ಅನುಕ್ರಮ

ಹರುಷದ ಬೆಳಕು ಬರಲಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಬೆಳಕು ತರಲಿ ಹೊಸತು ಹರುಷ
ಹೊಸೆದು ಬಾಳ ಯಾನಕೆ
ಒನಪು ಇರಲಿ ಬೆಸೆದು ಮನಸ
ಬಸಿದು ನೋವ ದೂರಕೆ  ||
ಹಳೆಯ ಕೊಳೆಯು ತೊಲಗಲಿಂದು
ಬೇವನಳಿಸಿ  ಬಾಳಲಿ
ಕಳೆಯು ಮೂಡಿ ಬರಲಿ ಮೊಗದಿ
ಸಿಹಿಯನುಣಿಸಿ ಬದುಕಲಿ  ||
ಸಹನೆಯೊರತೆ ನಿತ್ಯ ಹರಿದು
ಒಲವು ಮೂಡಿ ಅರಳಲಿ
ದ್ವೇಷ ರೋಷ ಕೋಪವಳಿದು
ಗೆಲುವು ಕೂಡಿ ನಲಿಯಲಿ  ||
ಸತ್ಯ ನಿಷ್ಠೆ ನ್ಯಾಯ ಪಥವು
ನಮಗೆ ದಾರಿ ತೋರಲಿ
ನಿತ್ಯ ಸ್ನೇಹವಿರಲು ಮತವು
ಚೆಲುವು ನಗೆಯ ಬೀರಲಿ   ||
ಬಡತನದ  ಶಾಪವಳಿದು
ಹಸಿವು  ದೂರವಾಗಲಿ
ಮುದಿತನಕೆ ಪ್ರೀತಿ ಒಲಿದು
ಬಾಳು ಸ್ವರ್ಗವೆನಿಸಲಿ    ||
* ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |

ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…

5 hours ago

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

8 hours ago

ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ

ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…

8 hours ago

ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಹೊಸರುಚಿ | ಗುಜ್ಜೆ ಸುಕ್ಕಾ

ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ ಚಿಕ್ಕ ದಾಗಿ ಕಟ್…

11 hours ago

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

1 day ago