ಬಿಸ್ಕೆಟ್(biscuits) ಬ್ರಿಟಿಷರೊಂದಿಗೆ(British) ಭಾರತಕ್ಕೆ(India) ಬಂದು ಭಾರತದಲ್ಲಿ ಬೇರು ಬಿಟ್ಟಿತು. ಇಂದು ಬಿಸ್ಕೆಟ್ ಮಾರುಕಟ್ಟೆ ₹25000 ಕೋಟಿ ಇದೆ. ಅದೇನೆಂದರೆ, ಭಾರತೀಯರು ಪ್ರತಿ ವರ್ಷ ಇಷ್ಟು ಪ್ರಮಾಣದ ಬಿಸ್ಕತ್ತುಗಳನ್ನು ತಿನ್ನುತ್ತಾರೆ. ಆಯುರ್ವೇದದ(Ayurveda) ಪ್ರಕಾರ, ಬಿಸ್ಕತ್ತುಗಳು “ಅನಾರೋಗ್ಯಕರ”(Unhealthy) ಆಹಾರವಾಗಿದೆ(Food). ಬಿಸ್ಕತ್ತು ಆಯುರ್ವೇದದ ಪ್ರಕಾರ ಹಳಸಿದ ಆಹಾರ.
ಬಿಸ್ಕತ್ತುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಆಮ್ಲತೆ, ಅಜೀರ್ಣ, ಅಸ್ತಮಾ, ಮೂಲವ್ಯಾಧಿ, ಮಧುಮೇಹ, ಬೊಜ್ಜು ಮುಂತಾದ ಕಾಯಿಲೆಗಳು ಬರಬಹುದು. ಈ ಕಾಯಿಲೆಯಿಂದ ಬಳಲುವವರಂತೂ ಬಿಸ್ಕತ್ತುಗಳ ತಂಟೆಗೆ ಹೋಗಲೇಬಾರದು. ಬಿಸ್ಕತ್ತುಗಳ ಬಗ್ಗೆ ಕೆಲವು ಸಂಗತಿಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹಾಲು-ಬಿಸ್ಕತ್ತುಗಳು ಅಥವಾ ಚಹಾ-ಬಿಸ್ಕತ್ತುಗಳು ಬೆಳಗಿನ ಉಪಾಹಾರಕ್ಕೆ ಪರ್ಯಾಯವಾಗಿರುವುದಿಲ್ಲ. ಮಕ್ಕಳಿಗೆ ಹಸಿವಾದಾಗ ಇಡ್ಲಿ, ದೋಸೆ, ಉಪ್ಪಿಟ್ಟು, ಶಿರಾ (ಕೇಸರಿ ಭಾತ್), ಸಲಾಡ್, ಹಣ್ಣುಗಳಂತಹ ಪೌಷ್ಟಿಕ ಆಹಾರ ನೀಡಿ. ಬಿಸ್ಕತ್ತುಗಳಿಂದ ನಿಮ್ಮ ಹಸಿವನ್ನು ನೀಗಿಸಿಕೊಳ್ಳಬೇಡಿ.
ಹೆಚ್ಚಿನ ಬಿಸ್ಕತ್ತುಗಳನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಮೈದಾ ಜೀರ್ಣಿಸಿಕೊಳ್ಳಲು ಕಷ್ಟವಾಗುವ, ಕರುಳಿಗೆ ಅಂಟಿಕೊಳ್ಳುವ, ಆರೋಗ್ಯಕ್ಕೆ ಹಾನಿಕಾರಕ ಪದಾರ್ಥ. ಬಿಸ್ಕತ್ತುಗಳಲ್ಲಿ ಪ್ರೋಟೀನ್, ಖನಿಜಗಳು ಇತ್ಯಾದಿ ಇರುತ್ತದೆ ಎಂಬುದು ಜಾಹೀರಾತು ವಿಷಯವಾಗಿದೆ. ಬಿಸ್ಕತ್ತಿನ ಪೌಷ್ಟಿಕತೆಯ ವಾಸ್ತವಿಕತೆ ಕೂಡ ಇದರಂತೆಯೇ ಇದೆ.
