Advertisement
MIRROR FOCUS

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಜುಲೈ 2 ರಂದು ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

Share

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಆಧರಿಸಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಜಿಲ್ಲಾಧಿಕಾರಿಗಳು ಪ್ರಕಟಿಸಿದ ಆದೇಶದಂತೆ, ಜುಲೈ 2, (ಗುರುವಾರ) ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು (12ನೇ ತರಗತಿ ವರೆಗೆ) ರಜೆ ಘೋಷಿಸಲಾಗಿದೆ.

ಮುನ್ನೆಚ್ಚರಿಕಾ ಸೂಚನೆಗಳಂತೆ  ನದಿ, ಹೊಳೆ, ತೊರೆ ಹಾಗೂ ನೀರು ತುಂಬಿರುವ ಪ್ರದೇಶಗಳಿಗೆ ಸಾರ್ವಜನಿಕರು ತೆರಳಬಾರದು,  ಸಮುದ್ರ, ಕೆರೆ ಹಾಗೂ ನದಿತೀರಗಳಲ್ಲಿ ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ವಿಪತ್ತು ನಿರ್ವಹಣೆಗೆ ಸಜ್ಜಾಗಿರಬೇಕು. ತುರ್ತು ಸೇವೆಗಳಿಗೆ ಸ್ಪಂದಿಸಿ ಅಗತ್ಯ ನೆರವು ಒದಗಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಹವಾಮಾನ ಹಾಗೂ ಜಿಲ್ಲಾಡಳಿತದ ಅಧಿಕೃತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು  ಎಂದು ಸೂಚಿಸಲಾಗಿದೆ.  ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಜಿಲ್ಲೆಯಲ್ಲಿ ಮುಂದುವರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ನಾಗರಿಕರು ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…ಅಭಿಪ್ರಾಯ-ಪ್ರತಿಕ್ರಿಯೆನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ...

Heavy rainfall in Dakshina Kannada has prompted the district administration to declare a holiday on July 2, 2026, for all Anganwadi centres, schools, and PU colleges (up to Class 12). The administration has also issued safety advisories, asking people to avoid rivers, flooded areas, and the sea, while directing officials to remain on alert for emergency response.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

22 hours ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

22 hours ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

22 hours ago

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

1 day ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

2 days ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

2 days ago