ದೇಹದಾನಕ್ಕೆ ಹೆಸರು ನೋಂದಾಯಿಸಿದ ಪುತ್ತೂರು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ

 ಪುತ್ತೂರು ಸಮಾಜದ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಯೋರ್ವರು ತನ್ನ ಸ್ವ ಇಚ್ಚೆಯಿಂದ ದೇಹದಾನಕ್ಕೆ ಹೆಸರು ನೋಂದಾಯಿಸಿದ್ದರೆ.

Advertisement
Advertisement

ಪುತ್ತೂರು ತಾಲೂಕಿನ ಚಿಕ್ಕಮೂಡ್ನೂರಿನ ತಾರಿಗುಡ್ಡೆ ವಿಠಲ ಗೌಡ ಚಿಕ್ಕಪುತ್ತೂರುರವರ ಪತ್ನಿ ದೇವಮ್ಮ (58 ವ.) ಸ್ವ ಇಚ್ಛೆಯಿಂದ ಗಂಡ ಹಾಗೂ ಅವರ ಮೂವರು ಮಕ್ಕಳ ಒಪ್ಪಿಗೆಯ ಮೆರೆಗೆ ಡಾ.ಕೆ.ವಿ ಚಿದಾನಂದ ಮಾಲಿಕತ್ವದ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ವೀಲ್ ನಾಮೆ ಯಾನೆ ಮರಣ ಶಾಸನವನ್ನು ಮಾಡಿಸಿದ್ದಾರೆ.

Advertisement

ನಿಧನರಾದನಂತರ ಕೆಲವೇ ಗಂಟೆಗಳಲ್ಲಿ ಭಸ್ಮವಾಗುವ ದೇಹದಿಂದ ಏನೂ ಪ್ರಯೋಜನವಿಲ್ಲ ಆದರೆ ವಿದ್ಯಾರ್ಥಿಗಳಿಗಾದರೂ ಉಪಯೋಗ ಆಗಲಿ ಎನ್ನುವ ಒಳ್ಳೆಯ ಚಿಂತನೆಯ ಮೂಲಕ ದೇಹದಾನ ಮಾಡುವುದೆಂದು ಕೆಲವು ವರ್ಷಗಳ ಹಿಂದೆಯೇ ನಿರ್ಧರಿಸಿದೆ. ಆದರೆ ಹೇಗೆ ಮಾಡುವುದೇನ್ನುವ ಮಾಹಿತಿ ಇರಲಿಲ್ಲ . ಇತ್ತಿಚೆಗೆ ಪುತ್ತೂರಿನ ವೈದ್ಯರೊಬ್ಬರು ಕೆವಿಜಿ ಮೆಡಿಕಲ್ ಕಾಲೇಜು ಸಂಪರ್ಕಿಸುವಂತೆ ಹೇಳಿದರಿಂದ ನಾನೇ ಬಂದು ಮಾಹಿತಿ ಸಂಗ್ರಹಿಸಿ, ವೀಲು ನಾಮೆ ಮಾಡಿಸಿ ಕಾಲೇಜಿಗೂ ಕೊಟ್ಟಿದ್ದೇನೆ ಎನ್ನುತ್ತಾರೆ ದೇವಮ್ಮರವರು.

ಮರಣ ಹೊಂದಿದ 5 ಗಂಟೆಯ ಒಳಗಾಗಿ ದೇಹವನ್ನು ಮೆಡಿಕಲ್ ಕಾಲೇಜಿಗೆ ಒಪ್ಪಿಸಬೇಕು ಎನ್ನುವ ನಿಯಮವಿದೆ.

Advertisement

ದೇವಮ್ಮ ಅವರ ಯೋಚನೆ ಬಹಳಷ್ಟು ದೃಡ ನಿರ್ಧರವಾಗಿದ್ದು, ಅದರಿಂದಾಗಿ ನೂರಾರು ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ವೈದ್ಯರಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ದೇಹದಾನಕ್ಕೆ ಹೆಸರು ನೋಂದಾಯಿಸಿದ ಪುತ್ತೂರು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ"

Leave a comment

Your email address will not be published.


*