Advertisement
ಸುದ್ದಿಗಳು

#PMFBY | ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆ ವಿಮೆ | ಜು.31 ಪ್ರೀಮಿಯಂ ತುಂಬಲು ಕೊನೆಯ ದಿನ | ಈಗ FRUIT ID ಗೊಂದಲ…! | ವಿಮೆ ಪಾವತಿ ಕೊನೆಯ ದಿನ ಮುಂದೂಡಬಹುದೇ ?

Share

ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿವಿಧ ಕಾರಣಗಳಿಂದ ತಡವಾಗಿ ಹವಾಮಾನ ಆಧಾರಿತ ಬೆಳೆ ವಿಮೆಗೆ ಪ್ರೀಮಿಯಂ ಪಾವತಿಗೆ ನೋಟಿಫೀಕೇಶನ್‌ ಆಗಿತ್ತು. ಕೇವಲ ಒಂದು ವಾರದ ಅವಕಾಶ ಇದೆ. ಪ್ರೀಮಿಯಂ ಪಾವತಿಗೆ ಜು.31 ಕೊನೆಯ ದಿನವಾಗಿದೆ. ಈ ಬಾರಿ FID ( FRUIT ID) ಕಡ್ಡಾಯವಾಗಿದೆ. ಹಲವು ಕೃಷಿಕರಿಗೆ ಈ ಐಡಿ ಆಗದೇ ಇರುವುದು  ಈಗ ಸಮಸ್ಯೆಯಾಗಿದೆ.

ಈ ಬಾರಿ ಬೆಳೆ ವಿಮೆ ಪಾವತಿಗೆ FRUIT ID ಕಡ್ಡಾಯವಾಗಿದೆ.ಆದರೆ ಕೆಲವು ಕೃಷಿಕರಿಗೆ ಈ ಐಡಿ ಇಲ್ಲದ ಕಾರಣದಿಂದ ಅನೇಕ ಕೃಷಿಕರಿಗೆ ಬೆಳೆ ವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ವಿಮೆ ಕಂತು ಕಟ್ಟಲು ಜುಲೈ 31 ಕೊನೇ ದಿನವಾಗಿದೆ. ಹೀಗಾಗಿ ಈಗ ಗೊಂದಲ ಉಂಟಾಗಿದೆ.

ಈ ಬಾರಿ ಪಹಣಿಯಲ್ಲಿ  ಹೆಸರು ಇರುವ ಎಲ್ಲರದೂ ದಾಖಲೆ ಪತ್ರಗಳು ಬೇಕಿದೆ. ಅದರ ಜೊತೆಗೇ FRUIT ID ಕೂಡಾ ಕಡ್ಡಾಯವಾಗಿದೆ. ಗ್ರಾಮೀಣ ಭಾಗದಲ್ಲಿ, ಕೃಷಿಕರಲ್ಲಿ ಪಹಣಿಯಲ್ಲಿ ಹೆಸರು ಇರುವ ಎಲ್ಲರದೂ ಈ ಐಡಿ (ಫಾಮರ್‌ ಐಡಿ)ಯನ್ನು ಮಾಡಿಸಿರಲಿಲ್ಲ. ಈಗ ಬೆಳೆ ವಿಮೆಗಾಗಿ ಈ ಐಡಿ ರಚನೆಗೆ ಇಲಾಖೆಗೆ ಹೋದರೂ ತಕ್ಷಣವೇ ಈ ಐಡಿ ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಜು.31 ರೊಳಗೆ ಕಷ್ಟವಿದೆ.

ಇದಕ್ಕಾಗಿ ಬೆಳೆವಿಮೆ ಪಾವತಿಯ ದಿನವನ್ನು ಮುಂದೂಡುವ ಅಗತ್ಯ ಇದೆ. ಅದರ ಜೊತೆಗೆ ಸರಳೀಕರಣದ ಜೊತೆಗೆ ಬೆಳೆವಿಮೆ ಪಾವತಿಗೆ ಅವಕಾಶ ನೀಡಬೇಕಾದ ಅಗತ್ಯ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

8 hours ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

23 hours ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

1 day ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

2 days ago