“ಜಲವೇ ಜೀವನ,” “ಜೀವ ಜಲ,” “ಜಲವೇ ಅಮೃತ,” “ಅಮೃತ ಜಲ” ಇತ್ಯಾದಿಯಾಗಿ ನೀರಿನ ಬಗ್ಗೆ ಹೇಳಲಾಗುತ್ತದೆ. ನೀರಿಲ್ಲದೆ ಜೀವನವಿಲ್ಲ. ಕೆಲ ದಿನ ಆಹಾರವಿಲ್ಲದೆ ಬದುಕಬಹುದು. ಆದರೆ, ನೀರಿಲ್ಲದೆ ಬದುಕುವುದು ಕಷ್ಟ! ಏಕೆ…? ನೀರು ಇಷ್ಟು ಮಹತ್ವದ್ದೇ…? ನಾವು ನೀರನ್ನು ತುಂಬಾ ಸಾಮಾನ್ಯ ಅಥವಾ ಸಾಧಾರಣ ಪದಾರ್ಥ ಎಂದುಕೊಂಡಿದ್ದೇವೆ. ಆದರೆ, ಅದು ನಾವು ಅಂದುಕೊಂಡಷ್ಟು ಸಾಧಾರಣ ಪದಾರ್ಥವಲ್ಲ. ಇಂದು ನಾವು ನೀರಿನ ಬಗ್ಗೆ ಸರಿಯಾದ ತಿಳುವಳಿಕೆ ಹಾಗೂ ಮಹತ್ವವನ್ನು ಅರಿತುಕೊಳ್ಳೋಣ.
ನಮ್ಮ ಶರೀರ 70 ರಿಂದ 72% ನೀರಿನಿಂದಲೇ ನಿರ್ಮಾಣವಾಗಿದೆ. ಇದು ಅನೇಕರಿಗೆ ತಿಳಿದಿರಬಹುದು. ದೇಹದಲ್ಲಿ ನಡೆಯುವ ಪ್ರತಿಯೊಂದು ಚಯಾಪಚಯ ಕ್ರಿಯೆಗೆ ನೀರು ಅತ್ಯಗತ್ಯ. ಆದರೂ ಇಂತಹ ಮಹತ್ವದ ಘಟಕವನ್ನು ನಾವು ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಒಂದು RO ಫಿಲ್ಟರ್ ಅಳವಡಿಸಿ ಅಥವಾ ಬಾಟಲ್ #bottle ನೀರನ್ನು ಖರೀದಿಸಿದರೆ ನೀರಿನ ಮಹತ್ವ ಮುಗಿದು ಹೋಯಿತು ಎಂದುಕೊಂಡಿದ್ದೇವೆ. ಆದರೆ, ಇದೇ ನೀರು ಜನರ ಆರೋಗ್ಯವನ್ನು ಹಾಳು ಮಾಡುತ್ತಿದೆ ಎಂಬುದು ಅನೇಕರಿಗೆ ತಿಳಿದೇ ಇಲ್ಲ!
ನೀರಿನ ರಾಸಾಯನಿಕ ಸೂತ್ರ H2O ಎಂದು ಹೆಚ್ಚಿನ ಜನರಿಗೆ ತಿಳಿದಂತಹ ಸಂಗತಿ. ಆದರೆ, ನಾವು ಕೇವಲ ಶುದ್ಧ H2O ಕುಡಿದರೆ ಅದು ನಮಗೆ ಉಪಯೋಗವಾಗುವುದಿಲ್ಲ. ಮೇಲಾಗಿ, ದೀರ್ಘಕಾಲ ಶುದ್ಧ H2O ವನ್ನು ಬಳಸಿದರೆ ನಾವು ರೋಗಿಗಳಾಗುವುದು ಖಂಡಿತ. ನೀರು ಕೂಡ ನಮಗೆ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಪೂರೈಸುವ ಮೂಲವಾಗಿದೆ. ಜೊತೆಗೆ, ಅದರ ಆಮ್ಲೀಯತೆ ಅಂದರೆ ಪಿಎಚ್ (pH) ಕೂಡ ಯೋಗ್ಯವಾಗಿರಬೇಕು. ನೀರಿನ ನೈಸರ್ಗಿಕ ಆಮ್ಲಿಯತೆ ಅಥವಾ ಪಿಎಚ್ 7 ಅಂದರೆ ಇದು ಆಮ್ಲವೂ ಅಲ್ಲ, ಪ್ರತ್ಯಾಮ್ಲವೂ ಅಲ್ಲ, ತಟಸ್ಥ ಪದಾರ್ಥ. ನಮ್ಮ ರಕ್ತದ ಸಾಮಾನ್ಯ ಪಿಎಚ್ 7.26‐7.36 ಮಧ್ಯೆ ಇರುತ್ತದೆ. ಇದು ಇದೇ ಮಟ್ಟದಲ್ಲಿ ಉಳಿಯುವುದು ಅವಶ್ಯಕ.
RO ನೀರು ಮತ್ತು ಬಾಟಲಿ ನೀರು: ಆದರೆ, ಇಂದು ನಾವು ಬಳಸುವ RO/ಬಾಟಲಿ ನೀರು, ಖನಿಜ ಹಾಗೂ ಜೀವನ ಸತ್ವಗಳಿಂದ ರಹಿತವಾಗಿರುತ್ತದೆ. ತಿಳಿಯಾಗಿ ಅಂದವಾಗಿ ಕಂಡರೂ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀರಿನಿಂದ ದೊರೆಯುವ ಅನೇಕ ಖನಿಜಗಳು ಹಾಗೂ ಜೀವನ ಸತ್ವಗಳು ನಮ್ಮ ಆರೋಗ್ಯಕ್ಕೆ ಅತ್ಯಮೂಲ್ಯವಾದವುಗಳು. ಅಲ್ಲದೇ, ಬಾಟಲಿ ನೀರನ್ನು ಸೋಂಕು ರಹಿತ ಗೊಳಿಸಲು ಅದನ್ನು ಶುದ್ಧೀಕರಿಸಿ ಅದರಲ್ಲಿ ಅನೇಕ ಹಾನಿಕಾರಕ ಕೀಟನಾಶಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳ ಅಂಶ ಬಾಟಲಿ ನೀರಿನಲ್ಲಿ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಮಟ್ಟದಲ್ಲಿ ಇರುತ್ತವೆ. ಜೊತೆಗೆ ಈ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಶೇಖರಿಸಿ ಉಪಯೋಗಿಸುವುದರಿಂದ ನೀರು ಹಾಗೂ ಪ್ಲಾಸ್ಟಿಕ್ ನ ಮಧ್ಯೆ ರಾಸಾಯನಿಕ ಕ್ರಿಯೆ ಉಂಟಾಗಿ ಹಾನಿಕಾರಕ ಪ್ಲಾಸ್ಟಿಕ್ ಘಟಕಗಳು ಕೂಡ ನಮ್ಮ ದೇಹವನ್ನು ಸೇರುತ್ತವೆ. ಇದರಿಂದ ಜೀರ್ಣ ಸಂಸ್ಥೆಯ ಸಮಸ್ಯೆಗಳಿಂದ ಹಿಡಿದು ಮಧುಮೇಹ, ಕ್ಯಾನ್ಸರ್ ವರೆಗೆ ಯಾವುದೇ ರೋಗವು ಸಂಭವಿಸಬಹುದು. ನಾವು ಕುಡಿಯುತ್ತಿರುವ ನೀರು ಶರೀರದ ಆಮ್ಲತೆಯನ್ನು ಹೆಚ್ಚಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಪ್ರತ್ಯಾಮ್ಲತೆಯನ್ನು ಹೆಚ್ಚಿಸುವ ನೀರು ಆರೋಗ್ಯಕ್ಕೆ ಅತ್ಯಂತ ಲಾಭಕಾರಿಯಾಗಿದೆ.
ಹಾಗಾದರೆ ಎಂಥ ನೀರು ಕುಡಿಯಬೇಕು?: ನಾವು ಇಂದು ಬಳಸುವ ಎಲ್ಲ ಪ್ರಕಾರದ ನೀರು “ನಿರ್ಜೀವ” ನೀರು. ಝರಿ, ಹರಿಯುವ ಹೊಳೆ, ಬಾವಿ, ಕೆರೆ, ಕುಂಡ, ಇತ್ಯಾದಿಗಳಲ್ಲಿ ದೊರೆಯುವ ನೈಸರ್ಗಿಕ ನೀರು ಆರೋಗ್ಯಕ್ಕೆ ಉತ್ತಮ. ಈ ನೀರನ್ನು “ಸಜೀವ” ನೀರು ಎಂದು ಗುರುತಿಸಲಾಗುತ್ತದೆ. ಆದರೆ, ದುರುದೃಷ್ಟದಿಂದ ಈ ನೀರು ಈಗ ಎಲ್ಲರಿಗೂ ಲಭ್ಯವಿಲ್ಲ. ಅಲ್ಲದೆ, ಈಗ ಎಲ್ಲಾ ನದಿ, ಕೆರೆ, ಬಾವಿಗಳು ಪರಿಸರ ಮಾಲಿನ್ಯದಿಂದಾಗಿ ಕಲುಷಿತಗೊಂಡಿವೆ. ಆದ್ದರಿಂದ, ವಾಸ್ತವದಲ್ಲಿ ನಮ್ಮ ಸುತ್ತಮುತ್ತ ಇರುವ ಎಲ್ಲಾ ನೀರು ನಿರ್ಜೀವ ನೀರೇ ಆಗಿದೆ. ಕೇವಲ ನೀರನ್ನು ಬದಲಿಸುವುದರಿಂದ ಅಸಿಡಿಟಿಯಿಂದ ಹಿಡಿದು ಮಧುಮೇಹ, ಕ್ಯಾನ್ಸರ್, ಸಿಕಲ್ ಸೆಲ್ ಎನಿಮಿಯಾ ದಂತಹ ಭಯಂಕರ ರೋಗಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು.
