ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ದಣಿವಾರಿಸಲು ಬಹುತೇಕ ಮಂದಿಯ ಆಯ್ಕೆ ಎಳನೀರು. ಆರೋಗ್ಯಕರ ಪೇಯ ಎಂಬ ಹೆಗ್ಗಳಿಕೆ ಹೊಂದಿರುವ ಎಳನೀರು ನಿರ್ಲಕ್ಷಿಸುವವರೇ ವಿರಳ. ಆದರೆ ಈ ಎಳನೀರಿನ ದರ ಗಗನಕ್ಕೇರಿದೆ.
Advertisement
ಹೊಸದಿಲ್ಲಿ ಸೇರಿದಂತೆ ನಾನಾ ಕಡೆ ಮೈಸೂರು, ತಮಿಳುನಾಡು, ಕೇರಳದಿಂದ ಸೀಯಾಳವನ್ನು ಲಾರಿಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಆದರೆ ದೇಶದಲ್ಲೇ ಅತೀ ಹೆಚ್ಚು ತಾಪಮಾನವಿರುವ ಹೊಸದಿಲ್ಲಿಯಲ್ಲಿ ಸೀಯಾಳಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ದರವೂ 100 ರೂ. ದಾಟಿದೆ. ಇದರಿಂದ ಸೀಯಾಳ ಮಾರಾಟ ಮಾಡುವ ಮಧ್ಯವರ್ತಿಗಳು ದಿಲ್ಲಿ, ಪುಣೆ ಕಡೆಗೆ ಎಳನೀರು ಮಾರಾಟಕ್ಕೆ ಒಲವು ತೋರುತ್ತಿದ್ದಾರೆ.
Advertisement
ಈವರೆಗೆ 35 ರೂ. ಇದ್ದ ಸೀಯಾಳ ದರ ವಾರದ ಆಸುಪಾಸಿನಲ್ಲಿ 45-50 ರೂ.ಗೆ ಜಿಗಿತವಾಗಿದೆ. ಇದರಿಂದ ಮಾರಾಟಗಾರರು ಕೂಡ ಹೈರಾಣಾಗಿದ್ದಾರೆ. ಕೆಂದಾಳೆ ಸೀಯಾಳ ದರ 40ರಿಂದ 55 ರೂ., ಕರಾವಳಿ ಸೀಯಾಳ ದರ 40ರಿಂದ 55 ರೂ.ಗೆ ಏರಿಕೆಯಾಗಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement