Advertisement
ಸುದ್ದಿಗಳು

ಅಡಿಕೆ ಹಾನಿಕಾರಕ ಎಂದ ಸಂಸದರ ಭೇಟಿ | ವಾಸ್ತವ ಮನವರಿಕೆ ಮಾಡಿದ ಅಡಿಕೆ ಬೆಳೆಗಾರರ ನಿಯೋಗ | ಹಳದಿ ಎಲೆರೋಗ ಸಂಶೋಧನೆಗೂ ಆದ್ಯತೆ |

Share

ಅಡಿಕೆ ಹಾನಿಕಾರಕ ಹೀಗಾಗಿ ಅಡಿಕೆ ನಿಷೇಧ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದ ಜಾರ್ಖಂಡ್‌ ಸಂಸದ ನಿಶಿಕಾಂತ್‌ ದುಬೆ ಅವರನ್ನು ಭೇಟಿಯಾದ ಅಡಿಕೆ ಬೆಳೆಗಾರರ ನಿಯೋಗವು ಅಡಿಕೆ ಹಾನಿಕಾರಕವಲ್ಲ, ಅಡಿಕೆಯಲ್ಲಿ ಔಷಧೀಯ ಗುಣಗಳು ಇವೆ ಎಂದು ಮನವರಿಕೆ ಮಾಡಿದ್ದಾರೆ.

Advertisement
Advertisement
Advertisement
Advertisement

ಅಡಿಕೆ ಬೆಳೆಗಾರರ ನಿಯೋಗವು ಎರಡು ದಿನಗಳಿಂದ ದೆಹಲಿಯಲ್ಲಿ ಅಡಿಕೆ ಬೆಳೆಗಾರರ ಹಿತಕಾಯುವ ವಿವಿಧ ಅಂಶಗಳ ಬಗ್ಗೆ ಸಂಸದರು ಹಾಗೂ ಸಚಿವರನ್ನು ಭೇಟಿ ಮಾಡಿದೆ. ಈ ಸಂದರ್ಭ ಅಡಿಕೆ ಹಾನಿಕಾರಕವಾಗಿದ್ದು ಹೀಗಾಗಿ ಅಡಿಕೆ ನಿಷೇಧ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದ ಜಾರ್ಖಂಡ್‌ ನ ಗೊಡ್ಡಾದ ಸಂಸದ ನಿಶಿಕಾಂತ್‌ ದುಬೆ ಅವರನ್ನು ಭೇಟಿಯಾಗಿ ಅಡಿಕೆಯ ಸಮಗ್ರ ಮಾಹಿತಿಯನ್ನು ನೀಡಿದರು. ಅಡಿಕೆಯಿಂದ ಆರೋಗ್ಯದ ಮೇಲೆ ಹಾನಿಕಾರಿಕ ಪರಿಣಾಮಗಳಿಲ್ಲ ಎಂಬ ವರದಿಗಳು ಇದೆ. ಅನೇಕ ಸಮಯಗಳಿಂದ ಅಡಿಕೆ ತಿನ್ನುವವರೂ ಇದ್ದಾರೆ, ಅಡಿಕೆಯಲ್ಲಿ ಔಷಧೀಯ ಗುಣಗಳು ಇವೆ ಎಂಬ ವರದಿಗಳ ಮೂಲಕ ಮನವರಿಕೆ ಮಾಡಿದರು.

Advertisement

ಇದೇ ವೇಳೆ ಅಡಿಕೆ ಕೃಷಿ ಸಚಿವ ನರೇಂದ್ರ ಸಿಂಗ್‌ ಥೋಮರ್‌, ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಪ್ರಹ್ಲಾದ್‌ ಜೋಶಿ , ಸ್ಮೃತಿ ಇರಾನಿ ಅವರನ್ನೊಳಗೊಂಡ ತಂಡದ ಜೊತೆ ಅಡಿಕೆಯ ವಿವಿಧ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದರು. ವಿಶೇಷವಾಗಿ ಸುಳ್ಯ ಸೇರಿದಂತೆ ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಅಡಿಕೆ ಹಳದಿ ಎಲೆರೋಗದ ಪರಿಹಾರ ಹಾಗೂ ಅಧ್ಯಯನದ ಬಗ್ಗೆಯೂ ಚರ್ಚೆಯಾಗಿದೆ. ಈ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಗಮನಹರಿಸುವಂತೆ ಅಡಿಕೆ ಬೆಳೆಗಾರರ ಹಾಗೂ ಸಹಕಾರಿ ಸಂಸ್ಥೆಗಳ ನಿಯೋಗ ಒತ್ತಾಯ ಮಾಡಿದೆ.

Advertisement

ಅಡಿಕೆ ಜಿಎಸ್‍ಟಿ ತೆರಿಗೆಯನ್ನು  ಎಪಿಎಂಸಿ ಶುಲ್ಕವನ್ನು ಕೂಡಾ ಅದರೊಂದಿಗೆ ವಿಲೀನಗೊಳಿಸಬೇಕು, ಆ ಮೂಲಕ ಕೃಷಿ ಉತ್ಪನ್ನಗಳನ್ನು ಸಂಘಟನಾ ಕ್ಷೇತ್ರದೊಳಗೆ ತಂದು ಕೃಷಿಕರಿಗೆ ಅವರ ಉತ್ಪನ್ನಗಳನ್ನು ಸಹಕಾರಿ ಸಂಸ್ಥೆಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಸಹಿತ ಹಲವು ಬೇಡಿಕೆಗಳನ್ನು ಅಡಿಕೆ ಬೆಳೆಗಾರರ ನಿಯೋಗ, ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಗಳು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,ಗೃಹಸಚಿವ ಅಮಿತ್ ಶಾ ಸಹಿತ ಹಲವರಿಗೂ ಮನವಿ ಸಲ್ಲಿಸಿದೆ. ಅಡಿಕೆ ಅಕ್ರಮ ಆಮದು ತಡೆಯಲು ಕ್ರಮ ಆಗಬೇಕು ಹಾಗೂ ಆಮದು ಸುಂಕ ಹೆಚ್ಚಿಸಬೇಕು ಎಂದು ಉಲ್ಲೇಖಿಸಲಾಗಿದೆ.

ನಿಯೋಗದಲ್ಲಿ ಅಡಿಕೆ ಮಹಾಮಂಡಳ, ಕ್ಯಾಂಪ್ಕೋ, ರಾಜ್ಯ ಅಡಿಕೆ ಟಾಸ್ಕ್‌ಫೋರ್ಸ್‌ ಸೇರಿದಂತೆ ಸಂಘಟನೆಗಳು ಭಾಗಿಯಾಗಿದ್ದವು.

Advertisement

ಈ ಸಂದರ್ಭ ಅಡಿಕೆ ಮಹಾಮಂಡಳ ಅಧ್ಯಕ್ಷ ಎಚ್‌ ಎಸ್‌ ಮಂಜಪ್ಪ, ಕ್ಯಾಂಪ್ಕೋ ನಿರ್ದೇಶಕ , ಮಾಜಿ ಅಧ್ಯಕ್ಷ ಎಸ್‌ ಆರ್‌ ಸತೀಶ್ಚಂದ್ರ, ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಪ್ರಸಾದ್‌,  ಪ್ರಮುಖರಾದ ಶಿವಕುಮಾರ್‌ ಚನ್ನಗಿರಿ, ಯಡಗೆರೆ ಸುಬ್ರಹ್ಮಣ್ಯ, ಡಾ.ಚೌಡಪ್ಪ ಮೊದಲಾದವರು ಇದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 27-02-2025 | ಮಳೆಯ ಸಾಧ್ಯತೆ ಕ್ಷೀಣ | ಒಣ ಹವೆ ಮುಂದುವರಿಕೆ | ಕೆಲವು ಕಡೆ ತುಂತುರು ಮಳೆ ನಿರೀಕ್ಷೆ |

ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.

10 hours ago

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ | ಅಹೋ ರಾತ್ರಿ ಶಿವ ಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ

ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…

20 hours ago

ಈಶಾ ಫೌಂಡೇಷನ್ ನಿಂದ ಶಿವರಾತ್ರಿ | ಆತ್ಮ ಜಾಗೃತಿಯ ರಾತ್ರಿ, ಆತ್ಮಕ್ಕೆ ಮೂಲ ಆಧಾರ

ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…

21 hours ago

ಶಿವರಾತ್ರಿ | ನೇಪಾಳದ ಪಶುಪತಿನಾಥನಿಗೆ ವಿಶೇಷ ಪೂಜೆ- ಲಕ್ಷಾಂತರ ಭಕ್ತಾದಿಗಳಿಂದ ದರ್ಶನ

ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…

21 hours ago

ಮಹಾಕುಂಭದಿಂದ ನಿರ್ಗಮಿಸಲು ವಿಶೇಷ ರೈಲು ಸಂಚಾರ | ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲು ಓಡಾಟ

ರೈಲ್ವೆ ಇಲಾಖೆ ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

21 hours ago

ಈ ವರ್ಷ ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಡಿಕೆ ಆಮದು..?

ಮ್ಯಾನ್ಮಾರ್‌ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ…

21 hours ago