ದಾಮಾಯಣ ಇದು ದಾಮಾಯಣ….!! ಇದೆಂತ ಮಾರ್ರೆ ದಾಮಾಯಣ ಅಂತ ಕೇಳ್ತೀರಾ ? ಇದು ಸುಳ್ಯದ ಹುಡುಗರು ನಟಿಸಿರುವ, ತಂಡ ಮಾಡಿರುವ ಸಿನಿಮಾ. ಬಹುನಿರೀಕ್ಷೆಯ ಸಿನಿಮಾ. ದಕ್ಷಿಣ ಕನ್ನಡ ಸೊಗಡಿನ ಭಾಷೆಯಲ್ಲಿ ಬಂದಿರುವ ಸಿನಿಮಾ. ಪಕ್ಕಾ ಲೋಕಲ್ ಹುಡುಗನ ದೊಡ್ಡ ಕನಸಿನ ಚಿತ್ರ ಇದು.
ಹೌದು, ಸುಳ್ಯದ ಹುಡುಗರ ಒಂದು ಸಿನಿಮಾ ಸೆಟ್ಟೇರಿದೆ. ಕನಸು ಮತ್ತು ವಾಸ್ತವದ ಮೇಲೆ ಇರುವ ಹೊಸ ಸಿನಿಮಾ ಇದೆ ಜುಲೈ 14ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಮಂಗಳೂರಿನಲ್ಲಿ ಆಡಿಯೋ ಲಾಂಚ್ ಆಗಿದೆ.
ಸುಳ್ಯದ ಉತ್ಸಾಹಿ ಯುವಕ, ಯುವಪ್ರತಿಭೆ ಶ್ರೀಮುಖ ಅವರು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಕನ್ನಡ ಸೊಗಡಿನ ಕನ್ನಡ ಭಾಷೆಯಲ್ಲಿ ಬಂದಿರುವ ಈ ಚಿತ್ರ ಪಕ್ಕ ಲೋಕಲ್ ಹುಡುಗನ ಕಥೆ ಇರುವ ಸಿನಿಮಾವಾಗಿದೆ. ಪಕ್ಕಾ ತಮಾಷೆಯ ಈಗಿನ ಕಾಲಘಟ್ಟಕ್ಕೆ ಸರಿಹೊಂದುವಂತಹ ಚಲನಚಿತ್ರವಾಗಿದೆ.
ಸುಳ್ಯ, ಪುತ್ತೂರು, ಮಂಗಳೂರು ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು ಮಂಗಳೂರಿನಲ್ಲಿ ಹಾಡುಗಳು ಬಿಡುಗಡೆಯಾಗಿದೆ.
ಸೆವೆಂಟಿ ಸೆವೆನ್ ಸ್ಟುಡಿಯೋಸ್ ಮೂಲಕ ರಾಘವೇಂದ್ರ ಕುಡ್ವ ನಿರ್ಮಿಸಿರುವ ಈ ಸಿನಿಮಾಕ್ಕೆ ಸಿದ್ದು ಜಿ.ಎಸ್ ಅವರು ಛಾಯಾಗ್ರಹಣ ಮಾಡಿ, ಕೆ. ಎಂ ಕಾರ್ತಿಕ್ ಅವರ ಸಂಕಲನ, ಕೀರ್ತನ್ ಬಾಳಿಲ ಸಂಗೀತ ನಿರ್ದೇಶನ, ಅಕ್ಷಯ್ ರೇವಂಕರ್ ಅವರು ಸಿನಿಮಾದ ಸಹ ನಿರ್ದೇಶನ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲ್ಸ ಮಾಡಿದ್ದಾರೆ.
ನಾಯಕಿಯಾಗಿ ನಟಿ ಅನಘ ಭಟ್ ಅವರು ನಟಿಸಿದ್ದಾರೆ. ಜುಲೈ 14ಕ್ಕೆ ಬಿಡುಗಡೆ ಆಗಿ ಯಶಸ್ಸು ಪಡೆಯಲಿದೆ ಎನ್ನುವ ವಿಶ್ವಾಸ ಈ ತಂಡದ್ದು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…