ಸುದ್ದಿಗಳು

ದಸರಾ ಅತ್ಲೆಟಿಕ್ ಕ್ರೀಡಾಕೂಟ | VCET ಎಂಬಿಎ ವಿದ್ಯಾರ್ಥಿನಿಗೆ ಚಿನ್ನದ ಪದಕ |

Share

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿನಿ ಪವಿತ್ರ.ಜಿ ರಾಜ್ಯ ಮಟ್ಟದ ದಸರಾ ಅತ್ಲೆಟಿಕ್ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್‍ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

Advertisement
ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಇವರು 12.69 ಮೀಟರ್ ಜಿಗಿದು ದಾಖಲೆಯನ್ನು ನಿರ್ಮಿಸಿದ್ದಾರೆ. 10 ವರ್ಷಗಳ ಹಿಂದೆ ಅಂದರೆ 2013ರಲ್ಲಿ ನಿರ್ಮಿಸಿದ್ದ 12.38 ಮೀಟರ್ ಗಳ ಹಳೆಯ ದಾಖಲೆಯನ್ನು ಮುರಿದರು.

ಇದೇ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಾಲೇಜಿನ ದ್ವಿತೀಯ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಕೀರ್ತಿರಾಜ್.ಕೆ.ಎಸ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರಿಗೆ ಭಾರತೀಯ ಸೇನಾಪಡೆಗಳ ವಿಶ್ರಾಂತ ಅತ್ಲೆಟಿಕ್ ಮುಖ್ಯ ತರಬೇತುದಾರ ರವಿಶಂಕರ ಮುಕುಂದ ತರಬೇತಿಯನ್ನು ನೀಡಿದ್ದಾರೆ. ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನ ನೀಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕುರುವಾವ್ ಕರುಪ್ ಆಜ್ಞೆಯಂತೆ ಅಗ್ನಿ ಸೇವೆ ಮಾಡುವ ಮಹಾವಿಷ್ಣುಮೂರ್ತಿ

ತುಳುನಾಡಿನ ವಿವಿದೆಡೆ ವಿಷ್ಣುಮೂರ್ತಿ ದೈವದ ನೇಮ, ಒತ್ತೆಕೋಲ ನಡೆಯುತ್ತದೆ. ಈ ಆಚರಣೆಯ ಹಿಂದಿರುವ…

37 minutes ago

ಪಟ್ಟೆ ವಿದ್ಯಾ ಸಂಸ್ಥೆಗಳು ಬಡಗನ್ನೂರು ಇನ್ನು ದ್ವಾರಕಾ ಪ್ರತಿಷ್ಠಾನ ಪುತ್ತೂರಿಗೆ ಸೇರ್ಪಡೆ

ಪಟ್ಟೆ ವಿದ್ಯಾ ಸಮಿತಿ (ರಿ)ಯಿಂದ ನಡೆಸಲ್ಪಡುವ ಪ್ರತಿಭಾ ಪ್ರೌಢ ಶಾಲೆ ಪಟ್ಟೆ ಹಾಗೂ…

1 hour ago

ಮುಳಿಯ – ಹೊಸ ಲೋಗೋ- ಅನಾವರಣ | ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್

ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ…

1 hour ago

ಹೊಸರುಚಿ | ಗುಜ್ಜೆ ಶೇಂಗಾ ಮಸಾಲಾ ಪಲ್ಯ

ಗುಜ್ಜೆ ಶೇಂಗಾ ಮಸಾಲಾ ಪಲ್ಯಕ್ಕೆ ಬೇಕಾಗುವ ವಸ್ತುಗಳು ಹಾಗೂ ಮಾಡುವ ವಿಧಾನ :…

5 hours ago

4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ವಿಸ್ತರಿಸಲು ಕಾಫಿ ಮಂಡಳಿ ಯೋಜನೆ

ಅಡಿಕೆ ಮರದ ಜೊತೆಗೂ ಕಾಫಿ ಬೆಳೆ ಅನುಕೂಲಕರವಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರು ಉಪ…

6 hours ago

“ಟ್ರಂಪ್‌ ಸುಂಕ” ಭಾರತೀಯ ರಬ್ಬರ್‌ ಮಾರುಕಟ್ಟೆ ಮೇಲೆ ಪರಿಣಾಮ ಸಾಧ್ಯತೆ

ಟ್ರಂಪ್ ಅವರ ಸುಂಕಗಳು ರಬ್ಬರ್ ಉದ್ಯಮದ ಮೇಲೆ ಪರಿಣಾಮ ಬೀರಬಹುದು ಎಂದು ಅಖಿಲ…

6 hours ago