ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ಅಭಿವೃದ್ಧಿ ನೆಲೆಯಲ್ಲಿ ತನ್ನ ಚಟುವಟಿಕೆ ಆರಂಭಗೊಳಿಸಿದೆ. ಇದೇ ಕಾರಣದಿಂದ ಗಾಂಧಿ ಜಯಂತಿಯಂದು ನಾಗರಿಕ ಕುಂದುಕೊರತೆಗಳ ಪೋರ್ಟಲ್ ಅನಾವರಣಗೊಳಿಸಿದೆ. ಜನಪರವಾದ ಕೆಲಸಗಳ ಕಡೆಗೆ ಹೆಜ್ಜೆ ಇರಿಸಿರುವ ದ ಕ ಜಿಲ್ಲೆಯ ಎಎಪಿ ಪರವಾಗಿ ಅನೇಕ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಕೆಲಸಗಳಿಗೆ ಬೆಂಬಲವಿದೆ ಎಂದು ಹಿಂದೂ ಮುಖಂಡ, ದಕ್ಷಿಣ ಕನ್ನಡ ಜಿಲ್ಲೆಯ ಸಂಘಪರಿವಾರದ ಪ್ರಮುಖರಾದ ಎಂ ಬಿ ಪುರಾಣಿಕ್ ಅವರು ನಾಗರಿಕ ಕುಂದುಕೊರತೆಗಳ ಪೋರ್ಟಲ್ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ಸಮಯಗಳಿಂದ ಕೋಮುಗಲಭೆ ಹಾಗೂ ಕೋಮು ಸೂಕ್ಷ್ಮ ಪ್ರದೇಶಗಳಾಗಿ ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ಕಾಣಿಸಿಕೊಂಡಿದೆ. ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಹಿಂದೆ ಉಳಿದಿದೆ. ಸುಳ್ಯದಿಂದ ತೊಡಗಿ ಮಂಗಳೂರುವರೆಗೆ ಬಹುತೇಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದೆ. ಚುನಾವಣೆಯ ಕೆಲ ಸಮಯಗಳ ಹಿಂದೆ ಕೋಮು ಸೂಕ್ಷ್ಮ ಸಂಗತಿಗಳು ನಡೆದು ಆ ಮೂಲಕ ಜನರಲ್ಲಿ ಮತೀಯ ಹಾಗೂ ಮತೀಯವಾದ ಸಂಚಲನ ಸೃಷ್ಟಿಸಿ ಮತ ಗಳಿಸುವ ತಂತ್ರಗಳು ನಡೆಯುತ್ತಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳ ಕಡೆಗೂ ಮತದಾರರು ಆದ್ಯತೆ ನೀಡದೇ ಇರುವುದು ಕಂಡುಬಂದಿದೆ ಎನ್ನುವುದು ವರದಿ.
ಇದೇ ಕಾರಣದಿಂದ ಸಾಕಷ್ಟು ಪಾದಯಾತ್ರೆ ನಡೆದರೂ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಜನರ ಪ್ರತಿರೋಧ ಇದ್ದರೂ ಎತ್ತಿನಹೊಳೆ ಯೋಜನೆ ಅನುಷ್ಟಾನ ಆಗಿಯೇ ಬಿಟ್ಟಿದೆ. ಅಷ್ಟೂ ಪಾದಯಾತ್ರೆ ಮಾಡಿರುವ ಜನರು ನಂಬಿ ಮೋಸ ಹೋದರು. ಇದೇ ವೇಳೆ ಮಂಗಳೂರು-ಬೆಂಗಳೂರು ಹೆದ್ದಾರಿ, ಮಂಗಳೂರು ನಗರ ಅಭಿವೃದ್ಧಿ, ಟೋಲ್ ಸಮಸ್ಯೆ, ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಸ್ಯೆಗಳು ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಕಡೆಗೆ ಇಂದಿಗೂ ಧ್ವನಿಯಾಗುವವರು ಕಡಿಮೆಯಾಗಿದ್ದಾರೆ. ಆದರೆ ಮತೀಯವಾದ ಚರ್ಚೆಗಳು ನಡೆದು ಕೇಸುಗಳಾಗಿ ಅಲೆದು ಉದ್ಯೋಗ, ಆರ್ಥಿಕ ಸಂಕಷ್ಟ ಅನುಭವಿಸಿದವರು ಅನೇಕ ಮಂದಿ ಇದ್ದಾರೆ. ಇಂತಹ ಅನೇಕರು ಈಗ ಎಎಪಿ ಪರವಾದ ಒಲವು ಹೊಂದಿದ್ದಾರೆ ಎಂದು ಪಕ್ಷದ ಸಮೀಕ್ಷೆ ತಿಳಿಸಿತ್ತು.
ಎಎಪಿಯ ಅಭಿವೃದ್ಧಿ ಪರವಾದ ಚಿಂತನೆಗೆ ಒಲವು ತೋರಿದ ದ ಕ ಜಿಲ್ಲೆಯ ಪ್ರಮುಖರಾದ ವಿಜಯ ವಿಠಲನಾಥ ಶೆಟ್ಟಿ ಸೇರಿದಂತೆ ಹಲವು ಮಂದಿ ಎಎಪಿ ಶಾಲು ಹಾಕಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು.
ಈಗಾಗಲೇ ಆನ್ ಲೈನ್ ಮೂಲಕ ನಡೆಸಿದ ಸದಸ್ಯತ್ವ ಅಭಿಯಾನದಲ್ಲಿ ಸಾಕಷ್ಟು ಜನರು ಎಎಪಿ ಪರವಾಗಿ ಒಲವು ಹೊಂದಿದ್ದಾರೆ. ಅಂದರೆ ಅಭಿವೃದ್ಧಿ ಪರವಾದ ಒಲವು ಹೊಂದಿದ್ದರು. ಇದೇ ಕಾರಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನಾಗರಿಕ ಕುಂದುಕೊರತೆಗಳ ಪೋರ್ಟಲನ್ನು ದಕ್ಷಿಣ ಕನ್ನಡ ಜಿಲ್ಲಾ ಎಎಪಿ ತೆರೆದಿದೆ. ಈ ಮೂಲಕ ಜನರ ಪರವಾಗಿ ಧ್ವನಿ ಎತ್ತಲಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್‌ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…