Advertisement
MIRROR FOCUS

ಮಳೆನೀರು ಕೊಯ್ಲು ಅಳವಡಿಕೆಯ ಬಗ್ಗೆ ಜನಜಾಗೃತಿ | ವರುಣ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಡಿಸಿಎಂ ಚಾಲನೆ

Share

ಬೆಂಗಳೂರು(Bengaluru) ನಗರದಲ್ಲಿ ನೀರಿನ ಸಮಸ್ಯೆಯ(Water problem) ಪರಿಹಾರಕ್ಕೆ ಮಳೆನೀರು ಕೊಯ್ಲು(Water harvesting) ಪದ್ದತಿಯ ಸಮರ್ಪಕ ಅಳವಡಿಕೆ ಬಹಳ ಪ್ರಾಮುಖ್ಯವಾಗಿದೆ. ಈ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಡಿ.ಕೆ ಶಿವಕುಮಾರ್‌(D K Shivakumar) ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ವಿಧಾನಸೌಧದ ಪೂರ್ವ ಭಾಗದಲ್ಲಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ, ಯುನೈಟೆಡ್‌ ನೇಷನ್ಸ್‌ – ಇನೋವೇಷನ್ಸ್‌ ಪ್ರಾಜೆಕ್ಟ್‌ ಫಾರ್‌ ವಾಟರ್‌ ಸೆಕ್ಯೂರಿಟಿ ಇನ್‌ ಬೆಂಗಳೂರು ಸಿಟಿ ಯೋಜನೆಗೆ, ಮಳೆ ನೀರು ಕೊಯ್ಲು ಜಾಗೃತಿ ಹಾಗೂ ಮನೆ ಬಾಗಿಲಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವರ್ಷ ಬೆಂಗಳೂರು ನಗರ ತೀವ್ರ ನೀರಿನ ಅಭಾವ ಎದುರಿಸಿತು. ಈ ಸಂಧರ್ಭದಲ್ಲಿ ಒತ್ತಡವನ್ನು ಸಹಿಸಿಕೊಂಡು ಬೆಂಗಳೂರು ಜಲಮಂಡಳಿಯ ಎಲ್ಲರೂ ಹಗಲಿರುಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಸರಕಾರಕ್ಕೆ ಯಾವುದೇ ಮುಜುಗರವಾಗದಂಥೆ ಪರಿಸ್ಥಿತಿ ನಿಭಾಯಿಸಿದ್ದಾರೆ. ಇದಕ್ಕೆ ಸರಕಾರದ ಪರವಾಗಿ ಜಲಮಂಡಳೀಯ ಎಲ್ಲಾ ಸಿಬ್ಬಂದಿಗಳೂ, ನೌಕರರರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದರಲ್ಲೂ ಚುನಾವಣೆಯ ಸಂಧರ್ಭದಲ್ಲಿ ಯಾವುದೇ ತೊಡಕಿಲ್ಲದೇ ಪರಿಸ್ಥಿತಿ ನಿರ್ವಹಣೆ ಶ್ಲಾಘನೀಯ ಎಂದರು.

ಯುನೈಟೆಡ್‌ ನೇಷನ್ಸ್‌ – ಇನೋವೇಷನ್ಸ್‌ ಪ್ರಾಜೆಕ್ಟ್‌ ಫಾರ್‌ ವಾಟರ್‌ ಸೆಕ್ಯೂರಿಟಿ ಇನ್‌ ಬೆಂಗಳೂರು ಸಿಟಿ:
ಬೆಂಗಳೂರು ನಗರದಲ್ಲಿ ಜಲಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿರುವ ಸುಸ್ಥಿರ ಯೋಜನೆಗಳ ಬಗ್ಗೆ ಯುನೈಟೆಡ್‌ ನೇಷನ್ಸ್‌ ಕ್ಲೈಮೇಟ್‌ ಚೇಂಜ್‌ ಸಂಸ್ಥೆಯು ಪ್ರಶಂಸಿದೆ. ಅದರ ಜೊತೆಯಲ್ಲಿಯೇ, ಇನೋವೇಷನ್ಸ್‌ ಪ್ರಾಜೆಕ್ಟ್‌ ಫಾರ್‌ ವಾಟರ್‌ ಸೆಕ್ಯೂರಿಟಿ ಇನ್‌ ಬೆಂಗಳೂರು ಸಿಟಿ ಯೋಜನೆಯ ಅನುಷ್ಟಾನಕ್ಕೂ ಕೈಜೋಡಿಸಲು ಮುಂದಾಗಿದೆ. ಸಮಪರ್ಕ ನೀರು ನಿರ್ವಹಣೆ, ಮಳೆ ನೀರು ಕೊಯ್ಲು ಪದ್ದತಿಯ ಅಳವಡಿಕೆ, ಶುದ್ದ ಸಂಸ್ಕರಿಸಿದ ನೀರನ್ನ ಕೆರೆಗಳಿಗೆ ತುಂಬಿಸುವುದು, ಆಧುನಿಕ ತಂತ್ರಜ್ಞಾನಗಳ ಮೂಲಕ ಎಕೋ ಫ್ರೇಂಡ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಉತ್ತೇಜಿಸುವುದು. ಅಂತರ್ಜಲ ಸಮಪರ್ಕ ನಿರ್ವಹಣೆಗಾಗಿ ಆಧುನಿಕ ತಂತ್ರಜ್ಞಾನಗಳ ಬಳಕೆ, ನೂತನ ಆದಾಯ ಮೂಲಗಳನ್ನ ಪ್ರಾರಂಭಿಸುವ ಬಗ್ಗೆ ಸಮಪರ್ಕವಾದ ಯೋಜನೆ ಇದಾಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು.

ಮಳೆನೀರು ಕೊಯ್ಲು ಅಳವಡಿಕೆಯ ಬಗ್ಗೆ ಜನಜಾಗೃತಿ – ವರುಣ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ: ಕೇವಲ 1200 ಚದರ್ ಅಡಿ ವ್ಯಾಸದ ಕಟ್ಟಡದಿಂದ ನಾವು ಪ್ರತಿವರ್ಷ ಸುಮಾರು 1 ಲಕ್ಷ ಲೀಟರ್‌ನಷ್ಟು ನೀರನ್ನು ಸಂಗ್ರಹಿಸಬಹುದಾಗಿದೆ. ಇದು ಒಂದು ಕುಟುಂಬ ಸುಮಾರು 7 ತಿಂಗಳುಗಳ ಕಾಲ ಬಳಸಬಹುದಾಗಿದೆ. ನಗರದ ಬಹುಪಾಲು ಜನರು ಅಂತರ್ಜಲದ ಮೇಲೆ ಅವಲಂಬಿತರಾಗಿದ್ದು, ಸಮರ್ಪಕವಾಗಿ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಬಿರು ಬೇಸಿಗೆಯಲ್ಲೂ ನೀರಿನ ಕೊರತೆ ಆಗದಂತೆ ನಿಭಾಯಿಸಬಹುದಾಗಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಇದನ್ನ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ ಮಳೆ ನೀರು ಇಂಗುಗುಂಡಿಗಳನ್ನು ವೈಜ್ಞಾನಿಕವಾಗಿ ಅಳವಡಿಸುವ ಕುಶಲ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರುದ್ಯೋಗಿ ಯುವ ಜನರಿಗೆ ಉತ್ತಮ ವ್ಯವಹಾರ ಪ್ರಾರಂಭಿಸಲು ಅನುವು ಮಾಡುವ ನಿಟ್ಟಿನಲ್ಲಿ ಜಲಮಂಡಳಿ ವತಿಯಿಂದ 1000 ವರುಣಮಿತ್ರರಿಗೆ ತರಬೇತಿ ನೀಡಲು ಚಿಂತಿಸಲಾಗಿದೆ ಎಂದು ಹೇಳಿದರು.

ಮನೆಬಾಗಿಲಿಗೆ ತೆರಳಿ ಕಾವೇರಿ ಸಂಪರ್ಕ: ಕಾವೇರಿ 5 ನೇ ಹಂತದ ಕಾಮಗಾರಿಗಳೂ ಪೂರ್ಣಗೊಂಡಿವೆ, ನಗರದ ಹೊರಭಾಗದಲ್ಲಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ನೀಡುವ ಕಾರ್ಯಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು. ಇಂದು ಈ ಪ್ರದೇಶಗಳಲ್ಲಿ ಸಂಪರ್ಕ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಜನರ ಮನೆಬಾಗಿಲಿಗೆ ತೆರಳಿ ಸಂಪರ್ಕ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ

ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…

3 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…

12 hours ago

ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು

ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…

13 hours ago

ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ

ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…

13 hours ago

ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ

ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ.…

21 hours ago

2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ

2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…

1 day ago