ತಂತ್ರಜ್ಞಾನ ಕೃಷಿಗೆ ಬಂದರೆ ರೈತನ ಆದಾಯ ಹೆಚ್ಚುತ್ತದೆಯೇ..? ಡೀಪ್‌ ಟೆಕ್‌ ಕೃಷಿ ವಿಶ್ಲೇಷಣೆ

January 13, 2026
7:00 AM
ಭಾರತದಲ್ಲಿ ಡೀಪ್‌ ಟೆಕ್‌ ಕೃಷಿ ಕ್ರಾಂತಿ ರೈತನ ಬದುಕಿಗೆ ಏನು ಬದಲಾವಣೆ ತರುತ್ತದೆ? ವೆಚ್ಚ ಕಡಿತ, ಹವಾಮಾನ ಅಪಾಯ, ಕಾರ್ಮಿಕ ಕೊರತೆ ಮತ್ತು ರೈತ ಆತಂಕಗಳ ಕುರಿತು ರೂರಲ್‌ ಮಿರರ್‌ ವಿಶೇಷ ವಿಶ್ಲೇಷಣೆ.

ಭಾರತದ ಕೃಷಿ ಇಂದು ಒಂದು ಮಹತ್ವದ ತಿರುವಿನಲ್ಲಿ ನಿಂತಿದೆ. ಹವಾಮಾನ ಅಸ್ಥಿರತೆ, ನೀರಿನ ಕೊರತೆ, ಕಾರ್ಮಿಕರ ಅಭಾವ ಮತ್ತು ನಿರಂತರವಾಗಿ ಏರುತ್ತಿರುವ ಉತ್ಪಾದನಾ ವೆಚ್ಚಗಳು ರೈತನ ಬದುಕನ್ನು ಕಠಿಣಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಡೀಪ್‌ ಟೆಕ್‌ (Deep Tech) ಕೃಷಿಯೇ ಮುಂದಿನ ಪರಿಹಾರ ಎಂಬ ಮಾತು ಕೇಳಿಬರುತ್ತಿದೆ.

Advertisement

ಆದರೆ, ರೈತನ  ಪ್ರಶ್ನೆ ಕೇಳುವ ಸರಳವಾಗಿದೆ, “ಈ ತಂತ್ರಜ್ಞಾನ ನನ್ನ ಹೊಲಕ್ಕೆ ಬಂದರೆ ನನಗೆ ನಿಜಕ್ಕೂ ಲಾಭವಾಗುತ್ತದೆಯೇ?”.  World Economic Forum ವರದಿಗಳ ಪ್ರಕಾರ, ಕೃತಕ ಬುದ್ಧಿಮತ್ತೆ, ಉಪಗ್ರಹ ಚಿತ್ರಣ, ಸೆನ್ಸರ್‌, ಡ್ರೋನ್‌ ಮತ್ತು ಜೈವಿಕ ತಂತ್ರಜ್ಞಾನಗಳು ಕೃಷಿಯ ಭವಿಷ್ಯವನ್ನು ರೂಪಿಸಬಲ್ಲವು. ಆದರೆ ಇವುಗಳ ಯಶಸ್ಸು ರೈತನ ಬದುಕಿನಲ್ಲಿ ಎಷ್ಟು ಬದಲಾವಣೆ ತರುತ್ತವೆ ಎಂಬುದೇ ಮುಖ್ಯ ಪ್ರಶ್ನೆ.

ಕೃಷಿ ಇಂದು ಒತ್ತಡಗಳನ್ನು ಎದುರಿಸುತ್ತಿದೆ. ಪ್ರಪಂಚದಾದ್ಯಂತ, ರೈತರು ಮತ್ತು ಆಹಾರ ಕಂಪನಿಗಳು ಹವಾಮಾನ ಏರಿಳಿತ, ಕಡಿಮೆಯಾಗುತ್ತಿರುವ ಕೃಷಿ , ಮಣ್ಣಿನ ಗುಣಮಟ್ಟ ಕುಸಿತ, ಕುಸಿಯುತ್ತಿರುವ ಅಂತರ್ಜಲ ಮಟ್ಟ, ಹೆಚ್ಚುತ್ತಿರುವ ಭೌಗೋಳಿಕ ಅನಿಶ್ಚಿತತೆಯೊಂದಿಗೆ ಕೃಷಿ ಹೋರಾಡುತ್ತಿವೆ. ವಿಶ್ವದ ಸುಮಾರು ಮೂರನೇ ಒಂದು ಭಾಗದಷ್ಟು ಮಣ್ಣು ಈಗಾಗಲೇ ಕ್ಷೀಣಿಸುತ್ತಿದೆ. ಆದರೆ, ಪ್ರಪಂಚದಾದ್ಯಂತದ ಪ್ರಮುಖ ಜಲಚರಗಳಲ್ಲಿ 71% ರಷ್ಟು ಅಂತರ್ಜಲ ಮಟ್ಟಗಳು ಕುಸಿಯುತ್ತಿವೆ.  ಇಂತಹ ಸಂದರ್ಭ ಇತ್ತೀಚಿನ ತಾಂತ್ರಿಕ ಪ್ರಗತಿಗಳು ಗಮನ ಸೆಳೆದಿದೆ. ವಿಶ್ವ ಆರ್ಥಿಕ ವೇದಿಕೆಯ ಹೊಸ ವರದಿಯಾದ “ಶೇಪಿಂಗ್ ದಿ ಡೀಪ್-ಟೆಕ್ ರೆವಲ್ಯೂಷನ್ ಇನ್ ಅಗ್ರಿಕಲ್ಚರ್” ನಲ್ಲಿ ವಿವರಿಸಿದ್ದಾರೆ.  ಅದರಲ್ಲಿ ಡೀಪ್‌ ಟೆಕ್‌ (Deep Tech) ಕೃಷಿ ಉಲ್ಲೇಖಿಸಲಾಗಿದೆ.

