗಿಕ ಆರೋಗ್ಯ ನೀಡುವ ಹುಳಿ ಯನ್ನು ಆಹಾರ ಸಂಶೋಧನಾ ಸಂಸ್ಥೆಗಳು ಮೌಲ್ಯವರ್ಧನೆ ಮಾಡುವ ಯೋಜನೆ ಮಾಡುವುದು ಮತ್ತು ಸರ್ಕಾರ‌ ಈ ಹುಳಿ ಹಣ್ಣಿನ ಬೆಳೆಯನ್ನು ಕೃಷಿಗೆ ಪ್ರೋತ್ಸಾಹಿಸಿದರೆ ಮುಂದೆ ಅಡಿಕೆ ಬೆಳೆಗೆ ಖಂಡಿತವಾಗಿಯೂ ಪರ್ಯಾಯ ವಾಗಲು ಸಾಧ್ಯ. ಈ ಮರದ ಹಣ್ಣಿನ ಬೀಜದಿಂದ ಗಿಡ ಮಾಡಬಹುದು. ಜೀರ್ಕನ ಹುಳಿ ಬೆಳೆ ಮಲೆನಾಡಿನಲ್ಲಿ ಅತ್ಯಂತ ಸುಲಭವಾಗಿ ಬೆಳೆಯುತ್ತದೆ. ಯಾರಾದರೂ ಆಸಕ್ತರು ಈ ಬೆಳೆಯ ಬಗ್ಗೆ ಪ್ರಯತ್ನ ಮಾಡಬಹುದು.. ವಂದನೆಗಳು..

It is the most beautifully shaped tree among the wild species of Malenadu. It is no coincidence that Christmas comes in the latter part of December and this tree is full of fruit like a Christmas tree… a plant with thick leaves about a foot long and three inches wide. This tree does not grow horizontally like a jackfruit mango tree but grows straight. This tree is grown in a tower pattern to attract the attention of the onlookers.

Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

10 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

10 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

10 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

10 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

11 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

11 hours ago