ಫೈಬರ್‌ಗಾಗಿ ಬಿಸ್ಕತ್ತು ತಿನ್ನುವುದು ಮೂರ್ಖತನ. ತರಕಾರಿಗಳು, ಹಣ್ಣುಗಳು, ಧಾನ್ಯದ ಸಂಪೂರ್ಣ ಕಾಳುಗಳು ಮತ್ತು ಸಲಾಡ್ ಅಗತ್ಯವಿರುವ ಫೈಬರ್ ಅನ್ನು ಒದಗಿಸುತ್ತದೆ. ಬಹುತೇಕ ಎಲ್ಲಾ ಬಿಸ್ಕತ್ತುಗಳು ತಾಳೆ ಎಣ್ಣೆಯನ್ನು ಹೊಂದಿರುತ್ತವೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹಸುವಿನ ತುಪ್ಪ ತಿನ್ನಲು ಹೇಳಿದರೆ “ಕೊಲೆಸ್ಟ್ರಾಲ್” ಹೆಚ್ಚುತ್ತದೆ ಎಂಬ ಕಾರಣಕ್ಕೆ ಮುಖ ಸಿಂಡರಿಸುವವರು ಬಿಸ್ಕತ್ತುಗಳನ್ನು ಚಪ್ಪರಿಸಿ ತಿನ್ನುವುದನ್ನು ನೋಡಿದಾಗ ನಗಬೇಕೋ ಅಳಬೇಕೋ ಅರ್ಥವಾಗುವುದಿಲ್ಲ..! ಮಧುಮೇಹಕ್ಕೆ ಬಿಸ್ಕತ್ತುಗಳು ಎಂಬುದು ಇನ್ನೊಂದು ಬೊಗಳೆ. ಯಾವುದೇ ರೀತಿಯ ಬಿಸ್ಕತ್ತುಗಳು ಸಕ್ಕರೆಯನ್ನು ಹೊಂದಿದ್ದು ಅದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಬ್ರೆಡ್, ವೇಫರ್ಸ್, ಟೋಸ್ಟ್ .. ಈ ಬೇಕರಿ ಉತ್ಪನ್ನಗಳು ಬಿಸ್ಕತ್ತುಗಳ ನಿಕಟ ಸೋದರ ಸಂಬಂಧಿಗಳಾಗಿವೆ ಮತ್ತು ಬಿಸ್ಕತ್ತುಗಳಂತೆಯೇ ಅನಾರೋಗ್ಯಕರವಾಗಿವೆ.
ಮೂಳೆ ಮತ್ತು ಹಲ್ಲು ದುರ್ಬಲವಾಗಲು ಬಿಸ್ಕತ್ ಪ್ರಮುಖ ಕಾರಣ : 30, 35 ವರ್ಷ ವಯಸ್ಸಿನವರೆಗೂ ಬಿಸ್ಕತ್ ತಿನ್ನುವುದನ್ನು ಮುಂದುವರಿಸಿದರೆ ಮೂಳೆ ಮತ್ತು ಹಲ್ಲುಗಳು ದುರ್ಬಲವಾಗುವುದು ಖಚಿತ. ಇದಕ್ಕೆ ವೈಜ್ಞಾನಿಕ ಕಾರಣವೆಂದರೆ ಬಿಸ್ಕತ್ತುಗಳು ಮತ್ತು ಇತರ ಬೇಕರಿ ಉತ್ಪನ್ನಗಳು ರಕ್ತದಲ್ಲಿನ ಪಿಹೆಚ್ ಮೌಲ್ಯವನ್ನು ಕಡಿಮೆ ಮಾಡುತ್ತದೆ, ದೇಹವು ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ ಮತ್ತು ಅದಕ್ಕೆ ಕ್ಯಾಲ್ಸಿಯಂ ಬೇಕಾಗುತ್ತದೆ. ದೇಹದ ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳಲ್ಲಿ ಸಂಗ್ರಹವಾಗಿರುತ್ತದೆ. ಪರ್ಯಾಯವಾಗಿ, ಮೂಳೆಗಳು ಮತ್ತು ಹಲ್ಲುಗಳಲ್ಲಿನ ಕ್ಯಾಲ್ಸಿಯಂ ಅನ್ನು pH ಅನ್ನು ಹೆಚ್ಚಿಸಲು ಬಳಸಲಾಗುತ್ತದೆ ಮತ್ತು ಕಾಲಾನಂತರದಲ್ಲಿ ಮೂಳೆಗಳು ಮತ್ತು ಹಲ್ಲುಗಳು ಬೆಂಡಾಗುತ್ತವೆ. ಇದರ ಪರಿಣಾಮವಾಗಿ 30, 35 ವರ್ಷಗಳ ನಂತರ ಮೂಳೆ ಮತ್ತು ಹಲ್ಲುಗಳ ಸಮಸ್ಯೆಗಳು ಕಂಡುಬರುತ್ತವೆ.
ಎಲ್ಲಕ್ಕಿಂತ ಮುಖ್ಯವಾಗಿ ಬಿಸ್ಕೆಟ್ ಹಳಸಿದ ಆಹಾರ. ಆಯುರ್ವೇದದ ಪ್ರಕಾರ ಹಳಸಿದ ಆಹಾರವನ್ನು ಸೇವಿಸಬೇಡಿ. “ನೀವು ರೊಟ್ಟಿ ಚಪಾತಿ ಮಾಡುತ್ತೀರಾ?” “ಹೌದು.” ಅವನ್ನು ಯಾವ ಪದಾರ್ಥದಿಂದ ಮಾಡುತ್ತೀರಿ?”* “ಖಂಡಿತವಾಗಿಯೂ ಹಿಟ್ಟಿನಿಂದ..” “ಹಾಗಾದರೆ ನೀವು ಮಕ್ಕಳಿಗೆ ಎರಡು ದಿನದ ಹಳಸಿದ ರೊಟ್ಟಿ ಚಪಾತಿ ಕೊಡುತ್ತೀರಾ?” “ಇಲ್ಲ” “ಹಾಗಾದರೆ 2-3 ತಿಂಗಳ ಹಿಂದೆ ತಯಾರಿಸಿದ ಬಿಸ್ಕೆಟ್ ಹೇಗೆ ಕೊಡುತ್ತೀರಿ?” ಬಿಸ್ಕತ್ತು ಅಪರೂಪದ/ಸಾಂದರ್ಭಿಕ/ರುಚಿ/ಪ್ರಯಾಣದಲ್ಲಿ ಬೇರೆ ಆಹಾರ ಲಭ್ಯವಿಲ್ಲದಾಗ ಅನುಕೂಲಕ್ಕಾಗಿ ಉಪಯೋಗಿಸಬಹುದಾದ ಆಹಾರ. ಬಿಸ್ಕೆಟ್ ಇಲ್ಲದೆ ನಿಮ್ಮ ಚಹಾ ಪೂರ್ಣವಾಗದಿದ್ದರೆ, ಅದು ಆರೋಗ್ಯದ ಎಚ್ಚರಿಕೆಯ ಗಂಟೆ.
ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ.
Starting the day with tea/coffee and biscuits in India is a daily ritual that almost every house follows. The humble drink along with cookie and biscuits comes handy as a no-fuss breakfast and also as a convenient evening supper. While keeping a check on the number of cups of tea/coffee you consume daily, have you ever wondered how many biscuits you eat in a day? Read this piece of information that talks about the dark side of biscuits and how they affect the digestive and immune system.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…