ವೆಚ್ಚ ಕಡಿತ: ಡೀಪ್‌ ಟೆಕ್‌ನ ಮೊದಲ ಲಾಭ :  ಇಂದಿನ ಕೃಷಿಯಲ್ಲಿ ರೈತನು ಹೆಚ್ಚಾಗಿ “ಅಂದಾಜು” ಮೇಲೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಯಾವಾಗ ಗೊಬ್ಬರ ಹಾಕಬೇಕು, ಎಷ್ಟು ಔಷಧಿ ಸಿಂಪಡಿಸಬೇಕು ಎಂಬುದರಲ್ಲಿ ತಪ್ಪಾದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗುತ್ತಿವೆ.  AI ಆಧಾರಿತ ಬೆಳೆ ಸಲಹೆ, ಮಣ್ಣು ಮತ್ತು ತೇವಾಂಶ ಸೆನ್ಸರ್‌ಗಳ ಬಳಕೆಯಿಂದ ಅಗತ್ಯವಿರುವಷ್ಟೇ ಗೊಬ್ಬರ–ಔಷಧಿ ಬಳಕೆ ಸಾಧ್ಯ, ಅನಗತ್ಯ ಖರ್ಚು ಕಡಿತ, ಮಣ್ಣು ಮತ್ತು ಬೆಳೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹವಾಮಾನ ಅಪಾಯಕ್ಕೆ ತಂತ್ರಜ್ಞಾನ:  ಅಕಾಲಿಕ ಮಳೆ, ಬರ, ಬಿಸಿಲಿನ ಅಲೆಗಳು ರೈತನ ಬೆವರನ್ನು ಕ್ಷಣಾರ್ಧದಲ್ಲಿ ನಷ್ಟವಾಗಿ ಮಾಡಿಬಿಡುತ್ತಿವೆ. ಉಪಗ್ರಹ ಚಿತ್ರಣ ಮತ್ತು ಹವಾಮಾನ ಮುನ್ಸೂಚನೆ ಆಧಾರಿತ ಡೀಪ್‌ ಟೆಕ್‌ ಉಪಕರಣಗಳು. ಇವು ಮಳೆಯ ಮುಂಗಡ ಎಚ್ಚರಿಕೆ, ಕಟಾವು ಅಥವಾ ಸಿಂಪಡಣೆ ಸಮಯದ ಸರಿಯಾದ ನಿರ್ಧಾರ, ಬೆಳೆ ನಷ್ಟವನ್ನು ತಗ್ಗಿಸುವ ಸಾಧ್ಯತೆ ಇದೆ.  ಇದು ಸಣ್ಣ ರೈತನಿಗೆ ವಿಮೆಗಿಂತಲೂ ದೊಡ್ಡ ಭರವಸೆ ಎನ್ನಬಹುದು.

Advertisement

ಕಾರ್ಮಿಕ ಕೊರತೆಗೆ ಯಂತ್ರಗಳ ನೆರವು:  ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಕೃಷಿಯಿಂದ ದೂರವಾಗುತ್ತಿರುವುದು ದೊಡ್ಡ ಸವಾಲಾಗಿದೆ. ಕಾರ್ಮಿಕ ಕೊರತೆಯಿಂದಾಗಿ ಹಲವಾರು ಹೊಲಗಳಲ್ಲಿ ಕೆಲಸ ವಿಳಂಬವಾಗುತ್ತಿದೆ. ಡ್ರೋನ್‌, ಸ್ವಯಂಚಾಲಿತ ಯಂತ್ರಗಳು ಮತ್ತು ಸಣ್ಣ ರೋಬೋಟಿಕ್‌ ಉಪಕರಣಗಳು ಮುಖ್ಯವಾಗಿದೆ, ಇದರಿಂದ ಸಮಯಕ್ಕೆ ಸರಿಯಾದ ಕೃಷಿ ಕಾರ್ಯ, ಮಾನವ ಶ್ರಮದ ಅವಲಂಬನೆ ಕಡಿಮೆ, ಉತ್ಪಾದನಾ ನಿರಂತರತೆ ಸಾಧ್ಯವಿದೆ.

