Advertisement
MIRROR FOCUS

#Coconut | ತೆಂಗಿನಕಾಯಿ ಬೆಲೆ ಕುಸಿತ | ಏರಿಕೆ ಕಾಣದ ಕೊಬ್ಬರಿ ದರ | ದೇಶದ ತೆಂಗು ಬೆಳೆಗಾರರಿಗೆ ಸಂಕಷ್ಟ | ವಿವಿದೆಡೆ ಪ್ರತಿಭಟನೆ ಆರಂಭ |

Share

ಕಳೆದ ಅನೇಕ ವರ್ಷಗಳಲ್ಲಿ ತೆಂಗಿನ ಕಾಯಿಯ ದರ ಈ ಮಟ್ಟಕ್ಕೆ ಇಳಿಕೆಯಾಗಲಿಲ್ಲ. ಕಡಿಮೆಯಾದರೂ ಮತ್ತೆ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಅನೇಕ ಸಮಯಗಳಿಂದ ತೆಂಗಿನಕಾಯಿ ದರ, ಕೊಬ್ಬರಿ ದರ ಏರಿಕೆ ಕಾಣಲಿಲ್ಲ. ಹೀಗಾಗಿ ತೆಂಗು ಬೆಳೆಗಾರರಿಗೆ ಸಂಕಷ್ಟವಾಗಿದೆ.  ತೆಂಗಿನಕಾಯಿ ಮತ್ತು ಕೊಬ್ಬರಿ ಬೆಲೆ ಕುಸಿತದ ಕಾರಣದಿಂದ ಕರ್ನಾಟಕ ಮತ್ತು ಇತರ ದಕ್ಷಿಣದ ರಾಜ್ಯಗಳ ಹಲವಾರು ಭಾಗಗಳಲ್ಲಿ ರೈತರ ಮೇಲೆ ಪರಿಣಾಮ ಬೀರಿದೆ. ಇದೀಗ ಹಲವು ಕಡೆ ಕೃಷಿಕರು ಪ್ರತಿಭಟನೆಯ ಹಾದಿಯಲ್ಲಿದ್ದಾರೆ.

Advertisement
Advertisement

ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಗೊಳಿಸಿ ಪ್ರೋತ್ಸಾಹ ಧನ ನೀಡಬೇಕೆಂದು ಆಗ್ರಹಿಸಿ  ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯದ ಸುಮಾರು 13 ಜಿಲ್ಲೆಗಳಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು ಲಕ್ಷಾಂತರ ಕುಟುಂಬಗಳು ಜೀವನೋಪಾಯಕ್ಕಾಗಿ ತೆಂಗು ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಕಳೆದ ವರ್ಷ 19  ಸಾವಿರ ರೂ.ಗಳ ಬೆಲೆಯಿಂದ ಇದ್ದಕ್ಕಿದ್ದಂತೆ ಕೊಬ್ಬರಿಗೆ ಬೆಲೆ 7500 ರೂ.ಗಳಿಗೆ ಕುಸಿದಿದೆ. ಹೀಗಾಗಿ ರೈತ ಸಂಘ ಹಾಗೂ ತೆಂಗು ಬೆಳೆಗಾರರು ಪ್ರತಿಭಟನೆ ಮಾಡಿದ್ದರು. ರಾಜ್ಯದಲ್ಲಿ 6.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗಿನ ಕೃಷಿ ಮಾಡಲಾಗುತ್ತಿದೆ.

Advertisement

ಸದ್ಯ 7500 ರೂಪಾಯಿಗಳಿಗೆ ಕುಸಿತ ಕಂಡಿದ್ದ ಕೊಬ್ಬರಿ ದರ ಕೊಂಚ ಏರಿಕೆಯ ಹಾದಿಯಲ್ಲಿದೆ. ಕಳೆದ ವಾರ ಪ್ರತಿ ಕ್ವಿಂಟಾಲ್ ಕೊಬ್ಬರಿ ದರ ಗರಿಷ್ಠ 9000 ರೂಪಾಯಿ ಮುಟ್ಟಿತ್ತು ಇದೀಗ ಕೊಂಚ ಏರಿಕೆಯ ನಿರೀಕ್ಷೆ ಇದೆ.

ಇದೇ ವೇಳೆ  ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಕುಸಿಯುತ್ತಿರುವ ಪರಿಣಾಮ ತೆಂಗಿನೆಣ್ಣೆಯ ಬೆಲೆಗಳು 4-5 ವರ್ಷಗಳ ಅಂತರದ ನಂತರ ದಾಖಲೆಯ ಮಟ್ಟಕ್ಕೆ ಕುಸಿದಿವೆ. ಕೇರಳದ ಸಗಟು ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಬೆಲೆ ₹120ಕ್ಕೆ ಇಳಿದಿದ್ದರೆ, ತಮಿಳುನಾಡಿನಲ್ಲಿ ₹103.50 ಇತ್ತು. ಕೊಬ್ಬರಿ ಬೆಲೆಯು ಕೇರಳದಲ್ಲಿ ಪ್ರತಿ ಕೆಜಿಗೆ ₹ 76 ಮತ್ತು ತಮಿಳುನಾಡಿನಲ್ಲಿ ₹ 71 ಕ್ಕೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ವಲಯ ಹೇಳಿದೆ.

Advertisement

ಆದರೆ ತೆಂಗು ಕೂಡಾ ದನಗಳ ಮೇವಿನ ನೆಪದಲ್ಲಿ ತೆಂಗಿನ ಎಣ್ಣೆಯನ್ನು ತೆಗೆಯದೆ ಕೊಬ್ಬರಿ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ತಮಿಳುನಾಡಿನಲ್ಲಿ ಬೆಳೆಗಾರರು ಆರೋಪಿಸಿದ್ದಾರೆ. ಕಡಿಮೆ ಬೆಲೆಯ ತೆಂಗಿನಕಾಯಿಯನ್ನು ಆಮದು ಮಾಡಿಕೊಳ್ಳುವುದರಿಂದ ಇಲ್ಲಿನ ತೆಂಗು ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಕೃಷಿಕರು ಆರೋಪಿಸಿದರು.

ತಮಿಳುನಾಡು ₹15ಕ್ಕೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಈಗ ₹5ಕ್ಕೆ ಮಾರಾಟವಾಗಿದೆ. ಜಾನುವಾರುಗಳ ಮೇವಿನ ನೆಪದಲ್ಲಿ ತೆಂಗಿನಕಾಯಿ ಆಮದನ್ನು ಕೇಂದ್ರವು ನಿಷೇಧಿಸಬೇಕು ಎಂದು ತಮಿಳುನಾಡು ತೆಂಗು ಬೆಳೆಗಾರರು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕೂಡಾ ತೆಂಗಿನ ಕಾಯಿ ದರ 20 ರೂಪಾಯಿಯಿಂದ ಏರಿಕೆ ಕಂಡಿಲ್ಲ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹಲಸು ಮೇಳದತ್ತೊಂದು ಪಯಣ ಮಾಡೋಣವೇ? : ಪುತ್ತೂರಿನಲ್ಲಿ ಹಲಸು ಮೇಳ

ಇದೋ, ಬಂದಿದೆ ನೋಡಿ 2024ರ ಹಲಸು ಮೇಳ(Jackfruit Mela) ಪುತ್ತೂರು(Puttur). ಪ್ರತಿ ವರ್ಷದಂತೆ…

25 mins ago

ಸಗಣಿಯಲ್ಲಡಗಿದೆ ಬೆಳೆಗೆ ಅವಶ್ಯಕ ಪೋಷಕಾಂಶಗಳು : ನೈಸರ್ಗಿಕ ಕೃಷಿಯಲ್ಲಿ ದೇಶಿ ಗೋವಿನ ಮಹತ್ವ ಬಹಳ ಮುಖ್ಯ

ಒಂದು ಸಸ್ಯ(Plant) ಪರಿಪೂರ್ಣವಾಗಿ ಮತ್ತು ಆರೋಗ್ಯವಾಗಿ(Healthy) ಬೆಳೆಯಬೇಕಾದರೆ ಸುಮಾರು 108 ಪೋಷಕಾಂಶಗಳ(Nutrition) ಅವಶ್ಯಕತೆ…

46 mins ago

ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು

ರಾಜ್ಯದ ಕೆಲ ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ(Heavy Rain). ನೀರಿಲ್ಲದೆ ಬೇಸತ್ತಿದ್ದ ಜನ ಜಾನುವಾರುಗಳು…

1 hour ago

ಹವಾಮಾನ ಸಂಕಷ್ಟ | ಕಾದ ಭೂಮಿಗೆ ‘ರೆಡ್‌ ಅಲರ್ಟ್‌’ | ಜಗತ್ತಿನ ತಾಪಮಾನ 1.5 ಡಿಗ್ರಿ ಇಳಿಕೆ ಸಾಧ್ಯವಾಗುತ್ತಿಲ್ಲ…!

ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಜಗತ್ತಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಆಹಾರ ಉತ್ಪಾದನೆ ಮೇಲೂ…

2 hours ago

Karnataka Weather | 17-05-2024 | ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆ | ಮೇ 22ರ ನಂತರ ವಾಯುಭಾರ ಕುಸಿತ ಸಾಧ್ಯತೆ |

ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ…

3 hours ago