ಈ ಸಮಸ್ಯೆಯನ್ನು ಪರಿಹರಿಸಲು RO ಹಾಗೂ ಬಾಟಲಿ ನೀರುಗಳನ್ನು ತ್ಯಜಿಸಿ ಮನೆಯಲ್ಲಿ ಸಜೀವಗೊಳಿಸಿದ ನೀರನ್ನು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಇಂದಿನ ಆರಾಮದಾಯಕ ಜೀವನದಲ್ಲಿ ಇದು ಕಷ್ಟ ಹಾಗೂ ಆಸಮಂಜಸ ಎಂದು ಅನೇಕರಿಗೆ ಅನ್ನಿಸಬಹುದು. ಆರಂಭದಲ್ಲಿ ಅನಾನುಕೂಲಕರ ಹಾಗೂ ಕಿರಿಕಿರಿ ಎನಿಸಿದರೂ ರೂಢಿಯಾದ ನಂತರ ನೀವು ಇದನ್ನು ಇಷ್ಟಪಡುತ್ತೀರಿ. ಅಲ್ಲದೆ, ಕೇವಲ ನೀರನ್ನು ಬದಲಿಸಿ ಯೋಗ್ಯ ಪ್ರಕಾರದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದರಿಂದ ಹೆಚ್ಚು ಕಡಿಮೆ ಎಲ್ಲಾ ತರಹದ ರೋಗಗಳಿಂದ ಮುಕ್ತರಾಗಬಹುದು. ಆರೋಗ್ಯ ಸೇವೆಗಾಗಿ ವೈದ್ಯರು ಹಾಗೂ ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಮತ್ತಷ್ಟು ರೋಗಗಳನ್ನು ಕೊಂಡುಕೊಳ್ಳುವ ಅಗತ್ಯವೇ ಉಳಿಯುವುದಿಲ್ಲ.
ಹಾಗಾದರೆ ಸಜೀವ ನೀರನ್ನು ಹೇಗೆ ಪಡೆಯುವುದು? ಹಾಗೆ ಇದು ತುಂಬಾ ಸುಲಭವಾಗಿ ಮನೆಯಲ್ಲಿ ಮಾಡಬಹುದು.
1. ಮೂರು ದೊಡ್ಡ ಮಣ್ಣಿನ ಮಡಕೆಗಳನ್ನು ಒಂದು ಸ್ಟ್ಯಾಂಡ್ ಮೇಲೆ ಒಂದರ ಮೇಲೊಂದನ್ನು ಇರಿಸಿ. (ಇತ್ತೀಚೆಗೆ ರಾಸಾಯನಿಕಗಳನ್ನು ಬಳಸಿ ಯಂತ್ರಗಳಲ್ಲಿ ಮಡಿಕೆಗಳನ್ನು ತಯಾರಿಸಿ ಆಕರ್ಷಕವಾಗಿ ಪಾಲಿಶ್ ಮಾಡಿರುತ್ತಾರೆ. ಇಂಥ ಮಡಕೆಗಳನ್ನು ಬಳಸಬೇಡಿ. ಪಾರಂಪರಿಕ ಪದ್ಧತಿಯಿಂದ ತಯಾರಿಸಿದ ಮಡಕೆಗಳನ್ನೇ ಬಳಸಿ).
2. ಮೇಲಿನ ಎರಡು ಮಡಕೆಗಳಿಗೆ ತಳದಲ್ಲಿ 1-3 ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ.
3. ಮೂರನೆಯ ಮಡಕೆಗೆ ತಳದಿಂದ ಸುಮಾರು 1½-2 ಇಂಚು ಮೇಲಕ್ಕೆ ಒಂದು ನಳದ ತೊಟ್ಟಿಯನ್ನು ಅಳವಡಿಸಿ. ಇದರಲ್ಲಿ ಸುಮಾರು 5-10 ಗ್ರಾಂ ಒಣಗಿಸಿದ ಸಾವಯವ ನುಗ್ಗೆ ಬೀಜಗಳ ಪುಡಿಯನ್ನು ಹಾಕಿ. ಜೊತೆಗೆ ಒಂದು ತಾಮ್ರದ ಚಿಕ್ಕ ಚೊಂಬು, ಲೋಟ ಅಥವಾ ತಟ್ಟೆಯನ್ನು ಇಡಿ.
