ರೈತರು(Farmer) ಬೆಳೆಯುವ ಪ್ರತಿ ಕ್ವಿಂಟಾಲ್ ರಾಗಿಗೆ(Ragi) ಸರಕಾರ(Govt) 5000 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು(Support Price Fixation) ಎಂದು ಕರ್ನಾಟಕ ರಾಜ್ಯ ಕೆಂಪೇಗೌಡ ರೈತಸಂಘದ ರಾಜ್ಯ ಉಪಾಧ್ಯಕ್ಷ ಜುಟ್ನಹಳ್ಳಿ ಆರ್.ದಿನೇಶ್ ಒತ್ತಾಯಿಸಿದರು. ಕಳೆದ ಬಾರಿ ಪ್ರತಿ ಕ್ವಿಂಟಾಲ್ ರಾಗಿಗೆ 3846 ರೂ ಬೆಂಬಲ ಬೆಲೆ ನೀಡಿ ಖರೀದಿಸಿತು ಈ ಬಾರಿ 4290 ರೂ ಸರಕಾರ ಬೆಲೆ ನಿಗದಿಪಡಿಸಿದೆ, ಸರಕಾರ ನಿಗದಿಪಡಿಸಿರುವ ಈ ಹಣದಿಂದ ಉಳುಮೆ ಮಾಡಲು ಸಾಧ್ಯವಾಗುವುದಿಲ್ಲ, ರಸಗೊಬ್ಬರ(Fertilizer), ಉಳುಮೆ ಹಾಗೂ ಬಿತ್ತನೆ ಬೀಜ(Seeding) ದುಬಾರಿಯಾಗಿದೆ ಒಂದು ಕ್ವಿಂಟಾಲ್ ರಾಗಿ ಬೆಳೆಯಲು 6 ರಿಂದ 7 ಸಾವಿರ ಖರ್ಚಾಗುತ್ತದೆ. ಹೀಗಿರುವಾಗ ರೈತ ರಾಗಿ ಬೆಳೆಯುವುದಾದರೂ ಹೇಗೆ ಅನ್ನೋದು ದಿನೇಶ ಅವರ ವಾದ.
ಕೂಡಲೇ ಸರಕಾರ ಪ್ರತಿ ಕ್ವಿಂಟಾಲ್ ರಾಗಿಗೆ 5 ಸಾವಿರ ನಿಗದಿಪಡಿಸಿ ಆದೇಶಿಸಬೇಕು ಇಲ್ಲದಿದ್ದರೆ ರಾಜ್ಯ ವ್ಯಾಪಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಮಾಗಡಿ ತಾಲೂಕು ರಾಗಿ ಕಣಜವಾಗಿದ್ದು ರಾಗಿ ಬೆಳೆಯುವುದರಲ್ಲಿ ಪ್ರಸಿದ್ದಿಹೊಂದಿದೆ ತಾಲೂಕಿನಲ್ಲಿ ಬೆಳೆಯುವಷ್ಟು ರಾಗಿ ಹಾಗೂ ರಾಗಿ ಬೆಳೆಯ ಇಳುವರಿ ರಾಜ್ಯದ ಯಾವುದೇ ಭಾಗದಲ್ಲೂ ಇಲ್ಲ ಹೀಗಿರುವಾಗ ರಾಗಿ ಬೆಳೆಗೆ ಪ್ರೋತ್ಸಾಹ, ಬೆಂಬಲ ನೀಡುವುದು ಸರಕಾರದ ಕರ್ತವ್ಯವಾಗಿದೆ. ಕಳೆದ ಬಾರಿ ಮಳೆ ಇಲ್ಲದೆ ರಾಗಿ ಬೆಳೆ ಇಲ್ಲದಂತಾಗಿ ರೈತ ಸಂಕಷ್ಟದಲ್ಲಿದ್ದಾನೆ. ರೈತರಿಗೆ ವೈಜ್ಞಾನಿಕ ಪರಿಹಾರವೂ ನೀಡಿಲ್ಲ ಕಳೆದ ಬಾರಿ ಬೆಂಬಲ ಬೆಲೆಗೆ ನೀಡಿದ ಹಣ ಮತ್ತಷ್ಟು ರೈತರಿಗೆ ಸರಕಾರ ನೀಡಿಲ್ಲ ಶೀಘ್ರವೇ ಈ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಮಳೆ ಕೊರತೆಯಿಂದ ರಾಗಿ, ಭತ್ತ, ಅಡಿಕೆ, ಮಾವು, ತೊಗರಿ ಸೇರಿದಂತೆ ತೋಟಗಾರಿಕೆ ಬೆಳೆಗಳು ನಷ್ಟವಾದ ಸಂದರ್ಭದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಸರಕಾರ ಇಲ್ಲಿಯವರೆಗೂ ವೈಜ್ಞಾನಿಕ ಪರಿಹಾರ ನೀಡಿಲ್ಲ ಈ ಸಂಬಂಧ ರೈತರ ಪ್ರತಿ ಬೆಳೆಗಳಿಗೂ ಸರಕಾರವೇ ವಿಮೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…
ಬೆಂಗಳೂರಿನಲ್ಲಿ ಈ ಹಿಂದೆ ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…
ರಾಜ್ಯದ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆಯಿಂದ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ…
ವಿದ್ಯುತ್ ಸರಬರಾಜು ಕಂಪನಿಗಳಿಗೆ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಾಗಿದ್ದ …