ಇದು ತೀರ್ಥಹಳ್ಳಿ(Theerthahalli) ತಾಲ್ಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿ ಯ ಶ್ರೀ ಕಪಿಲೇಶ್ವರ ದೇವಸ್ಥಾನ(Kapileshwara temple). ಈ ದೇವಸ್ಥಾನ ಇರುವ ಸ್ಥಳಕ್ಕೆ ದಾವಣೆಬೈಲು ಎಂಬ ಹೆಸರು. ಇದು 1200 ವರ್ಷದ ಹಿಂದಿನ ದೇವಸ್ಥಾನ. ಈ ದೇವಸ್ಥಾನದ ಸುತ್ತಲಿನ ಬಯಲಿನಲ್ಲಿ ನೂರಾರು ವರ್ಷಗಳ ಹಿಂದೆ ದೊಡ್ಡ ಪ್ರಮಾಣದ ದನದ ಜಾತ್ರೆ(Cattle fair) ಅಥವಾ ವ್ಯಾಪಾರ ನೆಡೆಯುತ್ತಿತ್ತಂತೆ. ಆದ ಕಾರಣ ಈ ದೇವಸ್ಥಾನದ ಇರುವ ಊರಿಗೆ “ದನದ ಬಯಲು” ಎನ್ನುತ್ತಿದ್ದರು.
ಮುಂದೆ ಈ ದನದ ಬಯಲು “ದಾವಣೆ ಬೈಲು ” ಎಂದಾಯಿತು. ಈ ದೇವಸ್ಥಾನದ ಮುಖ್ಯ ದೇವರು “ಕಪಿಲೇಶ್ವರ ದೇವರು” , ಮಲೆನಾಡು ಗಿಡ್ಡ ತಳಿಯ. ಕಪಿಲ ಹಸುವಿನ ಹೆಸರನ್ನೇ ಈ ದೇವರಿಗೆ ಇಟ್ಟಿದ್ದಾರೆ. ವಿಪರ್ಯಾಸವೆಂದರೆ ಇಲ್ಲೀಗ ಹಾಲಿನ ಅಭಿಷೇಕ ಮಾಡಿದಾಗ “ಕಪಿಲ ವರ್ಣಕ್ಕೆ ” ತಿರುತ್ತಿದ್ದ ಮುಖ್ಯ ಲಿಂಗ ಇಲ್ಲ….. !!. ಒಂದು ಕಾಲದಲ್ಲಿ ಈ ಕ್ಷೇತ್ರ ಸುತ್ತಲಿನ ಜಾಗದಲ್ಲಿ ಅಪಾರ ಸಂಖ್ಯೆಯ ಜಾನುವಾರಗಳ ವ್ಯಾಪಾರ ವಹಿವಾಟು ಆಗುತ್ತಿದ್ದದ್ದು ವಿಶೇಷ. ಆದರೆ ಕಾಲನ ಹೊಡತದಲ್ಲಿ ಈಗ ಹಸುಗಳೂ ಇಲ್ಲ ಈ ದೇವಸ್ಥಾನವೂ ಫುನಃ ಪ್ರತಿಷ್ಠಾಪನೆಯಾಗದೆ ಖಾಲಿಯಾಗಿದೆ.
ಮಲೆನಾಡಿನ ಪ್ರತಿ ಊರೂ ಇಂತಹ ವಿಶೇಷ ಗಳ ಆಗರವಾಗಿದೆ. ಈ ದೇವಸ್ಥಾನದ ಆವರಣದಲ್ಲಿ ದೂರದಿಂದ ಆಗಮಿಸಿದ ದನದ ವ್ಯಾಪಾರಿಗಳಿಗೆ ಆಟ ಆಡಲು ಚೆನ್ನೆ ಮಣೆ ಕೆತ್ತಿರುವುದೂ ವಿಶೇಷ.
This is Sri Kapileshwara temple under Guddekoppa village panchayat of Theerthahalli taluk. The place where this temple is located is called Dawanbailu. This is a 1200 year old temple. Hundreds of years ago, a large-scale cattle fair or trade was held in the plains around this temple. That’s why the town where this temple is located was called “Danada Bayalu”.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…