4. ಸುಮಾರು 200 ಗ್ರಾಂ, 100 ಗ್ರಾಂ ಹಾಗು 50 ಗ್ರಾಂ ಗಾತ್ರದ ಕಲ್ಲುಗಳನ್ನು ಹಾಗೂ ಮರಳನ್ನು ಕಲೆಹಾಕಿ. ಇವನ್ನು ಯಾವುದಾದರೂ ನದಿ ಪಾತ್ರದಿಂದ ಸಂಗ್ರಹಿಸಿದರೆ ಉತ್ತಮ. ಈ ಎಲ್ಲಾ ಕಲ್ಲುಗಳನ್ನು ಹಾಗೂ ಮರಳನ್ನು ನೀರಿನಲ್ಲಿ ನೆನೆಸಿಟ್ಟು ಐದಾರು ಬಾರಿ ಚೆನ್ನಾಗಿ ತೊಳೆದುಕೊಳ್ಳಬೇಕು. ತೊಳೆಯಲು ಸಾಬೂನು ಅಥವಾ ಇತರರ ರಾಸಾಯನಿಕಗಳನ್ನು ಬಳಸಬೇಡಿ.
5. ಮೇಲಿನ ಎರಡು ಮಾಡಕ್ಕೆಗಳಲ್ಲಿ ಮೊದಲು 200 ಗ್ರಾಂ ಗಾತ್ರದ ಕಲ್ಲುಗಳನ್ನು ಐದಾರು ಕಲ್ಲುಗಳನ್ನು ಹಾಕಿ ನಂತರ 100 ಗ್ರಾಮ್ ಗಾತ್ರದ ಕಲ್ಲುಗಳನ್ನು ಹಾಕಿ ನಂತರ 50 ಗ್ರಾಂ ಗಾತ್ರದ ಕಲ್ಲುಗಳನ್ನು ಹಾಕಿ ಮೇಲೆ ಮರಳಿನ ದಪ್ಪ ಪದರವನ್ನು ಹಾಕಿ. ಎಲ್ಲಕ್ಕೂ ಮೇಲೆ ಮರದ ಇದ್ದಲನ್ನು ಹಾಕಿ. ಹೀಗೆ ಮೇಲಿನ ಮಡಕೆಯನ್ನು ¾ ರಷ್ಟು ಮತ್ತು ಮಧ್ಯದ ಮಡಕೆಯನ್ನು ಅರ್ಧದಷ್ಟು ತುಂಬಿಸಬೇಕು.
6. ಈಗೋ ಸಿದ್ಧವಾಯಿತು ನಿಮ್ಮ ಪ್ರಾಕೃತಿಕ ಸಜೀವ ನೀರಿನ ಯಂತ್ರ. ಮೇಲಿನ ಮಡಕೆಯಲ್ಲಿ ಸಾಮಾನ್ಯ ನಿರ್ಜೀವ ನೀರನ್ನು ತುಂಬಿಸಿ ಕೆಳಗಿನ ಮಡಕೆಯಿಂದ ಶುದ್ಧ ಸಜೀವ ನೀರನ್ನು ಪಡೆಯಿರಿ. ಈ ನೀರನ್ನು ಅಡುಗೆಗೆ ಹಾಗೂ ಕುಡಿಯುವುದಕ್ಕೆ ಉಪಯೋಗಿಸಬೇಕು. ಇದು ನಿಮ್ಮ ಆರೋಗ್ಯದಲ್ಲಿ ಮಹತ್ತರ ಸಕಾರಾತ್ಮಕ ಬದಲಾವಣೆಗಳನ್ನು ಮಾಡಲು ಸಹಾಯಕವಾಗುತ್ತದೆ.
7. ಈ ಯಂತ್ರವನ್ನು ಎಲ್ಲಾದರೂ ಹೊರಾಂಗಣದಲ್ಲಿ ಬಿಸಿಲಲ್ಲಿ ಇಡುವ ವ್ಯವಸ್ಥೆ ಮಾಡಿದರೆ ಇನ್ನೂ ಉತ್ತಮ.
8. ನಿರ್ವಹಣೆ: ವಾರಕ್ಕೆ ಒಂದೆರಡು ಬಾರಿ ತಾಮ್ರವನ್ನು ಹುಣಸೆ ನೀರಿನಲ್ಲಿ ತೊಳೆದುಕೊಳ್ಳಿ. ಕಲ್ಲು ಹಾಗೂ ಮರಳನ್ನು ವಾರಕ್ಕೊಮ್ಮೆ ತೊಳೆದು ಹಾಕಿ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…