ರೈತನ ಆತಂಕಗಳು: ತಂತ್ರಜ್ಞಾನ ಮಾತ್ರ ಸಾಕೆ? : ಡೀಪ್‌ ಟೆಕ್‌ ಕೃಷಿಯ ಬಗ್ಗೆ ರೈತರಲ್ಲಿ ಕೆಲವು ನಿಜವಾದ ಭಯಗಳೂ ಇವೆ. ಉಪಕರಣಗಳ ಹೆಚ್ಚು ಆರಂಭಿಕ ವೆಚ್ಚದವು, ಡೇಟಾ ಯಾರ ಕೈಯಲ್ಲಿರುತ್ತದೆ ಎಂಬ ಅನುಮಾನ, ತರಬೇತಿ ಇಲ್ಲದೆ ತಂತ್ರಜ್ಞಾನ ಬಳಸಲು ಆಗುವ ಸಾಧ್ಯತೆ ಕಡಿಮೆ, ಕಂಪನಿಗಳ ಮೇಲೆ ಅವಲಂಬನೆ ಹೆಚ್ಚುವ ಭೀತಿ ಇದೆ. ಈ ಆತಂಕಗಳನ್ನು ಪರಿಹರಿಸದೇ ತಂತ್ರಜ್ಞಾನ ನೆಲಕ್ಕಿಳಿಯದು ಎಂಬುದು ರೈತರ ಸ್ಪಷ್ಟ ಅಭಿಪ್ರಾಯ.

ಪರಿಹಾರ ರೈತಕೇಂದ್ರಿತವಾಗಿರಬೇಕು :  ರೈತ ದೃಷ್ಟಿಯಲ್ಲಿ ಡೀಪ್‌ ಟೆಕ್‌ ಕೃಷಿ ಯಶಸ್ವಿಯಾಗಬೇಕೆಂದರೆ, ಸಹಕಾರಿ ಸಂಘಗಳು ಮತ್ತು ಎಫ್‌ಪಿಒಗಳ ಮೂಲಕ ತಂತ್ರಜ್ಞಾನ ಹಂಚಿಕೆ ಮಾಡಬೇಕು. ಸರ್ಕಾರದಿಂದ ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ಸಾಲ ಅಗತ್ಯ ಇದೆ. ಸ್ಥಳೀಯ ಭಾಷೆಗಳಲ್ಲಿ ತರಬೇತಿ ಮತ್ತು ತಾಂತ್ರಿಕ ಸಹಾಯ ಅಗತ್ಯ ಇದೆ. ಖಾಸಗಿ ಕಂಪನಿಗಳಿಗೆ ಸ್ಪಷ್ಟ ನಿಯಂತ್ರಣ ಮತ್ತು ಹೊಣೆಗಾರಿಕೆ ನೀಡಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರೂರಲ್‌ ಮಿರರ್‌ ವಿಶ್ಲೇಷಣೆ : ಡೀಪ್‌ ಟೆಕ್‌ ಕೃಷಿ ಭಾರತಕ್ಕೆ ಅವಕಾಶವಾಗಿದೆ. ಆದರೆ ಅದು ಪೈಲಟ್‌ ಯೋಜನೆಗಳಲ್ಲಿ ಸೀಮಿತವಾಗದೆ, ರೈತನ ದಿನನಿತ್ಯದ ಬದುಕಿನಲ್ಲಿ ಲಾಭ ತರುವಂತೆ ರೂಪುಗೊಳ್ಳಬೇಕು.  ತಂತ್ರಜ್ಞಾನ ರೈತನ ಕೃಷಿಕನ ಭೂಮಿಗೆ ಬಂದಾಗ ಮಾತ್ರ ಕೃಷಿ ಕ್ರಾಂತಿ ಸಂಪೂರ್ಣವಾಗುತ್ತದೆ.  ರೈತನಿಗೆ ಲಾಭ ಕಾಣಿಸಿದಾಗಲೇ ಡೀಪ್‌ ಟೆಕ್‌ ಯಶಸ್ವಿ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಅಡಿಕೆ ಸಿಪ್ಪೆಯಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ | ವಿಜ್ಞಾನಿಗಳ ಮಹತ್ವದ ಸಂಶೋಧನೆ
January 17, 2026
7:00 AM
by: ದ ರೂರಲ್ ಮಿರರ್.ಕಾಂ
ಜ.30 ರಿಂದ ಮೂಡಬಿದ್ರಿಯಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ : | 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ
January 16, 2026
9:37 PM
by: ದ ರೂರಲ್ ಮಿರರ್.ಕಾಂ
ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ | ಲೈಸೆನ್ಸ್ ಹೆಸರಿನಲ್ಲಿ ಹಣ ಕೇಳುವ ವಂಚನೆ – ಎಚ್ಚರಿಕೆ
January 16, 2026
9:31 PM
by: ದ ರೂರಲ್ ಮಿರರ್.ಕಾಂ
ದ.ಕ. ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಸ್ಮಾರ್ಟ್ ಬೋರ್ಡ್‌
January 16, 2026
7:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror