ಅದೆಷ್ಟೋ ಮಂದಿ ಸಮಾಜ ಸೇವೆ ಮಾಡಬೇಕು ಅನ್ನೋ ಗುರಿಯನ್ನು ಇಟ್ಟುಕೊಂಡು ಸರ್ಕಾರಿ ಅಧಿಕಾರಿಗಳಾಗಿ ಕೆಲಸಕ್ಕೆ ಬರ್ತಾರೆ. ಆದರೆ ಆಮೇಲೆ ಸಮಾಜ ಸೇವೆ ಬಿಟ್ಟು ತಮ್ಮ ಸ್ವಾರ್ಥ ನೋಡಿ ಕೊಳ್ಳುತ್ತಾರೆ. ಆದರೆ ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ ಅವರು ಈ ಮಾತಿಗೆ ಅಪವಾದ ಎನ್ನುವಂತೆ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರೇವುನಾಯ್ಕ ತಾಂಡಾಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಕನ್ನಡ ಪಾಠ ಮಾಡಿ ಗಮನ ಸೆಳೆದರು.
ಯಾದಗಿರಿ ಜಿಲ್ಲೆಯ ಪ್ರಥಮ ಸರ್ಕಾರಿ ಅಧಿಕಾರಿ ಸ್ವತಃ ತಾಂಡಾ ಗ್ರಾಮವೊಂದಕ್ಕೆ ಬಂದು ಅಲ್ಲಿನ ಮಕ್ಕಳಿಗೆ ಪಾಠ ಮಾಡಿದ್ದಾರೆ. ಮತ್ತು ಆ ಮಕ್ಕಳ ಜ್ಞಾನವನ್ನು ಮೆಚ್ಚಿ ಕೊಂಡಾಡಿದ್ದಾರೆ. ಜಿಲ್ಲಾಧಿಕಾರಿ ಯಾದಗಿರಿ ಸ್ವತಃ ಶಿಕ್ಷಕಿಯಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠಮಾಡಿದ್ದಾರೆ. ಹೀಗೆ ತಾಂಡಾ ಮಕ್ಕಳಿಗೆ ಪಾಠ ಮಾಡಿದವರು ಬಿ. ಸುಶೀಲಾ, ಯಾದಗಿರಿ ಡಿಸಿ. ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಪಾಠದ ಜೊತೆಗೆ ತಾಂಡಾ ಮಕ್ಕಳಿಗೆ ಶಬ್ದಗಳ ಪರಿಚಯ ಮಾಡಿಸಿದರು. ಆ ವೇಳೆ ಮಕ್ಕಳ ಕನ್ನಡ ಜ್ಞಾನಕ್ಕೆ ಜಿಲ್ಲಾಧಿಕಾರಿ ಫಿದಾ ಆದರು.
ಕನ್ನಡ ಬಂದರೂ ಇಂಗ್ಲಿಷ್ ನಲ್ಲೇ ಮಾತನಾಡಿಸುವ ಅಧಿಕಾರಿಗಳಿರುವಾಗ ಇವರು ಮಕ್ಕಳಿಗೆ ಕನ್ನಡ ಪಾಠ ಮಾಡಿ ನಿಜಕ್ಕೂ ಕನ್ನಡ ಮಾತೆಗೆ ಅಪಾರ ಗೌರವ ಸಲ್ಲಿಸಿದ್ದಾರೆ. ಇವರಂಂತಹ ಅಧಿಕಾರಿಗಳಿಂದ ಇನ್ನುಳಿದ ಅಧಿಕಾರಿಗಳು ಕಲಿಯೋದು ಬಹಳವಿದೆ.