ಕಳೆನಾಶಕ ಸಿಂಪಡಣೆಯಿಂದ ಇಬ್ಬರು ಬಲಿ | ಹಲವು ದೇಶಗಳಲ್ಲಿ ಕಳೆನಾಶಕ ಬಳಕೆ ನಿಷೇಧ | ಭಾರತದಲ್ಲೂ ನಿಷೇಧ ಸಾಧ್ಯ ಇದೆಯೇ…?

September 26, 2023
8:17 PM
ಕಳೆನಾಶಕ ಸಿಂಪಡಣೆ ಅಪಾಯಕಾರಿಯಾಗಿ ಕಾಣಿಸತೊಡಗಿದೆ. ಹಾಸನದಲ್ಲಿ ಕೆಲವು ದಿನಗಳ ಹಿಂದೆ ಶುಂಠಿ ಬೆಳೆಗೆ ವಾರಗಳ ಕಾಲ ಔಷಧಿ ಸಿಂಪಡಣೆ ಮಾಡಿದ ಯುವಕ ಅಸ್ವಸ್ಥಗೊಂಡು ಯುವಕ ಮೃತಪಟ್ಟಿದ್ದ. ಜೂನ್‌ ತಿಂಗಳಲ್ಲಿ ಅರಣ್ಯ ಇಲಾಖೆ ಸಿಬಂದಿಯೊಬ್ಬರು ಮೃತಪಟ್ಟಿದ್ದರು.

ಕಳೆನಾಶಕ ಸಿಂಪಡಣೆ ಅಪಾಯಕಾರಿಯಾಗಿ ಕಾಣಿಸತೊಡಗಿದೆ. ಹಾಸನದಲ್ಲಿ  ಯುವಕನೊಬ್ಬ ಅಸ್ವಸ್ಥಗೊಂಡು ಮೃತಪಟ್ಟರೆ, ಕೆಲವು ಸಮಯದ ಹಿಂದೆ  ಕುಮಟಾದಲ್ಲಿ ಉಪವಲಯ ಅರಣ್ಯಾಧಿಕಾರಿಯೊಬ್ಬರು ಬಲಿಯಾಗಿದ್ದರು. ಕಳೆನಾಶಕ ಆರೋಗ್ಯದ ಮೇಲೆ, ಪರಿಸರದ ಮೇಲೆ ಅಪಾಯ ಇದೆ ಎಂದು ಕೆಲವು ದೇಶಗಳು ನಿಷೇಧ ಮಾಡಿದ್ದವು. ಆರೋಗ್ಯದ ಅಪಾಯಗಳನ್ನು ಉಲ್ಲೇಖಿಸಿ ಸಾಮಾನ್ಯ ಕಳೆನಾಶಕ ಗ್ಲೈಫೋಸೇಟ್ ಬಳಕೆಯನ್ನು ಕೇಂದ್ರವು ನಿರ್ಬಂಧಿಸುವ ಬಗ್ಗೆ ಕಳೆದ ವರ್ಷ ಚರ್ಚೆಯಾಗಿತ್ತು.  ತಜ್ಞರು ಈ ಕ್ರಮವನ್ನು ಸ್ವಾಗತಿಸಿದ್ದರು. ಆದರೆ ನಿಯಂತ್ರಿಕ ಔಷಧವಾಗಿ ಬಳಕೆಯಲ್ಲಿದೆ.

Advertisement
Advertisement

ಹಾಸನದಲ್ಲಿ ಕೀರ್ತಿ ಎಂಬ 23 ವರ್ಷದ ಯುವಕ ಸತತ 1 ವಾರ ಶುಂಠಿಗೆ ಕಳೆನಾಶಕ ಸಿಂಪಡಿಸಿದ್ದರು. ಬಳಿಕ ದಿಢೀರನೆ ವಾಂತಿ, ಸುಸ್ತಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿ 4 ದಿನಗಳ ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ರಕ್ತದ ಪರೀಕ್ಷೆ ವೇಳೆ ಕೀರ್ತಿ ದೇಹದಲ್ಲಿ ವಿಷ ಇರೋದು ದೃಢವಾಗಿತ್ತು.

Advertisement

ಹುಬ್ಬಳ್ಳಿಯ ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಉಪ ವಲಯ ಅರಣ್ಯಾಧಿಕಾರಿಯೊಬ್ಬರು ಕೀಟನಾಶಕದ ಅಂಶ ದೇಹಕ್ಕೆ ತಗುಲಿ ಸಾವನ್ನಪ್ಪಿರುವ  ಘಟನೆ ಕೆಲವು ಸಮಯದ ಹಿಂದೆ ನಡೆದಿತ್ತು. ಸಾಗವಾನಿ ಮಡಿಗೆ ಕಳೆನಾಶಕ ಹಾಕುವ ವೇಳೆ ಈ ಘಟನೆ ಸಂಭವಿಸಿತ್ತು.

ಕಳೆದ ಕೆಲವು ವರ್ಷಗಳಿಂದ ಕಳೆನಾಶಕ ಸಿಂಪಡಣೆ ಹಾಗೂ ಆರೋಗ್ಯ, ಪರಿಸರದ ಮೇಲಿನ ಅಪಾಯದ ಬಗ್ಗೆ ಚರ್ಚೆಯಾಗುತ್ತಿತ್ತು. ಕೆಲವು ದೇಶಗಳಲ್ಲಿ ಕಳೆನಾಶಕ ಬಳಕೆ ನಿಷೇಧ ಮಾಡಲಾಗಿದೆ. ಅದರಲ್ಲೂ ಆರೋಗ್ಯದ ಅಪಾಯಗಳನ್ನು ಉಲ್ಲೇಖಿಸಿ ಸಾಮಾನ್ಯ ಕಳೆನಾಶಕ ಗ್ಲೈಫೋಸೇಟ್ ಬಳಕೆಯನ್ನು ನಿಷೇಧ ಮಾಡಲಾಗಿತ್ತು. ಭಾರತದಲ್ಲೂ ನಿಷೇಧದ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ಚರ್ಚೆಯಾಗಿತ್ತು. ಈ ಕ್ರಮವನ್ನು ತಜ್ಞರು ಸ್ವಾಗತಿಸಿದ್ದರು.

Advertisement

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2022 ರ ಅಕ್ಟೋಬರ್ 21 ರಂದು ಗ್ಲೈಫೋಸೇಟ್, ವ್ಯಾಪಕವಾಗಿ ಬಳಸಲಾಗುವ ಸಸ್ಯನಾಶಕಗಳ ಬಳಕೆಯನ್ನು ನಿರ್ಬಂಧಿಸುವ ಸೂಚನೆಯನ್ನು ನೀಡಿತ್ತು. ಮಾನವರು ಮತ್ತು ಪ್ರಾಣಿಗಳ ಆರೋಗ್ಯದ ಅಪಾಯಗಳನ್ನು ಉಲ್ಲೇಖಿಸಿತ್ತು.

ಸುಮಾರು 35 ದೇಶಗಳು ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸಿವೆ. ಇವುಗಳಲ್ಲಿ ಶ್ರೀಲಂಕಾ, ನೆದರ್ಲ್ಯಾಂಡ್ಸ್, ಫ್ರಾನ್ಸ್, ಕೊಲಂಬಿಯಾ, ಕೆನಡಾ, ಇಸ್ರೇಲ್ ಮತ್ತು ಅರ್ಜೆಂಟೀನಾ ಸೇರಿವೆ. ಗ್ಲೈಫೋಸೇಟ್‌ನ ಆರೋಗ್ಯದ ಪರಿಣಾಮಗಳು ಕ್ಯಾನ್ಸರ್, ಸಂತಾನೋತ್ಪತ್ತಿ ಮತ್ತು  ಊತ, ಚರ್ಮದ ಸುಡುವಿಕೆ, ಮೂಗಿನ ಅಸ್ವಸ್ಥತೆ, ಅಹಿತಕರ ರುಚಿ ಮತ್ತು ಮಸುಕಾದ ದೃಷ್ಟಿ ಇತ್ಯಾದಿಗಳು ಕಾಣುತ್ತವೆ.

Advertisement

ಈಗ ಭಾರತದಲ್ಲಿ 20ಕ್ಕೂ ಹೆಚ್ಚು ಬೆಳೆಗಳಲ್ಲಿ ಗ್ಲೈಫೋಸೇಟ್ ಬಳಸುತ್ತಿರುವುದು ಕಂಡುಬಂದಿದೆ. ಕಳೆನಾಶಕವನ್ನು ಬಳಸುವವರಲ್ಲಿ ಹೆಚ್ಚಿನವರು  ತರಬೇತಿ ಪಡೆದಿಲ್ಲ ಮತ್ತು ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಹೊಂದಿಲ್ಲ ಎಂದು ಅಂದು ವರದಿ ಮಾಡಲಾಗಿತ್ತು. ಇಂದಿಗೂ ನಿಯಂತ್ರಿತ ಔಷಧವಾಗಿ ಸಿಂಪಡಣೆ ಮಾಡಲಾಗುತ್ತಿದೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಣ್ಣುಗಳ ರಾಜ ಮಾವಿಗೂ ತಟ್ಟಿದ ಬಿಸಿಲಿನ ತಾಪ | 400 ಕೋಟಿ ಮೌಲ್ಯದ ಮಾವು ನಷ್ಟ |
May 13, 2024
8:32 PM
by: The Rural Mirror ಸುದ್ದಿಜಾಲ
Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |
May 12, 2024
11:56 AM
by: ಸಾಯಿಶೇಖರ್ ಕರಿಕಳ
ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ | ಗೋಕೃಪಾಮೃತ ಇರುವಾಗ ಕ್ರಿಮಿನಾಶಕಗಳ ಹಂಗೇಕೆ?
May 12, 2024
11:53 AM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ | ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ
May 12, 2024
11:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror