Advertisement
MIRROR FOCUS

ಕೇಂದ್ರ ಸರ್ಕಾರದ ಸಂಸ್ಥೆ ಸಿಪಿಸಿಆರ್‌ಐ | ಕಾಸರಗೋಡಿನ ತೆಂಗು ಸಂಶೋಧನಾ ಕೇಂದ್ರಕ್ಕೆ ದಾರಿ ಯಾವುದು…? | ಮಂಗಳೂರಿನಿಂದ ಹೋದರೆ 3 ಕಿಮೀ ದೂರ…! | ಸಚಿವರು, ಶಾಸಕರು ಏಕೆ ಮೌನ |

Share

ಕೇಂದ್ರ ಸರ್ಕಾರದ ಸಂಸ್ಥೆ ICAR(Central Plantation Crops Research Institute). ದೇಶದ ವಿವಿದೆಡೆ ಕೃಷಿ ಸಂಶೋಧನೆಗಳನ್ನು ಈ ಸಂಸ್ಥೆ ನಡೆಸುತ್ತದೆ. ತೆಂಗು ಸಂಶೋಧನೆಗೆ ದೇಶದ ಏಕೈಕ ಸಂಸ್ಥೆ ಕೇರಳದ ಕಾಸರಗೋಡಿನಲ್ಲಿದೆ. ವಿವಿಧ ಪಡೆಯ ರೈತರು ಈ ಸಂಸ್ಥೆಗೆ ಈಗ ತೆರಳುತ್ತಿದ್ದಾರೆ. ಆದರೆ ಮಂಗಳೂರಿನಿಂದ ತೆರಳುವ ರೈತರು 3 ಕಿಮೀ ದೂರವಾಗುತ್ತದೆ.ಕಾರಣ ಹೆದ್ದಾರಿ ಅಗಲೀಕರಣವಾಗುತ್ತಿದೆ. ಹಾಗಿದ್ದರೂ ಸುಮಾರು 100 ವರ್ಷದ ಸಂಸ್ಥೆಯೊಂದಕ್ಕೆ ತೆರಳುವುದಕ್ಕೆ ಅಂಡರ್‌ಪಾಸ್‌ ಕೂಡಾ ಮಾಡಿಲ್ಲ…!. ಹಾಗಿದ್ದರೂ ಸಚಿವರು, ಶಾಸಕರು ಮೌನವಾಗಿದ್ದಾರೆ…! 

Advertisement
Advertisement
ಹಿಂದೆ ಹಾಗೂ ಈಗಿನ ಸ್ಥಿತಿ

ಕಾಸರಗೋಡಿನಲ್ಲಿ  ತೆಂಗು ಸಂಶೋಧನಾ ಕೇಂದ್ರವು  1916 ರಲ್ಲಿ ಆಗಿನ ಮದ್ರಾಸ್ ಸರ್ಕಾರ ಸ್ಥಾಪಿಸಿತು.ನಂತರ ಇದನ್ನು 1948 ರಲ್ಲಿ ಭಾರತೀಯ ಕೇಂದ್ರ ತೆಂಗು ಸಮಿತಿಯು ಸ್ವಾಧೀನಪಡಿಸಿಕೊಂಡಿತು. ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್  1970 ರಲ್ಲಿ ಸ್ಥಾಪಿಸಲಾಯಿತು. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್  ಅಡಿಯಲ್ಲಿ ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆಯಲ್ಲಿ ಕೃಷಿ ಸಂಶೋಧನಾ ಸಂಸ್ಥೆಗಳು ಇವೆ. ಈ ಸಂಸ್ಥೆ ಸ್ಥಾಪನೆಯ ವೇಳೆ ತೆಂಗು, ಅಡಿಕೆ, ಕೋಕೋ, ಗೋಡಂಬಿ, ಎಣ್ಣೆ ತಾಳೆ ಮತ್ತು ಸಾಂಬಾರ ಪದಾರ್ಥಗಳ ಮೇಲೆ ಸಂಶೋಧನೆ ಕೈಗೊಳ್ಳಲು ಸಂಸ್ಥೆಯು ಆದೇಶವನ್ನು ಹೊಂದಿತ್ತು. ಸಂಸ್ಥೆಯ ಪ್ರಸ್ತುತ  ತೆಂಗು, ಅಡಿಕೆ, ತಾಳೆ ಮತ್ತು ಕೋಕೋ ಕುರಿತು ಸಂಶೋಧನೆ ನಡೆಸುತ್ತಿದೆ. ಈಗ ಇಲ್ಲಿಯ ವಿಜ್ಞಾನಿಗಳೂ ರೈತ ಸ್ನೇಹಿಯಾಗಿರುವುದರಿಂದ ಅನೇಕ ರೈತರು ಭೇಟಿ ನೀಡಿ ಉತ್ತಮ ತಳಿಯನ್ನೂ ಪಡೆಯುತ್ತಾರೆ. ಆದರೆ ಈಗ  ರಾಷ್ಟ್ರೀಯ ಹೆದ್ದಾರಿ ಅಗಲೀಕರಣ  ಕಾರ್ಯ ನಡೆಯುತ್ತಿದೆ.  ಸುಮಾರು 100 ವರ್ಷದ ಸಂಸ್ಥೆ, ರೈತರು ಭೇಟಿ ನೀಡುವ ಸಂಸ್ಥೆಗೆ ಒಂದು ಅಂಡರ್‌ಪಾಸ್‌ ಯೋಜನೆ ಮಾಡಲು ಮಾತ್ರಾ ಸಾಧ್ಯವಾಗಿಲ್ಲ. ಎಲ್ಲೆಲ್ಲಿಗೋ ರಸ್ತೆ ಅಗೆದು ದಾರಿ ಮಾಡಿ ಕೊಡಲಾಗುತ್ತದೆ, ರೈತರು ಆಗಮಿಸುವ ಸಂಸ್ಥೆಯೊಂದಕ್ಕೆ ಅಂಡರ್‌ಪಾಸ್‌ ಮಾಡಿಸಲು ಮಾತ್ರಾ ರಾಜಕಾರಣಿಗಳಿಗೆ ಇದುವರೆಗೂ ಸಾಧ್ಯವಾಗಿಲ್ಲ. ಈ ಬಗ್ಗೆ ತಕ್ಷಣವೇ ಗಮನಹರಿಸಬೇಕಿದೆ.

Advertisement
ಸಿಪಿಸಿಆರ್‌ಐ-ಇಂದಿನ ಸ್ಥಿತಿ

 

ಸದ್ಯ ಮಂಗಳೂರಿನಿಂದ ತೆರಳುವ ಕೃಷಿಕರಿಗೆ ಸಮಸ್ಯೆಯಾಗಿದೆ. ಸುಮಾರು 3 ಕಿಮೀ ದೂರ ತೆರಳಿ ಮತ್ತೆ ಹಿಂತಿರುಗಿ ಬರಬೇಕಾದ ಪರಿಸ್ಥಿತಿ ಮುಂದೆ ಎದುರಾಗಲಿದೆ. ಇದಕ್ಕಾಗಿ ಈಗಲೇ ಸರ್ಕಾರ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ವಿಶೇಷವಾಗಿ ಕರ್ನಾಟಕದಿಂದ ಆಗಮಿಸುವ ಕೃಷಿಕರಿಗೆ ಸಮಸ್ಯೆಯಾಗುತ್ತದೆ. ಶತಮಾನದ ಸಂಸ್ಥೆಗೆ ಕೃಷಿಕರು ಆಗಮಿಸುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ರೈತ ಪರವಾದ ವಿಜ್ಞಾನಿಗಳು, ಹೊಸಹೊಸ ಆವಿಷ್ಕಾರಗಳು ನಡೆಯುತ್ತಿರುತ್ತದೆ. ಹೀಗಾಗಿ ಸಹಜವಾಗಿಯೇ ಯುವ ಕೃಷಿಕರೂ ಇಂತಹ ಸಂಸ್ಥೆಗೆ ಭೇಟಿ ನೀಡುತ್ತಾರೆ. ಈ ಕಾರಣದಿಂದ ಈ ಸಂಸ್ಥೆಗೆ ತೆರಳಲು ಸುತ್ತು ಬಳಸು ದಾರಿಯಲ್ಲ, ನೇರವಾದ ದಾರಿಯ ಅಗತ್ಯವಿದೆ. ತಕ್ಷಣವೇ ಸಂಬಂಧಿತರು ಗಮನಹರಿಸಬೇಕಿದೆ.

Advertisement

The country’s only one institute for coconut research is at Kasaragod in Kerala. Farmers from different Groups, States are now coming to this institution. But farmers traveling from Mangalore will have to travel extra 3 km long,  because the highway is being widened. they have not even made an underpass to move to a nearly 100-year-old institution…!.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

54 mins ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

56 mins ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

1 hour ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

1 hour ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

1 hour ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

2 hours ago