ದೀಪಾವಳಿ | ಬೆಳಕು ಚೆಲ್ಲುವ ಹಬ್ಬ

Advertisement
Advertisement
ದೀಪಗಳ ಹಬ್ಬವಿದು ದೀಪಾವಳಿ ಮುಗ್ಧ ಮನಕಿದು ಸಂಭ್ರಮದ ತಾರಾವಳಿ ಸುತ್ತಲು ಬೆಳಗಿವೆ ಸಾಲಾಗಿ ಹಣತೆಗಳು ಹಬ್ಬದ ಸಡಗರ ಕಾಣಿಸುತಿದೆ ಮೇದಿನಿಯೊಳು ||
ಕವಿದ ಕತ್ತಲೆಯ ಜಾಡ್ಯವ ಕಳೆದು ಪಸರಿಸುತಿದೆ ಹರುಷದ ಹೊನಲ ನಗೆ ತನು ಮನ ತಣಿಸುವ ಒಡಲೊಳು ವಿಜೃಂಭಿಸುವ ಕಾಂತಿಯನ್ನೇ ತಂದಿದೆ ದೀಪಾವಳಿ ಇಳೆಗೆ| |
ದೀಪದಿಂದ ದೀಪವ ಬೆಳಗಿದಂತೆ ಬೆಳೆಯಲಿ ಜ್ಞಾನವೆಂಬ ಸಾಗರ ಅಜ್ಞಾನವು ನಶಿಸಿ ಅರಿಷಟ್ ವೈರಿಗಳೆಲ್ಲ ತೊಲಗಿ ದಿನ ದಿನವು ಏರಲಿ ಕೀರ್ತಿಯೆಂಬ ಶಿಖರ||
ಕೆಟ್ಟ ಗುಣಗಳ ಸುಟ್ಟು ಅರಿವೆಂಬ ದೀವಟಿಗೆಯ ಬೆಳಗಲು ಸಕಾಲವಿದು ಆಡಂಬರವಿಲ್ಲದೆ ಆಚರಣೆಯ ಮೂಲಕವೇ ಜಗಕ್ಕೆ ಸಾರವ ತಿಳಿಸುವ ಹಬ್ಬ ದೀಪಾವಳಿಯಿದು||
ಬರಹ:
ಅನ್ನಪೂರ್ಣ ಎನ್ ಕುತ್ತಾಜೆ
ಅನ್ನಪೂರ್ಣ ಎನ್.ಕೆ ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರುತ್ತಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರ ಕವನಗಳು ಪಾಂಚಜನ್ಯ ರೇಡಿಯೋ ಕೇಂದ್ರದಲ್ಲೂ ಪ್ರಸಾರವಾಗಿದೆ. ‘ಮೊದಲ ಹೆಜ್ಜೆ.. ಹೊಂಗನಸಿನೆಡೆಗೆ ‘ಇವರ ಮೊದಲ ಪ್ರಕಟಿತ ಕವನ ಸಂಕಲನ.

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ದೀಪಾವಳಿ | ಬೆಳಕು ಚೆಲ್ಲುವ ಹಬ್ಬ"

Leave a comment

Your email address will not be published.


*