ಅನ್ನ(Rice) ನಮ್ಮ ದೇಶದ ಬಹುಮುಖ್ಯ ಆಹಾರ. ಹೆಚ್ಚಿನ ಭಾರತೀಯರು(Indians) ದಿನನಿತ್ಯದ ಆಹಾರದಲ್ಲಿ (Food) ಅನ್ನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಅದು ಬೆಳಗ್ಗಿನ ತಿಂಡಿಯಾಗಿರಬಹುದು, ಮಧ್ಯಾಹ್ನದ ಊಟ, ಕೊನೆಗೆ ರಾತ್ರಿಯೂಟ ಹೀಗೆ ದಿನವಿಡೀ ಅನ್ನದ ರೆಸಿಪಿಗಳನ್ನು ಸೇವಿಸುತ್ತಾರೆ. ಭಾರತ (India) ಮಾತ್ರವಲ್ಲದೆ ಮುಖ್ಯವಾಗಿ ಏಷ್ಯನ್(Asian) ದೇಶಗಳಲ್ಲಿ ಜನಸಂಖ್ಯೆಯ ಸುಮಾರು 50% ಅನ್ನವನ್ನೇ ಪ್ರಧಾನ ಆಹಾರವನ್ನಾಗಿಸಿಕೊಂಡಿದ್ದಾರೆ. ಇನ್ನು ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಅನ್ನದಂತೆ ಗೋಧಿ(Wheat) ಕೂಡ ಪ್ರಧಾನ ಆಹಾರವಾಗಿ ಜನರು ಸೇವಿಸುತ್ತಾರೆ. ಆದರೆ ಇತ್ತೀಚೆಗೆ ನಡೆಸಿದ ಅಧ್ಯಯನವು(Study) ನಾವು ಸೇವಿಸುವ ಅಕ್ಕಿ, ಗೋಧಿ ಎಷ್ಟು ಸುರಕ್ಷಿತ ಎಂಬುದರ ಮೇಲೆ ಬೆಳಕು ಚೆಲ್ಲಿದೆ.
ಅನ್ನವು ಮ್ಯಾಕ್ರೋ ಹಾಗೂ ಮೈಕ್ರೋ ನ್ಯೂಟ್ರಿಯಂಟ್ಸ್‌ಗಳನ್ನು ಹೊಂದಿದ್ದು ಜೀರ್ಣಕ್ಕೂ ಅತ್ಯಂತ ಸುರಕ್ಷಿತ ಎಂದೆನಿಸಿದೆ. ಹಾಗಾಗಿಯೇ ಹೆಚ್ಚಿನವರು ಅನ್ನವನ್ನು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಹೆಚ್ಚಿನ ಇಳುವರಿ ನೀಡುವ ಅಕ್ಕಿ ಮತ್ತು ಗೋಧಿ ಪ್ರಭೇದಗಳ ಪೌಷ್ಟಿಕಾಂಶದ ಪರಿಣಾಮವನ್ನು ಕೇಂದ್ರೀಕರಿಸಿ ನಡೆಸಿದ ಅಧ್ಯಯನವು ಅಕ್ಕಿ ಗೋಧಿ ಧಾನ್ಯಗಳಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ತಿಳಿಸಿದೆ. ನಾವು ಸುರಕ್ಷಿತ ಎಂದು ಭಾವಿಸಿ ಸೇವಿಸುವ ಅನ್ನ ಹಾಗೂ ಚಪಾತಿ ಕೂಡ ಆರೋಗ್ಯದ ಸಮಸ್ಯೆಗಳನ್ನುಂಟು ಮಾಡುತ್ತದೆ ಎಂದು ತಜ್ಞರ ಸಮೂಹ ತಿಳಿಸಿದೆ.
ಅಕ್ಕಿ ಹಾಗೂ ಗೋಧಿಯ ಪ್ರಯೋಜನಗಳು : ಅಕ್ಕಿ ಹಾಗೂ ಗೋಧಿಯಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿವೆ ಹಾಗಾಗಿ ಇವುಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಿದಾಗ ದೇಹಕ್ಕೆ ಶಕ್ತಿ ದೊರೆಯುತ್ತದೆ. ಅಂತೆಯೇ ಇವುಗಳನ್ನು ಬೇಳೆ ಹಾಗೂ ಇನ್ನಿತರ ಕಾಳು, ತರಕಾರಿಗಳೊಂದಿಗೆ ಬೆರೆಸಿ ಸೇವಿಸಿದಾಗ ಪ್ರೋಟೀನ್, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಸತು, ಫೈಬರ್, ಪೊಟ್ಯಾಸಿಯಮ್, ತಾಮ್ರ, ಸೆಲೆನಿಯಮ್, ಕಬ್ಬಿಣ, ವಿಟಮಿನ್ ಸಿ, ಇ ಮತ್ತು ಬಿ ಅಂಶಗಳೊಂದಿಗೆ ಆರೋಗ್ಯಕರ ಆಹಾರವಾಗುತ್ತದೆ.
ಅನ್ನ ಹಾಗೂ ಗೋಧಿಯ ತಿನಿಸುಗಳನ್ನು ತರಕಾರಿಗಳೊಂದಿಗೆ ಸೇರಿಸಿ ಸೇವಿಸಿದಾಗ ಗ್ಲೈಸೆಮಿಕ್ ಸೂಚ್ಯಂಕವು ಸುಧಾರಿಸುತ್ತದೆ ಹಾಗೂ ಮಧುಮೇಹಿಗಳು ಅನ್ನ ಚಪಾತಿಯನ್ನು ತರಕಾರಿ ಬೇಳೆಕಾಳುಗಳೊಂದಿಗೆ ಮಿತ ಪ್ರಮಾಣದಲ್ಲಿ ಸೇವಿಸಬಹುದು. ಅನ್ನ ಮತ್ತು ರೊಟ್ಟಿಯಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಾಂಶಗಳು ಇತರ ಆಹಾರ ಪದಾರ್ಥಗಳಿಗಿಂತ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯ.
ಅಕ್ಕಿ ಹಾಗೂ ಗೋಧಿಯಲ್ಲಿರುವ ವಿಷಕಾರಿ ಅಂಶಗಳು : ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅಕ್ಕಿ ಹಾಗೂ ಗೋಧಿಯಲ್ಲಿ ವಿಷಕಾರಿ ಅಂಶಗಳಿವೆ ಹಾಗೂ ಇವು ಸೇವಿಸುವವರಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ ಎಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ತಜ್ಞರು ಹೇಳುವ ಪ್ರಕಾರ ಅಕ್ಕಿ ಹಾಗೂ ಗೋಧಿ ಕಡಿಮೆ ವಿಷಕಾರಿ ಅಂಶಗಳನ್ನು ಹೊಂದಿರುತ್ತವೆ. ಆದರೆ ನಾವು ಅವುಗಳನ್ನು ಬೇಯಿಸಿದಾಗ ಅವುಗಳನ್ನು ಸಂಸ್ಕರಿಸಿದಾಗ ಅವುಗಳು ಕೆಲವು ವಿಷಕಾರಿ ಅಂಶಗಳು ಅಥವಾ ಕಡಿಮೆ ನ್ಯೂಟ್ರಿಶಿಯನ್‌ಯುಕ್ತ ಆಹಾರವಾಗಿ ಮಾರ್ಪಡುತ್ತವೆ.
MGM ಹೆಲ್ತ್‌ಕೇರ್‌ನ ಮುಖ್ಯಸ್ಥೆ ಮತ್ತು ಮುಖ್ಯ ಆಹಾರ ತಜ್ಞರಾದ ವಿಜಯಶ್ರೀ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಧಾನ್ಯವನ್ನು ಸಂಸ್ಕರಿಸುವ ಪ್ರಕ್ರಿಯೆಯಲ್ಲಿ, ಹೊಟ್ಟು ಪ್ರತ್ಯೇಕಿಸಲ್ಪಡುತ್ತದೆ, ಇದರ ಪರಿಣಾಮವಾಗಿ ಆಹಾರದ ನಾರು, ಜೀವಸತ್ವಗಳು, ಖನಿಜಗಳು, ಲಿಗ್ನಾನ್‌ಗಳು, ಫೈಟೊಸ್ಟ್ರೊಜೆನ್‌ಗಳು, ಫೀನಾಲಿಕ್ ಸಂಯುಕ್ತಗಳು ಮತ್ತು ಫೈಟಿಕ್ ಆಮ್ಲ ನಷ್ಟವಾಗುತ್ತದೆ.
ಹೀಗಾಗಿಯೇ ಅದು ವಿಷಕಾರಿಯಾಗಿ ಮಾರ್ಪಡುತ್ತದೆ ಹಾಗೂ ಪೋಷಕಾಂಶದ ನಷ್ಟಕ್ಕೊಳಗಾಗುತ್ತದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನದಿಂದ ಅಕ್ಕಿ ಹಾಗೂ ಗೋಧಿಯಲ್ಲಿ ಆಹಾರದ ಮೌಲ್ಯ ಕಡಿಮೆ ಇದ್ದು ವಿಷಕಾರಿ ಅಂಶಗಳು ಹೆಚ್ಚಿವೆ ಎಂದು ತಿಳಿಸಿದ್ದಾರೆ. ಕಳೆದ 50 ವರ್ಷಗಳಲ್ಲಿ, ಸತು ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳ ಸಾಂದ್ರತೆಯು ಅಕ್ಕಿಯಲ್ಲಿ 33% ಮತ್ತು 27% ರಷ್ಟು ಮತ್ತು ಗೋಧಿಯಲ್ಲಿ 30% ಮತ್ತು 19% ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನವು ತಿಳಿಸಿದೆ.
ಅಕ್ಕಿ ಹಾಗೂ ಗೋಧಿಯಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸುವುದು ಹೇಗೆ?: ಅಕ್ಕಿಯಲ್ಲಿರುವ ರಾಸಾಯನಿಕ ಅಂಶ ಆರ್ಸೆನಿಕ್ ಮಟ್ಟವನ್ನು ಕಡಿಮೆ ಹೊಂದಿರುವ ಬಾಸ್ಮತಿ ಅಕ್ಕಿಯನ್ನು ಬಳಸಬಹುದು ಎಂದು ವಿಜಯಶ್ರೀ ಸಲಹೆ ನೀಡುತ್ತಾರೆ ಅಂತೆಯೇ ಅಕ್ಕಿಯನ್ನು ಚೆನ್ನಾಗಿ ತೊಳೆದು ಬಳಸುವುದು ಉತ್ತಮ ಎಂದು ಸೂಚಿಸುತ್ತಾರೆ. ಹೆಚ್ಚುವರಿ ನೀರಿನಲ್ಲಿ ಅಕ್ಕಿ ಬೇಯಿಸುವುದು ತದನಂತರ ಆ ನೀರನ್ನು ಚೆಲ್ಲುವುದು ಇದು ಅಕ್ಕಿಯಲ್ಲಿರುವ ಆರ್ಸೆನಿಕ್ ಅಂಶವನ್ನು ಕಡಿಮೆ ಮಾಡುತ್ತದೆ
ಗೋಧಿಯಲ್ಲಿ ಕೂಡ ಇಂತಹುದೇ ವಿಷಕಾರಿ ಅಂಶಗಳಿರುವುದರಿಂದ ಉತ್ತಮ ಗುಣಮಟ್ಟದ ಗೋಧಿ ಹಿಟ್ಟನ್ನು ಆರಿಸಿಕೊಳ್ಳಲು ಸಲಹೆ ನೀಡುತ್ತಾರೆ. ಇದನ್ನು ಗಾಳಿಯಾಡದ ಡಬ್ಬಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಇನ್ನು ಅಕ್ಕಿ ಗೋಧಿಯೊಂದಿಗೆ ಕಿನುವಾ, ರಾಗಿ ಹಾಗೂ ಬಾರ್ಲಿಯಂತಹ ಧಾನ್ಯಗಳನ್ನು ಸೇರಿಸಿಕೊಂಡು ಇನ್ನಷ್ಟು ಪೌಷ್ಟಿಕಾಂಶವುಳ್ಳ ಆಹಾರವಾಗಿ ಬದಲಾಯಿಸಿಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ.
– ಅಂತರ್ಜಾಲ ಮಾಹಿತಿ
Vijayashree, Head and Chief Dietitian, MGM Healthcare further elaborates that during the grain processing process, the bran is separated, resulting in the loss of dietary fiber, vitamins, minerals, lignans, phytoestrogens, phenolic compounds and phytic acid.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…