ಅಕ್ಕಿರಾಜ ಖ್ಯಾತಿಯ ಗಂಡಾನೆ ಸಾವು | ಪ್ರಾಣಿಗಳಲ್ಲೂ ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ಸಂಭವಿಸುತ್ತಿರುವ ಹೃದಯಾಘಾತ |

November 2, 2023
11:29 AM
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಂಪುರ ಸಾಕಾನೆ ಶಿಬಿರದಲ್ಲಿ ಕುಸಿದು ಬಿದ್ದು ಅಕ್ಕಿರಾಜ (Akkiraja) ಖ್ಯಾತಿಯ ಗಂಡಾನೆ (Elephant) ಸಾವನ್ನಪ್ಪಿದೆ.

ಅಂಗಡಿಯಿಂದ ಅಕ್ಕಿ,(Rice) ಬೆಲ್ಲ(Jaggery) ಕದಿಯೋ ಕಳ್ಳರ ಬಗ್ಗೆ ಕೇಳಿದ್ದೀವಿ. ಆದರೆ ಇಲ್ಲೊಂದು ಆನೆ ಹೊಂಚು ಹಾಕಿ ಮನೆ, ಅಂಗಡಿಯಿಂದ ಅಕ್ಕಿ, ಬೆಲ್ಲ ಕಡಿಯುತ್ತಿತ್ತು. ಜಪ್ಪಯ್ಯ ಅಂದ್ರೂ ಯಾರ ಕೈಗೂ ಸಿಕ್ಕಿ ಹಾಕಿಕೊಳ್ಳುತ್ತಿರಲಿಲ್ಲ. ಕೊನೆಗೆ ಈತ ಅಕ್ಕಿ ರಾಜ ಅಂತನೇ ಫೇಮಸ್ಸ್‌ ಆದ. ಆದರೆ ದುರ್ದೈವ ಅಂದ್ರೆ ಈ ಆನೆ ಹೃದಯಾಘಾತಕ್ಕೆ ಬಲಿಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಂಪುರ ಸಾಕಾನೆ ಶಿಬಿರದಲ್ಲಿ ಕುಸಿದು ಬಿದ್ದು ಅಕ್ಕಿರಾಜ (Akkiraja) ಖ್ಯಾತಿಯ ಗಂಡಾನೆ (Elephant) ಸಾವನ್ನಪ್ಪಿದೆ.

Advertisement
Advertisement
Advertisement
Advertisement

ಆನೆಯ ಸಾವಿನ ಸುದ್ದಿ ಕೇಳಿಬರುತ್ತಲೇ ಅದರ ಸುತ್ತ ಹಲವು ಅನುಮಾನಗಳು ಗರಿಗೆದರಿತ್ತು. ಆನೆಯ ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಅಸಲಿಯತ್ತು ಇದೀಗ ಬಯಲಾಗಿದೆ. ಆನೆಗೆ ಹಠಾತ್ ಹೃದಯಾಘಾತ ಉಂಟಾಗಿದೆ. ಸಾಮಾನ್ಯ ಹೃದಯಾಘಾತಕ್ಕಿಂತ ಮೂರು ಪಟ್ಟು ಹೆಚ್ಚು ಹೃದಯಾಘಾತವಾಗಿದ್ದು (Heart Attack) ಮಾತ್ರವಲ್ಲದೇ ಯಕೃತ್ತಿಗೂ ಹಾನಿಯಾಗಿದೆ. ಈ ಕಾರಣಗಳಿಂದ ಆನೆ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ಅಕ್ಕಿ ರಾಜ ಆನೆ ಸಾವನ್ನಪ್ಪಿದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಪರಿಸರವಾದಿಗಳು, ಪ್ರಾಣಿ ಪ್ರಿಯರಿಂದ ಆನೆ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಸಾವನ್ನಪ್ಪಿದ ಗಂಡಾನೆ ಅಕ್ಕಿರಾಜ, ಟ್ರೈ ಜಂಕ್ಷನ್ ಕಿಂಗ್ ಎಂದು ಹೆಸರು ಪಡೆದಿತ್ತು. ಇದು ಕರ್ನಾಟಕ, ಕೇರಳ, ತಮಿಳುನಾಡು ಕಾಡಿನ ಗಡಿಗಳಲ್ಲಿ ಸಂಚಾರ ಮಾಡುತ್ತಿತ್ತು. ಒಂಟಿ ಮನೆಗೆ ಕನ್ನ ಹಾಕಿ ಅಕ್ಕಿ ಕದಿಯುತ್ತಿತ್ತು. ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದ ಹಿನ್ನೆಲೆ, ಕಳೆದ 4 ತಿಂಗಳ ಹಿಂದೆ ಬಂಡೀಪುರದ ಎಲಚೆಟ್ಟಿ ಗ್ರಾಮದ ಬಳಿ ಆನೆಯನ್ನು ಸೆರೆಹಿಡಿಯಲಾಗಿತ್ತು.

Advertisement

ಇದಾದ ನಂತರ ಬಂಡೀಪುರದ (Bandipur) ರಾಂಪುರ (Rampur) ಸಾಕಾನೆ ಶಿಬಿರದಲ್ಲಿ ಆನೆಯನ್ನು ಪಳಗಿಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದರು. ಕ್ರಾಲ್‌ನಲ್ಲಿಟ್ಟು ಆನೆಯನ್ನು ನೋಡಿಕೊಳ್ಳುತ್ತಿದ್ದರು. 3 ತಿಂಗಳಿಗೂ ಹೆಚ್ಚು ಕಾಲ ಕ್ರಾಲ್‌ನಲ್ಲಿದ್ದ ಆನೆಯನ್ನು ತೀರಾ ಇತ್ತೀಚೆಗೆ ಕ್ರಾಲ್‌ನಿಂದ ಹೊರಬಿಡಲಾಗಿತ್ತು.  ಇದೀಗ ಗಂಡಾನೆ ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದೆ. ಆನೆ ಸಾವಿನ ಕಾರಣದ ಬಗ್ಗೆ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

– ಅಂತರ್ಜಾಲ ಮಾಹಿತಿ

Advertisement
An elephant known as Akkiraja died after collapsing in Bandipura Rampur breeding camp of Gundlupet taluk of Chamarajanagar district. As the news of the elephant's death was heard, there were many doubts surrounding it. The cause of death has now been revealed after the postmortem of the elephant. The elephant had a sudden heart attack. Not only heart attack is three times more than normal heart attack but liver is also damaged. The post mortem report said that the elephant died due to these reasons.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror